ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಸ್‌ ಲಿನ್ ಸಿಕ್ಸ್ ಚಚ್ಚಿದರೆ ಆಸ್ಟ್ರೇಲಿಯಾ ಕಾಡ್ಗಿಚ್ಚು ಸಂತ್ರಸ್ತರಿಗೆ ಹಣ ದಾನ!

Chris Lynn to donate 250 dollars to Australia bushfire victims for every six he hits in BBL

ಸಿಡ್ನಿ, ಜನವರಿ 3: ಆಸ್ಟ್ರೇಲಿಯಾದಲ್ಲಿ ಹಬ್ಬುತ್ತಿರುವ ಕಾಡ್ಗಿಚ್ಚಿನಿಂದ ಸಂಕಷ್ಟಕ್ಕೀಡಾಗಿರುವ ಜನರಿಗೆ ನೆರವೀಯಲು ಆಸೀಸ್‌ ಟೆನಿಸ್ ಆಟಗಾರರು ಮತ್ತು ಕ್ರಿಕೆಟಿಗರು ಮುಂದಾಗುತ್ತಿದ್ದಾರೆ. ಈ ನಡುವೆ ಆಸೀಸ್ ಟೆನಿಸ್ ಪ್ಲೇಯರ್ ನಿಕ್ ಕಿರ್ಗಿಸ್ ಮತ್ತು ಕ್ರಿಕೆಟಿಗ ಕ್ರಿಸ್‌ ಲಿನ್ ವಿಶೇಷ ಘೋಷಣೆ ಮಾಡಿದ್ದಾರೆ.

2020ರಲ್ಲಿ ಟೀಮ್ ಇಂಡಿಯಾ ಪಾಲ್ಗೊಳ್ಳುವ ಎಲ್ಲಾ ಸರಣಿಗಳ ವೇಳಾಪಟ್ಟಿ2020ರಲ್ಲಿ ಟೀಮ್ ಇಂಡಿಯಾ ಪಾಲ್ಗೊಳ್ಳುವ ಎಲ್ಲಾ ಸರಣಿಗಳ ವೇಳಾಪಟ್ಟಿ

ಬ್ಯಾಡ್‌ಬಾಯ್ ಎಂದು ಗುರುತಿಸಿಕೊಂಡಿರುವ ಟೆನಿಸ್ ಆಟಗಾರ ಕಿರ್ಗಿಸ್, ಆಸ್ಟ್ರೇಲಿಯಾದಾದ್ಯಂತ ಈ ಬೇಸಗೆಯಲ್ಲಿ ನಡೆಯುವ ಟೆನಿಸ್ ಟೂರ್ನಿಗಳ ವೇಳೆ ಮಾಡುವ ಪ್ರತೀ ಏಸ್‌ಗೆ (ಸರ್ವ್‌) ತಲಾ 140 ಡಾಲರ್‌ (ಸುಮಾರು 10,039 ರೂ.) ಹಣವನ್ನು ಕಾಡ್ಗಿಚ್ಚು ಸಂಸ್ತ್ರಸ್ತರಿಗೆ ನೀಡುವುದಾಗಿ ಘೋಷಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ದಶಕದ ತಂಡ ಹೇಗಿದೆ ಗೊತ್ತಾ!?ರಾಯಲ್ ಚಾಲೆಂಜರ್ಸ್ ಬೆಂಗಳೂರು ದಶಕದ ತಂಡ ಹೇಗಿದೆ ಗೊತ್ತಾ!?

ಕ್ರಿಕೆಟಿಗ ಕ್ರಿಸ್‌ ಲಿನ್ ಕೂಡ ಇಂಥದ್ದೇ ಘೋಷಣೆಗಾಗಿ ಕ್ರಿಕೆಟ್‌ ಅಭಿಮಾನಿಗಳ ಮನ ಗೆದ್ದಿದ್ದಾರೆ. ಬಿಗ್‌ ಬ್ಯಾಷ್‌ ಲೀಗ್‌ನಲ್ಲಿ ತಾನು ಬಾರಿಸುವ ಪ್ರತೀ ಸಿಕ್ಸ್‌ಗೂ ತಲಾ 250 ಡಾಲರ್‌ ( ಸುಮಾರು 17,928 ರೂ.) ಹಣವನ್ನು ಸಂಸ್ತ್ರಸ್ತರಿಗೆ ದಾನಮಾಡುವುದಾಗಿ ಲಿನ್ ಹೇಳಿಕೊಂಡಿದ್ದಾರೆ.

ಕಾಡ್ಗಿಚ್ಚಿನಿಂದಾಗಿ ಆಸ್ಟ್ರೇಲಿಯಾದಲ್ಲಿ 18ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸ್ಥಳಾಂತರಿಸಲಾಗಿದೆ. ಅಪಾರ ಸಂಖ್ಯೆಯ ಪ್ರಾಣಿಗಳೂ ಸಾವನ್ನಪ್ಪಿರುವುದು ವರದಿಯಾಗಿದೆ. ಕಾಡ್ಗಿಚ್ಚು ಆವರಿಸುತ್ತಿರುವ ದೃಶ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ ಕ್ರಿಕೆಟಿಗ ಡೇವಿಡ್ ವಾರ್ನರ್ ಕೂಡ ನೋವು ತೋರಿಕೊಂಡಿದ್ದರು.

Story first published: Friday, January 3, 2020, 12:46 [IST]
Other articles published on Jan 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X