ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಶತಕ ಬಾರಿಸಿದ ಇಬ್ಬರೇ ನಾಯಕರಿವರು!

Clive Lloyd and Ricky Ponting: Two captains who scored centuries in World Cup final

ಬೆಂಗಳೂರು, ಮೇ 27: ಐಸಿಸಿ ಕ್ರಿಕೆಟ್ ವಿಶ್ವಕಪ್ ಇವತ್ತಿಗೆ (ಮೇ 27) ಮೂರೇ ದಿನಗಳಲ್ಲಿ ಪ್ರಾರಂಭಗೊಳ್ಳುವುದರಲ್ಲಿದೆ. 1975ರಿಂದ ಆರಂಭಗೊಂಡ ಪ್ರತಿಷ್ಠಿತ ವಿಶ್ವಕಪ್ ಈ ವರೆಗೆ ಇಟ್ಟು 11 ಆವೃತ್ತಿಗಳನ್ನು ಕಂಡಿದೆ. 2019ರ ಈ ವಿಶ್ವಕಪ್‌ ಟೂರ್ನಿ 12ನೇ ಆವೃತ್ತಿಯದ್ದು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ಅಪೂರ್ವ ಸಾಧನೆಗೆ ಗಮನ ಸೆಳೆದ ಅನೇಕ ಬ್ಯಾಟ್ಸ್ಮನ್‌ಗಳಿದ್ದಾರೆ. ಸಚಿನ್ ತೆಂಡೂಲ್ಕರ್, ವಿವಿಯನ್ ರಿಚರ್ಡ್ಸ್, ಜಾವೆದ್ ಮಿಯಾಂದಾದ್ ಇವರೆಲ್ಲ ವಿಶ್ವಕಪ್ ಸಾಧನೆಗಾಗಿ ಗುರುತಿಸಿಕೊಂಡವರು. ಆದರೆ ವಿಶ್ವಕಪ್‌ ಫೈನಲ್‌ನಲ್ಲಿ ನಾಯಕನಾಗಿದ್ದುಕೊಂಡು ಶತಕ ಬಾರಿಸಿದ ದಾಖಲೆ ಇರೋದು ಇಬ್ಬರೇ ಇಬ್ಬರ ಹೆಸರಿನಲ್ಲಿ.

ಭಾರತ ವಿಶ್ವಕಪ್ ತಂಡದಲ್ಲಿ ಎಲ್ಲಾ ಇದೆ, ಆದ್ರೆ ಒಬ್ಬ ಮಿಸ್: ಅಝರುದ್ದೀನ್ಭಾರತ ವಿಶ್ವಕಪ್ ತಂಡದಲ್ಲಿ ಎಲ್ಲಾ ಇದೆ, ಆದ್ರೆ ಒಬ್ಬ ಮಿಸ್: ಅಝರುದ್ದೀನ್

ರಿಕಿ ಪಾಂಟಿಂಗ್ ಮತ್ತು ಕ್ಲೈವ್ ಲಾಯ್ಡ್ ವಿಶ್ವಕಪ್‌ನಲ್ಲಿ ಕ್ಯಾಪ್ಟನ್ ಆಗಿದ್ದು ಶತಕ ಬಾರಿಸಿದ ದಾಖಲೆ ತಮ್ಮ ಹೆಸರಿನಲ್ಲಿ ಉಳಿಸಿಕೊಂಡಿದ್ದಾರೆ. ಈ ಕುತೂಹಲಕಾರಿ ಸಂಗತಿಗೆ ಸಂಬಂಧಿಸಿ ಇಲ್ಲೊಂದಿಷ್ಟು ಮಾಹಿತಿಯಿದೆ.

ಕ್ಲೈವ್ ಲಾಯ್ಡ್

ಕ್ಲೈವ್ ಲಾಯ್ಡ್

ವಿಶ್ವಕಪ್ ನಲ್ಲಿ ತಂಡದ ನಾಯಕತ್ವ ವಹಿಸಿಕೊಂಡು ಶತಕ ಬಾರಿಸಿದ ಹೆಗ್ಗಳಿಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಕ್ಲೈವ್ ಲಾಯ್ಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ದಂತಕತೆ ರಿಕಿ ಪಾಂಟಿಂಗ್ ಅವರದ್ದು. ಅದರಲ್ಲೂ ಕ್ಲೈವ್ ಲಾಯ್ಡ್ ಆರಂಭಿಕ ವಿಶ್ವಕಪ್ ಆವೃತ್ತಿಯಲ್ಲೇ ಶತಕ ಬಾರಿಸಿ ವಿಶ್ವದ ಗಮನ ಸೆಳೆದಿದ್ದರು. ಲಾಯ್ಡ್ ಈ ಸಾಧನೆ ಮೆರದಿದ್ದು ಆಸ್ಟ್ರೇಲಿಯಾ ವಿರುದ್ಧ.

85 ಎಸೆತಗಳಿಗೆ 102 ರನ್

85 ಎಸೆತಗಳಿಗೆ 102 ರನ್

1975ರಲ್ಲಿ ನಡೆದಿದ್ದ ಪ್ರುಡೆನ್ಷಿಯಲ್ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯ ಜೂನ್ 21ರಂದು ಲಂಡನ್ ನ ಲಾರ್ಡ್ಸ್ ನಲ್ಲಿ ನಡೆದಿತ್ತು. ವಿಂಡೀಸ್ ಪರ ಬ್ಯಾಟ್ ಬೀಸಿದ್ದ ನಾಯಕ ಕ್ಲೈವ್ ಲಾಯ್ಡ್ 85 ಎಸೆತಗಳಿಗೆ 102 ರನ್ ಸಿಡಿಸಿದ್ದರು. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 17 ರನ್‌ಗಳ ರೋಚಕ ಗೆಲುವು ದಾಖಲಿಸಿತ್ತು.

ರಿಕಿ ಪಾಂಟಿಂಗ್

ರಿಕಿ ಪಾಂಟಿಂಗ್

ಐದು ಸಾರಿ ವಿಶ್ವಕಪ್ ಟ್ರೋಫಿ ಜಯಿಸಿ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಅತೀ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿರುವ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದ ರಿಕಿ ಪಾಂಟಿಂಗ್ ವಿಶ್ವಕಪ್ ಫೈನಲ್‌ನಲ್ಲಿ ಶತಕ ಬಾರಿಸಿ, ಕ್ಲೈವ್ ಲಾಯ್ಡ್ ಜೊತೆ ಅಪರೂಪದ ಸಾಧನೆ ಸಾಲಿನಲ್ಲಿ ಸೇರಿಕೊಂಡಿದ್ದಾರೆ. ಪಾಂಟಿಂಗ್ ಸೆಂಚುರಿ ಬಾರಿಸಿದ್ದು ಭಾರತದ ವಿರುದ್ಧವೆ.

ಅಜೇಯ 140 ರನ್

ಅಜೇಯ 140 ರನ್

ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ 2003ರಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕಾಂಗರೂ ಬಳಗದಿಂದ ರಿಕಿ ಪಾಂಟಿಗ್ ಶತಕ ಬಾರಿಸಿದ್ದರು. ಮಾರ್ಚ್ 23ರಂದು ನಡೆದಿದ್ದ ಈ ಪಂದ್ಯದಲ್ಲಿ ಭಾರತ ವಿರುದ್ಧ ಪಾಂಟಿಂಗ್ 121 ಎಸೆತಗಳಿಗೆ 140 ರನ್ ಚಚ್ಚಿದ್ದರು. ಮೊದಲು ಇನ್ನಿಂಗ್ಸ್ ಆಡಿದ್ದ ಆಸೀಸ್ 359 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಸೌರವ್ ಗಂಗೂಲಿ ಬಳಗ ವೀರೇಂದ್ರ ಸೆಹ್ವಾಗ್ 82 ರನ್ ಹೊರತಾಗಿಯೂ ಎಲ್ಲಾ ವಿಕೆಟ್ ಕಳೆದು 234 ರನ್ ಪೇರಿಸಿ 125 ರನ್‌ಗಳಿಂದ ಶರಣಾಗಿತ್ತು.

Story first published: Monday, May 27, 2019, 13:03 [IST]
Other articles published on May 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X