ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಕುಂಬ್ಳೆ ಕೋಚ್ ಹುದ್ದೆ ತೊರೆಯಲು, ಕೊಹ್ಲಿ ಎಸ್ಎಂಎಸ್ ಕಾರಣ'

ಕುಂಬ್ಳೆ ಕೋಚ್ ಹುದ್ದೆ ತೊರೆಯಲು, ಕೊಹ್ಲಿ ಎಸ್ಎಂಎಸ್ ಕಾರಣ..! | Oneindia Kannada
CoA Member Diana Edulji Accuses Kohli Of Sending Sms Which Led To the Exit Of Kumble And Appointment Of Shastri

ಬೆಂಗಳೂರು, ಡಿಸೆಂಬರ್ 13: ಮಹಿಳಾ ಕ್ರಿಕೆಟ್ ತಂಡಕ್ಕೆ ಕೋಚ್ ಆಯ್ಕೆ ಗೊಂದಲ ಮುಂದುವರೆದಿದೆ. ಈ ನಡುವೆ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸಲಿರುವ ಬಿಸಿಸಿಐ ಆಡಳಿತ ಮಂಡಳಿ(ಸಿಒಎ) ಸದಸ್ಯೆ ಡಯಾನಾ ಎಡುಲ್ಜಿ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.

ಕುಂಬ್ಳೆ ನಿರ್ಗಮನದ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು? ಕುಂಬ್ಳೆ ನಿರ್ಗಮನದ ಬಗ್ಗೆ ವಿರಾಟ್ ಕೊಹ್ಲಿ ಹೇಳಿದ್ದೇನು?

ಅಂದು ಟೀಂ ಇಂಡಿಯಾ ಕೋಚ್ ಆಗಿ ಆಯ್ಕೆಯಾಗಿದ್ದ ಕನ್ನಡಿಗ ಅನಿಲ್​ ಕುಂಬ್ಳೆ ಅವರನ್ನು ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಸಲು ಕ್ಯಾಪ್ಟನ್​ವಿರಾಟ್​ ಕೊಹ್ಲಿ ಅವರ ಒಂದು ಎಸ್ಎಂಎಸ್ ಸಾಕಾಯಿತು. ಆ ಒಂದು ಎಸ್ಎಂಎಸ್ ಆಧಾರದ ಮೇಲೆ ಬಿಸಿಸಿಐ ನಿರ್ಧಾರ ಕೈಗೊಂಡಿತ್ತು.

ಕ್ರಿಕೆಟ್ ಮೈದಾನದಲ್ಲಿನ ಕೆಟ್ಟ ವರ್ತನೆಗೆ ಕಠಿಣ ಶಿಕ್ಷೆ: ಸಮಿತಿ ಶಿಫಾರಸು ಕ್ರಿಕೆಟ್ ಮೈದಾನದಲ್ಲಿನ ಕೆಟ್ಟ ವರ್ತನೆಗೆ ಕಠಿಣ ಶಿಕ್ಷೆ: ಸಮಿತಿ ಶಿಫಾರಸು

ಮಹಿಳಾ ತಂಡದ ಕೋಚ್​ ರಮೇಶ್ ಪವಾರ್​ ವಿಚಾರವಾಗಿ ಮಾತನಾಡಿರುವ ಡಯಾನಾ ಎಡುಲ್ಜಿ, ಪುರುಷರ ತಂಡದ ಕೋಚ್ ಅವರನ್ನ ಆ ತಂಡದ ಕ್ಯಾಪ್ಟನ್​ ಹೇಳಿದ್ದಕ್ಕೆ ತೆಗೆದು ಹಾಕುವುದಾದರೆ ಇದೀಗ ತಂಡಕ್ಕೆ ಪವಾರ್​ ಕೋಚ್​ ಆಗಿರಬೇಕು ಎಂದು ಕ್ಯಾಪ್ಟನ್​ ಹರ್ಮನ್​ಪ್ರೀತ್​ ಕೌರ್​ ಹಾಗೂ ಸ್ಮೃತಿ ಮಂದಾನಾ ಹೇಳುತ್ತಿದ್ದು, ಅವರನ್ನ ಮುಂದುವರೆಸಿಕೊಂಡು ಹೋಗದಿರಲು ಕಾರಣವೇನು ಎಂದು ಪ್ರಶ್ನೆ ಮಾಡಿದ್ದಾರೆ.

ಆಟಗಾರರನ್ನು ಕುಂಬ್ಳೆ ಶಾಲಾ ಮಕ್ಕಳಂತೆ ನಡೆಸಿಕೊಳ್ತಾ ಇದ್ರಾ? ಆಟಗಾರರನ್ನು ಕುಂಬ್ಳೆ ಶಾಲಾ ಮಕ್ಕಳಂತೆ ನಡೆಸಿಕೊಳ್ತಾ ಇದ್ರಾ?

2017ರ ಜೂನ್​ ತಿಂಗಳಲ್ಲಿ ಅನಿಲ್​ ಕುಂಬ್ಳೆ ತಮ್ಮ ಕೋಚ್​ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕುಂಬ್ಳೆ- ಕೊಹ್ಲಿ ಅವರ ಮನಸ್ತಾಪದ ಬಗ್ಗೆ ಊರೆಲ್ಲ ಸುದ್ದಿಯಾದರೂ ಹಾಗೇನಿಲ್ಲ ಎಂದು ಬಿಸಿಸಿಐ ಸ್ಪಷ್ಟನೆ ನೀಡಿತ್ತು.

Story first published: Thursday, December 13, 2018, 12:38 [IST]
Other articles published on Dec 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X