ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಡ್ನಿ ಟೆಸ್ಟ್‌ನಲ್ಲಿ ವಾರ್ನರ್ ಕಣಕ್ಕಿಳಿಯುವ ಬಗ್ಗೆ ಸುಳಿವುಕೊಟ್ಟ ಆಸಿಸ್ ಕೋಚ್

coach Justin Langer statement on David Warner about sydney test

ಏಕದಿನ ಸರಣಿಯ ಸಂದರ್ಭದಲ್ಲಿ ಗಾಯಗೊಂಡಿದ್ದ ಡೇವಿಡ್ ವಾರ್ನರ್ ಬಳಿಕ ತಂಡದಿಂದ ಹೊರಬಿದ್ದಿದ್ದರು. ಸದ್ಯ ಆಸಿಸ್ ಅನುಭವಿ ಆಟಗಾರ ಚೇತರಿಕೆಯನ್ನು ಕಂಡಿದ್ದು ಸಿಡ್ನಿಯಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯಬಹುದು ಎಂಬ ನಿರೀಕ್ಷೆಯಿದೆ. ಈ ಬಗ್ಗೆ ಆಸ್ಟ್ರೇಲಿಯಾ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿಕೆಯನ್ನು ನೀಡಿದ್ದಾರೆ.

"ಮೂರನೇ ಟೆಸ್ಟ್‌ನಲ್ಲಿ ಆಡಲು ಡೇವಿಡ್ ವಾರ್ನರ್ ಸಂಪೂರ್ಣವಾಗಿ ಸಿದ್ಧರಾಗುತ್ತದೆ ಎಂಬ ಬಗ್ಗೆ ಬಹಳ ಭರವಸೆಯಿದೆ. ಆತನೋರ್ವ ಯೋಧನಂತೆ. ಆರಂಭದಿಂದಲೂ ನಾನು ಹೇಳಿಕೊಂಡು ಬಂದಿದ್ದೇನೆ, ವಾರ್ನರ್ ಮೂರನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯಲು ಎಲ್ಲಾ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ" ಎಂದು ಆಸ್ಟ್ರೇಲಿಯಾ ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ಅಭಿಪ್ರಾಯಪಟ್ಟಿದ್ದಾರೆ.

ಟೀಮ್ಇಂಡಿಯಾಗೆ ಮತ್ತೊಂದು ಆಘಾತ: ಟೆಸ್ಟ್ ಸರಣಿಯಿಂದ ಹೊರಬಿದ್ದ ಕೆಎಲ್ ರಾಹುಲ್ಟೀಮ್ಇಂಡಿಯಾಗೆ ಮತ್ತೊಂದು ಆಘಾತ: ಟೆಸ್ಟ್ ಸರಣಿಯಿಂದ ಹೊರಬಿದ್ದ ಕೆಎಲ್ ರಾಹುಲ್

"ಡೇವಿಡ್ ವಾರ್ನರ್ ಸ್ಪರ್ಧೆಯನ್ನು ಇಷ್ಟಪಡುತ್ತಾರೆ. ಟೆಸ್ಟ್ ಕ್ರಿಕೆಟ್ ಆಡಲು ಅವರು ಹೆಚ್ಚು ಉತ್ಸುಕರಾಗಿದ್ದಾರೆ. ಮಂಗಳವಾರದ ಮಧ್ಯಾಹ್ನದ ಬಳಿಕ ತರಭೇತಿ ಶಿಬಿರದ ನಂತರ ಅವರತ್ತ ಮತ್ತೆ ಚಿತ್ತ ಹರಿಸಲಿದ್ದು ಚರ್ಚಿಸಲಿದ್ದೇವೆ. ಮುಂದಿನ ಪಂದ್ಯದಲ್ಲಿ ಅವರು ಕಣಕ್ಕಿಳಿಯುವ ಹೆಚ್ಚಿನ ಸಾಧ್ಯತೆಯಿದೆ" ಎಂದು ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ.

"ಡೇವಿಡ್ ವಾರ್ನರ್ ಇತ್ತೀಚೆಗೆ ಸಾಕಷ್ಟು ವೈಟ್‌ಬಾಲ್ ಕ್ರಿಕೆಟ್‌ಅನ್ನು ಆಡಿದ್ದಾರೆ. ಆದರೆ ಸ್ಟೀವ್ ಸ್ಮಿತ್ ರೀತಿಯಲ್ಲಿ ಹೆಚ್ಚಿನ ಟೆಸ್ಟ್ ಪಂದ್ಯಗಳಲ್ಲಿ ಅವರು ಕಣಕ್ಕಿಳಿದಿಲ್ಲ. ಆದರೆ ಆಟದಲ್ಲಿ ಅವರೋರ್ವ ಚಾಣಾಕ್ಷ. ಆವರಲ್ಲಿನ ಅನುಭವ ಅವರಿಗೆ ಟೆಸ್ಟ್ ಪಂದ್ಯದಲ್ಲಿ ಸಹಾಯ ಮಾಡಲಿದೆ" ಎಂದು ಜಸ್ಟಿನ್ ಲ್ಯಾಂಗರ್ ಅಭಿಪ್ರಾಯಪಟ್ಟಿದ್ದಾರೆ.

ಸ್ಟೋಯ್ನಿಸ್ ಬ್ಯಾಟಿಂಗ್ ಆರ್ಭಟ, ಹೊಬರ್ಟ್ ವಿರುದ್ಧ ಮೆಲ್ಬರ್ನ್‌ಗೆ ಜಯಸ್ಟೋಯ್ನಿಸ್ ಬ್ಯಾಟಿಂಗ್ ಆರ್ಭಟ, ಹೊಬರ್ಟ್ ವಿರುದ್ಧ ಮೆಲ್ಬರ್ನ್‌ಗೆ ಜಯ

ಆಸ್ಟ್ರೇಲಿಯಾ ಹಾಗೂ ಭಾರತ ಮೂರನೇ ಟೆಸ್ಟ್ ಪಂದ್ಯ ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ಜನವರಿ 7 ಗುರುವಾರದಿಂದ ಆರಂಭವಾಗಲಿದೆ. ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ಟೀಮ್ ಇಂಡಿಯಾ ತಲಾ ಒಂದೊಂದು ಗೆಲುವನ್ನು ಸಾಧಿಸಿದ್ದು ಸರಣಿ 1-1ರಿಂದ ಸಮಬಲಗೊಂಡಿದೆ. ವಾರ್ನರ್ ಆಸಿಸ್ ಪಡೆಯನ್ನು ಸೇರಿಕೊಂಡರೆ ಬ್ಯಾಟಿಂಗ್ ವಿಭಾಗಕ್ಕೆ ದೊಡ್ಡ ಬಲ ದೊರೆತಂತಾಗುತ್ತದೆ.

Story first published: Tuesday, January 5, 2021, 12:45 [IST]
Other articles published on Jan 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X