ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸರ್ಫರಾಝ್‌ರನ್ನು ನಾಯಕತ್ವದಿಂದ ಕಿತ್ತೊಗೆಯುವಂತೆ ಪಾಕ್‌ ಕೋಚ್‌ ಆಗ್ರಹ

Mickey Arthur Recommends to Sack Sarfaraz Ahmed

ಲಾಹೋರ್‌, ಆಗಸ್ಟ್‌ 05: ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡದ ವೈಫಲ್ಯಕ್ಕೆ ಕಾರಣರಾದ ನಾಯಕ ಸರ್ಫರಾಝ್‌ ಅಹ್ಮದ್‌ ಅವರನ್ನು ನಾಯಕತ್ವದಿಂದ ಕಿತ್ತೊಗೆಯಿರಿ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಗೆ ಕೋಚ್‌ ಮಿಕಿ ಆರ್ಥರ್‌ ಶಿಫಾರಸು ಮಾಡಿದ್ದಾರೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸರ್ಫರಾಝ್‌ ಬದಲಿಗೆ ಯುವ ಸ್ಪಿನ್ನರ್‌ ಶದಾಬ್‌ ಖಾನ್‌ ಪಾಕ್‌ ತಂಡವನ್ನು ಮುನ್ನಡೆಸಬೇಕು ಮತ್ತು ಟೆಸ್ಟ್‌ ತಂಡಕ್ಕೆ ಬಾಬರ್‌ ಆಝಮ್‌ ನಾಯಕತ್ವ ವಹಿಸಬೇಕು ಎಂದು ಮಿಕಿ ಆರ್ಥರ್‌ ಪಿಸಿಬಿಗೆ ಶಿಫಾರಸು ಮಾಡಿದ್ದಾರೆ ಎಂದು ಪಾಕಿಸ್ತಾನದ ದಿನ್ಯೂಸ್‌.ಕಾಮ್‌ ವರದಿ ಮಾಡಿದೆ.

ತಮ್ಮ ವಿವಾಹಕ್ಕೆ ಭಾರತೀಯ ಆಟಗಾರರನ್ನು ಆಹ್ವಾನಿಸಲಿರುವ ಪಾಕ್‌ ಕ್ರಿಕೆಟಿಗತಮ್ಮ ವಿವಾಹಕ್ಕೆ ಭಾರತೀಯ ಆಟಗಾರರನ್ನು ಆಹ್ವಾನಿಸಲಿರುವ ಪಾಕ್‌ ಕ್ರಿಕೆಟಿಗ

ಪಿಸಿಬಿ ಅಧಿಕಾರಿಗಳ ಜೊತೆಗೆ ಆಗಸ್ಟ್‌ 2ರಂದು ನಡೆದ ವಿಶ್ವಕಪ್‌ ಟೂರ್ನಿಯ ಪ್ರದರ್ಶನ ಪರಾಮರ್ಶಿಸುವ ಸಭೆಯಲ್ಲಿ ಪಾಲ್ಗೊಂಡಿದ್ದ ಆರ್ಥರ್‌ ತಮ್ಮ ಅಭಿಪ್ರಾಯ ಮುಂದಿಟ್ಟಿದ್ದಾರೆ. ಇದೇ ವೇಳೆ ಕೋಚ್‌ ಸ್ಥಾನದಲ್ಲಿ ತಾವಿನ್ನೂ 2 ವರ್ಷಗಳ ಕಾಲ ಮುಂದುವರಿಯಲು ಅನುಮತಿಸುವಂತೆಯೂ ಕೋರಿದ್ದಾರೆ. ಅಷ್ಟೇ ಅಲ್ಲದೆ ಪಾಕಿಸ್ತಾನ ಮೂಲದವರನ್ನು ತಮ್ಮ ಸಹಾಯಕ ಕೋಚ್‌ ಆಗಿ ನೀಡುವಂತೆಯೂ ಬೇಡಿಕೆ ಇಟ್ಟಿದ್ದಾರೆ.

ಪಾಕಿಸ್ತಾನ ತಂಡ ವಿಶ್ವಕಪ್‌ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಸತತ ಸೋಲುಂಡ ಪರಿಣಾಮ ಅಂತಿಮ ಪಂದ್ಯಗಳಲ್ಲಿ ಜಯ ದಾಖಲಿಸಿದರೂ, ಅಂಕಪಟ್ಟಿಯಲ್ಲಿ 5ನೇ ಸ್ಥಾನಿಯಾಗಿ ತನ್ನ ಅಭಿಯಾನ ಅಂತ್ಯಗೊಳಿಸುವಂತಾಯಿತು. ಇದಾದ ಬಳಿಕ ಪಾಕ್‌ ತಂಡದ ನಾಯಕತ್ವ ಬದಲಾವಣೆಗೆ ಹಲವು ಮಾಜಿ ಕ್ರಿಕೆಟಿಗರು ಒತ್ತಯಿಸಿದ್ದಾರೆ.

ಅತಿಯಾಗಿ ವರ್ತಿಸಿದ ನವದೀಪ್‌ ಸೈನಿಗೆ ಐಸಿಸಿಯಿಂದ ಖಢಕ್‌ ವಾರ್ನಿಂಗ್‌!ಅತಿಯಾಗಿ ವರ್ತಿಸಿದ ನವದೀಪ್‌ ಸೈನಿಗೆ ಐಸಿಸಿಯಿಂದ ಖಢಕ್‌ ವಾರ್ನಿಂಗ್‌!

ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್‌ ಶೊಯೇಬ್‌ ಅಖ್ತರ್‌, ಸೀಮಿತ ಓವರ್‌ಗಳ (ಏಕದಿನ ಮತ್ತು ಟಿ20ಐ) ಕ್ರಿಕೆಟ್‌ನಲ್ಲಿ ಪಾಕಿಸ್ತಾನ ತಂಡವನ್ನು ಹ್ಯಾರಿಸ್‌ ಸೊಹೇಲ್‌ ಮುನ್ನಡೆಸಬೇಕು ಮತ್ತು ಟೆಸ್ಟ್‌ ತಂಡದ ನಾಯಕತ್ವವನ್ನು ಬಾಬರ್‌ ಆಝಮ್‌ಗೆ ನೀಡಬೇಕು ಎಂದು ಸಲಹೆ ನಿಡಿದ್ದರು.

ಅಂತಾರಾಷ್ಟ್ರೀಯ ಟಿ20: ಹಿಟ್‌ಮ್ಯಾನ್‌ ಮುಡಿಗೆ ಸಿಕ್ಸರ್‌ಗಳ ವಿಶ್ವದಾಖಲೆ!ಅಂತಾರಾಷ್ಟ್ರೀಯ ಟಿ20: ಹಿಟ್‌ಮ್ಯಾನ್‌ ಮುಡಿಗೆ ಸಿಕ್ಸರ್‌ಗಳ ವಿಶ್ವದಾಖಲೆ!

ಇದಕ್ಕೂ ಮುನ್ನ ವಿಶ್ವಕಪ್‌ ಟೂರ್ನಿ ವೇಳೆ ಪಾಕಿಸ್ತಾನ ತಂಡದ ನಾಯಕ ಸರ್ಫರಾಝ್‌ ಅಹ್ಮದ್‌ ತಲೆಯಲ್ಲಿ ಮೆದುಳಿಲ್ಲ ಎಂದು ಅಖ್ತರ್‌ ಜರಿದಿದ್ದರು. ಭಾರತ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದು ಚೇಸಿಂಗ್‌ ಆಯ್ಕೆ ಮಾಡಿಕೊಂಡದ್ದು ಅಖ್ತರ್‌ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಏಕೆಂದರೆ ಪಾಕಿಸ್ತಾನ ತಂಡ ಚೇಸಿಂಗ್‌ನಲ್ಲಿ ದುರ್ಬಲ ಎಂಬ ಸತ್ಯ ಎಲ್ಲರಿಗೂ ತಿಳಿದಿರುವುದಾಗಿ ಎಂದು ಅಖ್ತರ್‌ ವಿವರಿಸಿದ್ದರು. ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟ್‌ ಮಾಡಿದ್ದರೆ ಭಾರತ ವಿರುದ್ಧ ಗೆಲ್ಲುವ ಉತ್ತಮ ಅವಕಾಶವಿತ್ತು ಎಂದು ಅಖ್ತರ್‌ ಹೇಳಿದ್ದರು.

Story first published: Monday, August 5, 2019, 17:08 [IST]
Other articles published on Aug 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X