ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತನಲ್ಲಿರುವ ಸಾಮರ್ಥ್ಯದ ಕಾರಣಕ್ಕೆ ಆಯ್ಕೆ ಮಾಡಲಾಗಿದೆ: ಕಳಪೆ ಪ್ರದರ್ಶನ ನೀಡಿದ ಆಟಗಾರನ ಬೆಂಬಲಕ್ಕೆ ನಿಂತ ದ್ರಾವಿಡ್

Coach Rahul Dravid backs Ishan Kishan after bad run against WI series

ಭಾರತ ಹಾಗೂ ವೆಸ್ಟ್ ಇಂಡಿಸ್ ನಡುವಿನ ಸೀಮಿತ ಓವರ್‌ಗಳ ಸರಣಿ ಅಂತ್ಯವಾಗಿದ್ದು ಭಾರತ ಏಕದಿನ ಹಾಗೂ ಟಿ20 ಎರಡನ್ನು ಕೂಡ ವೈಟ್‌ವಾಶ್ ಮಾಡಿ ವಶಕ್ಕೆ ಪಡೆದುಕೊಂಡಿದೆ. ಇದೀಗ ಭಾರತ ಶ್ರೀಲಂಕಾ ವಿರುದ್ಧದ ಟಿ20 ಸರಣಿಗಾಗಿ ಸಜ್ಜಾಗುತ್ತಿದೆ. ಆದರೆ ಈ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭಾರೀ ನಿರೀಕ್ಷೆ ಮೂಡಿಸಿ ವಿಫಲವಾಗಿರುವ ಭಾರತದ ಯುವ ಆಟಗಾರನ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ಇಶಾನ್ ಕಿಶನ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ್ದಾರೆ. ವಿಂಡೀಸ್ ವಿರುದ್ಧದ ಟಿ20 ಸರಣಿಯ ಮೂರು ಪಂದ್ಯದಲ್ಲಿಯೂ ಇಶಾನ್ ಕಿಶನ್ ಆರಂಭಿಕನಾಗಿ ಕಣಕ್ಕಿಳಿದಿದ್ದಾರೆ. ಹಾಗಿದ್ದರು ಕೂಡ ಇಶಾನ್ ಕಿಶನ್ ಗಳಿಸಿದ್ದು 23.66ರ ಸರಾಸರಿಯಲ್ಲಿ 71 ರನ್ ಮಾತ್ರ. ಅದು ಕೂಡ ಅತ್ಯಂತ ಕಳಪೆ ಸ್ಟ್ರೈಕ್‌ರೇಟ್‌ನೊಂದಿಗೆ ಇಶಾನ್ ಕಿಶನ್ ಬ್ಯಾಟ್ ಬೀಸಿದ್ದರು. ಹೀಗಾಗಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದೆ.

ವೃದ್ದಿಮಾನ್ ಸಾಹಾ ವಿವಾದಾತ್ಮಕ ಟ್ವೀಟ್ ಕುರಿತು ಬಿಸಿಸಿಐ ತನಿಖೆ ನಡೆಸಲಿದೆ: ಅರುಣ್ ಧುಮಾಲ್ವೃದ್ದಿಮಾನ್ ಸಾಹಾ ವಿವಾದಾತ್ಮಕ ಟ್ವೀಟ್ ಕುರಿತು ಬಿಸಿಸಿಐ ತನಿಖೆ ನಡೆಸಲಿದೆ: ಅರುಣ್ ಧುಮಾಲ್

ಒಂದು ಪಂದ್ಯ ಅಥವಾ ಸರಣಿಯಿಂದ ಆಟಗಾರರ ಸಾಮರ್ಥ್ಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಅಸಾಧ್ಯ: 2022ರ ಟಿ20 ವಿಶ್ವಕಪ್‌ನ ಆರಂಭಕ್ಕೆ ಕೇವಲ 8 ತಿಂಗಳು ಮಾತ್ರವೇ ಬಾಕಿಯಿದೆ. ಈ ಸಂದರ್ಭದಲ್ಲಿ ಯುವ ಆಟಗಾರರಿಗೆ ಅವಕಾಶವನ್ನು ನಿಡುವ ಮೂಲಕ ಭಾರತ ತಂಡ ಮಹತ್ವದ ಟೂರ್ನಿಗೆ ಉತ್ತಮ ಆಟಗಾರರ ಸಂಯೋಜನೆಯ ಹುಡುಕಾಟದಲ್ಲಿದೆ. ಈ ಹಿನ್ನೆಲೆಯಲ್ಲಿ ಕೋಚ್ ರಾಹುಲ್ ದ್ರಾವಿಡ್ ಯುವ ಆಟಗಾರನ ಬೆಂಬಲಕ್ಕೆ ನಿಂತಿದ್ದು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಒಂದು ಪಂದ್ಯ ಅಥವಾ ಒಂದು ಸರಣಿಯಲ್ಲಿ ನೀಡಿದ ಪ್ರದರ್ಶನವನ್ನು ಮುಂದಿಟ್ಟುಕೊಂಡು ಆಟಗಾರನ ಸಾಮರ್ಥ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಅಸಾಧ್ಯ ಎಂದಿದ್ದಾರೆ.

ಆಟಗಾರರಿಗೆ ಆತ್ಮವಿಶ್ವಾಸ ತುಂಬಲು ಬಯಸುತ್ತೇವೆ: ರಾಹುಲ್ ದ್ರಾವಿಡ್ ಟಿ20 ಮಾದರಿಯಲ್ಲಿ ಇಶಾನ್ ಕಿಶನ್ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಇದು ಕಠಿಣ ಮಾದರಿಯ ಕ್ರಿಕೆಟ್ ಆಗಿದ್ದು ಅತ್ಯಂತ ಅಪಾಯಕಾರಿ ಆಟವನ್ನು ನಾವು ಬಯಸುತ್ತೇವೆ. ಪ್ರತಿ ಬಾರಿಯೂ ಅವರು ದೊಡ್ಡ ಹೊಡೆತಗಳನ್ನು ಹೊಡೆಯಲು ನಾವು ಬಯಸುತ್ತೇವೆ. ಆದರೆ ಕೆಲವೇ ಪಂದ್ಯಗಳಿಂದ ನಾವು ಅವರ ಸಾಮರ್ಥ್ಯವನ್ನು ತೀರ್ಮಾನಿಸಲು ಸಾಧ್ಯವಿಲ್ಲ. ನಾವು ಆಟಗಾರರಿಗೆ ಸಾಧ್ಯವಾದಷ್ಟು ಸ್ಥಿರ ಸ್ಥಾನವನ್ನು ನೀಡಲು ಬಯಸುತ್ತೇವೆ. ನಾವು ಆಟಗಾರರಿಗೆ ಹೆಚ್ಚಿನ ಅವಕಾಶ ನೀಡಲು ಬಯಸುತ್ತೇವೆ ಮತ್ತು ಒಂದು ಪಂದ್ಯ ಅಥವಾ ಒಂದು ಸರಣಿಯಲ್ಲಿನ ಪ್ರದರ್ಶನವನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾಮರ್ಥ್ಯವನ್ನು ತೀರ್ಮಾನಿಸುವುದಿಲ್ಲ" ಎಂದು ರಾಹುಲ್ ದ್ರಾವಿಡ್ ಹೇಳಿಕೆ ನೀಡಿದ್ದಾರೆ.

ಐಪಿಎಲ್ ಹರಾಜು ದನಗಳ ವ್ಯಾಪಾರವಿದ್ದಂತೆ ಎಂದ ರಾಬಿನ್ ಉತ್ತಪ್ಪ!ಐಪಿಎಲ್ ಹರಾಜು ದನಗಳ ವ್ಯಾಪಾರವಿದ್ದಂತೆ ಎಂದ ರಾಬಿನ್ ಉತ್ತಪ್ಪ!

ಇಶಾನ್ ಕಿಶನ್ ತನ್ನ ಸಾಮರ್ಥ್ಯದ ಕಾರಣದಿಂದ ಆಯ್ಕೆಯಾಗಿದ್ದಾರೆ: ಇನ್ನು ಇಶಾನ್ ಕಿಶನ್ ಅವರ ಸಾಮರ್ಥ್ಯವನ್ನು ರಾಹುಲ್ ದ್ರಾವಿಡ್ ಬೆಂಬಲಿಸಿದ್ದಾರೆ. "ಇಶಾನ್ ಕಿಶನ್ ಅವರನ್ನು ಅವರಲ್ಲಿರುವ ಸಾಮರ್ಥ್ಯದ ಕಾರಣದಿಂದಾಗಿ ಆಯ್ಕೆ ಮಾಡಲಾಗಿದೆ. ಈ ಕೆಲವೇ ಪಂದ್ಯಗಳನ್ನು ಮಾತ್ರವೇ ನೀವು ಪರಿಗಣನೆಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಕೆಲ ಸಂದರ್ಭಗಳಲ್ಲಿ ಸಂಯೋಜನೆಯಿಂದಾಗಿ ಕೆಲವೊಮ್ಮೆ ಗಾಯಗಳಿಂದಾಗಿ ಹೀಗಾಗುತ್ತದೆ" ಎಂದು ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದ್ದಾರೆ.

ಲಂಕಾ ವಿರುದ್ಧ ಸರಣಿಗೆ ಭಾರತ ಸಜ್ಜು: ಇನ್ನ ಟೀಮ್ ಇಂಡಿಯಾ ಈಗ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾಗಿಯಾಗಲು ಸಜ್ಜಾಗಿದೆ. ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮೊದಲ ಪಂದ್ಯ ಲಕ್ನೋದಲ್ಲಿ ಜನವರಿ 24ರಂದು ನಡೆಯಲಿದೆ. ಈ ಟಿ20 ಸರಣಿಯಿಂದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಹೊರಗುಳಿದಿದ್ದು ವೇಗಿ ಜಸ್ಪ್ರೀತ್ ಬೂಮ್ರಾ ಹಾಗೂ ಆಲ್‌ರೌಂಡರ್ ರವೀಂದ್ರ ಜಡೇಜಾ ಕಮ್‌ಬ್ಯಾಕ್ ಮಾಡಿದ್ದಾರೆ.

Story first published: Tuesday, February 22, 2022, 17:50 [IST]
Other articles published on Feb 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X