ಪಾಕಿಸ್ತಾನ ವಿರುದ್ಧದ ಸರಣಿ ಶ್ರೀಲಂಕಾದಲ್ಲಿ ಆಯೋಜಿಸಲು ಬದ್ಧ: ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ

ಬೆಂಗಳೂರು, ಆಗಸ್ಟ್ 20: ಅಫ್ಘಾನಿಸ್ತಾನ ತಾಲಿಬಾನ್ ಕೈವಶವಾಗುತ್ತಿದ್ದಂತೆಯೇ ಅಲ್ಲಿ ಈಗ ಆತಂಕದ ಪರಿಸ್ಥಿತಿ ಸೃಷ್ಟಿಯಾಗಿದೆ. ಅಫ್ಘಾನಿಸ್ತಾನ ಕ್ರಿಕೆಟ್‌ನ ಭವಿಷ್ಯದ ಬಗ್ಗೆಯೂ ಈ ಗೊಂದಲ ಮುಂದುವರಿದಿದೆ. ಆದರೆ ಈಗಾಗಲೇ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ತಾಲಿಬಾನ್ ಕೂಡ ಕ್ರಿಕೆಟ್‌ಅನ್ನು ಪ್ರೀತಿಸುತ್ತದೆ. ಅದರಲ್ಲಿ ಯಾವುದೇ ಅಡ್ಡಿಯಾಗಲಾರದು ಎಂದು ಪ್ರತಿಕ್ರಿಯಿಸಿತ್ತು. ಈಗ ಮುಂದಿನ ಪ್ರಮುಖ ಎರಡು ಸರಣಿಗಳ ಬಗ್ಗೆ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಸಿಇಒ ಹಮಿದ್ ಶಿನ್ವಾರ್ ಪ್ರತಿಕ್ರಿಯಿಸಿದ್ದಾರೆ.

ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ನಡುವೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಯೋಜಿಸಲು ತೀರ್ಮಾನಿಸಲಾಗಿತ್ತು. ಈಗ ಅಪ್ಘಾನಿಸ್ತಾನ ತಾಲಿಬಾನ್ ವಶಕ್ಕೆ ಹೋಗಿದ್ದರೂ ಶ್ರೀಲಂಕಾದಲ್ಲಿ ನಡೆಯಲಿರುವ ಈ ಸರಣಿಗೆ ಯಾವುದೇ ರೀತಿಯಲ್ಲಿಯೂ ಅಡ್ಡಿಯಾಗಲಾರದು ಎಂದು ಅಲ್ಲಿನ ಕ್ರಿಕೆಟ್ ಮಂಡಳಿಯ ಸಿಇಒ ಹಮಿದ್ ಶಿನ್ವಾರ್ ತಿಳಿಸಿದ್ದಾರೆ.

"ಕ್ರಿಕೆಟ್ ತುಂಬಾ ಚೆನ್ನಾಗಿ ನಡೆಯುತ್ತಿದೆ. ನಾವು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಕಚೇರಿಗೆ ತೆರಳುತ್ತಿದ್ದೇವೆ. ನಮ್ಮ ಕ್ರಿಕೆಟ್ ತಂಡ ಶ್ರೀಲಂಕಾದಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗಿಯಾಗಲು ಸಿದ್ಧತೆಯನ್ನು ನಡೆಸುತ್ತಿದೆ. ಅದು ಖಚಿತವಾಗಿದ್ದು ಶ್ರೀಲಂಕಾಗೆ ನಮ್ಮ ಆಟಗಾರರ ತಂಡವನ್ನು ಆದಷ್ಟು ಶೀಘ್ರವಾಗಿ ಕಳುಹಿಸಲು ನಾವು ಬದ್ಧವಾಗಿದ್ದೇವೆ" ಎಂದು ಹಮಿದ್ ಶಿನ್ವಾರಿ ಇಎಸ್‌ಪಿಎನ್ ಕ್ರಿಕ್‌ಇನ್ಫೋಗೆ ನೀಡಿದ ಪ್ರತಿಕ್ರಿಯೆಯಲ್ಲಿ ವಿವರಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಸಾಕಷ್ಟು ಬದಲಾವನೆಗಳು ಸಂಭವಿಸುತ್ತಿದೆ. ಇದೇ ಸಂದರ್ಭದಲ್ಲಿ ಕಾಬೂಲ್‌ನಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯಥ್ಯಯಗಳು ಉಂಟಾಗಿದ್ದು ಲಭ್ಯತೆಯ ಮೇಲೆ ಪರಿಣಾಮ ಬೀರಿದೆ. ಆದರೆ ನಮಗೆ ಹಾರಾಟಕ್ಕೆ ವಿಮಾನ ಲಭ್ಯವಾಗುತ್ತಿದ್ದಂತೆಯೇ ಸಾಧ್ಯವಾದಷ್ಟು ಶೀಘ್ರವಾಗಿ ನಾವು ತೆರಳಲಿದ್ದೇವೆ. ನಮ್ಮ ಆಟಗಾರರು ಕಾಬೂಲ್‌ನಲ್ಲಿಯೇ ಲಭ್ಯವಿದ್ದು ಈಗ ಅವರು ಸರಣಿಗಾಗಿ ಸಿದ್ಧತೆಯನ್ನು ನಡೆಸುತ್ತಿದ್ದಾರೆ" ಎಂದು ಶಿನ್ವಾರಿ ತಿಳಿಸಿದ್ದಾರೆ.

ಅಪ್ಘಾನಿಸ್ತಾನ ಈಗ ಸಂಪೂರ್ಣವಾಗಿ ತಾಲಿಬಾನಿಗಳ ವಶವಾಗಿದ್ದು ಇಡೀ ದೇಶದಲ್ಲಿ ಆತಂಕದ ವಾತಾವರಣವಿದೆ. ಅಲ್ಲಿನ ಜನರು ತಮ್ಮ ಭವಿಷ್ಯದ ಬಗ್ಗೆ ಈಗ ಆತಂಕಗೊಂಡಿದ್ದಾರೆ. ಅಪ್ಘಾನಿಸ್ತಾನದ ಕ್ರಿಕೆಟ್ ಭವಿಷ್ಯದ ಬಗ್ಗೆಯೂ ಈಗ ಪ್ರಶ್ನೆಗಳು ಎದ್ದಿದೆ. ಇಂತಾ ಸಂದರ್ಭದಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯ ಕಚೇರಿಗೆ ಶಸ್ತ್ರಸಜ್ಜಿತ ತಾಲಿಬಾನಿಗಳು ಪ್ರವೇಶಿಸಿದ್ದಾರೆ. ಈವೇಳೆ ಈ ತಾಲಿಬಾನಿಗಳಿಗೆ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಬ್ದುಲ್ಲಾ ಮಜಾರಿ ಕೂಡ ಸಾತ್ ನೀಡಿದ್ದರು.

ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದುಕೊಂಡಿದ್ದರೂ ಕ್ರಿಕೆಟ್‌ಗೆ ಯಾವುದೇ ಆತಂಕವಿಲ್ಲ ಎಂದು ಇದಕ್ಕೂ ಮುನ್ನವೇ ಅಲ್ಲಿನ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯ ನಿರ್ವಾಹಕ ಹಮೀದ್ ಶಿನ್ವರಿ ಹೇಳಿಕೆಯನ್ನು ನೀಡಿದ್ದರು. ಇದಕ್ಕೆ ಪೂರವೆಂಬಂತೆ ಎಸಿಬಿ ಮುಖ್ಯ ಕಚೇರಿಗೆ ಬಂದೂಕುಧಾರಿ ತಾಲಿಬಾನಿಗಳು ಪ್ರವೇಶಿಸಿದ್ದಾರೆ. ಇವುಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದೆ.

"ಕ್ರಿಕೆಟ್ ತುಂಬಾ ಚೆನ್ನಾಗಿ ನಡೆಯುತ್ತಿದೆ. ನಾವು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯ ಕಚೇರಿಗೆ ತೆರಳುತ್ತಿದ್ದೇವೆ. ನಮ್ಮ ಕ್ರಿಕೆಟ್ ತಂಡ ಶ್ರೀಲಂಕಾದಲ್ಲಿ ನಡೆಯಲಿರುವ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಭಾಗಿಯಾಗಲು ಸಿದ್ಧತೆಯನ್ನು ನಡೆಸುತ್ತಿದೆ. ಅದು ಖಚಿತವಾಗಿದ್ದು ಶ್ರೀಲಂಕಾಗೆ ನಮ್ಮ ಆಟಗಾರರ ತಂಡವನ್ನು ಆದಷ್ಟು ಶೀಘ್ರವಾಗಿ ಕಳುಹಿಸಲು ನಾವು ಬದ್ಧವಾಗಿದ್ದೇವೆ" ಎಂದು ಹಮಿದ್ ಶಿನ್ವಾರಿ ಇಎಸ್‌ಪಿಎನ್ ಕ್ರಿಕ್‌ಇನ್ಫೋಗೆ ನೀಡಿದ ಪ್ರತಿಕ್ರಿಯೆಯಲ್ಲಿ ವಿವರಿಸಿದ್ದಾರೆ.

T-20 ವಿಶ್ವಕಪ್ ಗೆಲ್ಲೋದಕ್ಕೆ ಈ ಆಟಗಾರ ಇರ್ಲೇಬೇಕು ಎಂದ ಗೌತಮ್ ಗಂಭೀರ್ | Oneindia Kannada

ಪಾಕಿಸ್ತಾನ ವಿರುದ್ಧದ ಸರಣಿಗಾಗಿ ಅಪ್ಘಾನಿಸ್ತಾನ ತಂಡ ಮುಂದಿನ ನಾಲ್ಕೈದು ದಿನಗಳಲ್ಲಿ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. "ಮುಂದಿನ ನಾಲ್ಕು ದಿನಗಳಲ್ಲಿ ನಮ್ಮ ತಂಡ ಅಪ್ಘಾನಿಸ್ತಾನದಿಂದ ತೆರಳುವ ಸಾಧ್ಯತೆಯಿದೆ. ಈ ವಿಚಾರವಾಗಿ ನಾವು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹಾಗೂ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಜೊತೆಗೆ ಸಂಪರ್ಕದಲ್ಲಿದ್ದು ಮಾಹಿತಿಯನ್ನು ನೀಡಿದ್ದೇವೆ. ಈ ಸಂದರ್ಭದಲ್ಲಿ ಸರಣಿಯನ್ನು ಆಯೋಜಿಸಲು ಒಪ್ಪಿಕೊಂಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ನಾವು ಧನ್ಯವಾದವನ್ನು ಸಲ್ಲಿಸುತ್ತಿದ್ದು ಆಭಾರಿಯಾಗಿದ್ದೇವೆ" ಎಂದಿದ್ದಾರೆ. ಈ ಸರಣಿಯ ಎಲ್ಲಾ ಪಂದ್ಯಗಳು ಕೂಡ ಹಂಬಂತೋಟ ಕ್ರೀಡಾಂಗಣದಲ್ಲಿ ನಡೆಯಲಿದೆ.

For Quick Alerts
ALLOW NOTIFICATIONS
For Daily Alerts
Story first published: Friday, August 20, 2021, 16:39 [IST]
Other articles published on Aug 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X