ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌: ವಿಶ್ವ ದಾಖಲೆ ಬರೆದ ಭಾರತದ ಲಿಫ್ಟರ್‌ ಜೆರೆಮಿ

Commonwealth Championships: Lifter Jeremy smashes Youth World record

ಹೊಸದಿಲ್ಲಿ, ಜುಲೈ 11: ಯೂತ್‌ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ಭಾರತದ ಪ್ರತಿಭಾನ್ವಿತ ಯುವ ಲಿಫ್ಟರ್‌ ಜೆರೆಮಿ ಲಾಲ್ರಿನುಂಗಾ, ಸಿಮೋವಾದ ಅಪಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಮೂರು ದಾಖಲೆಗಳನ್ನು ಪುಡಿಗಟ್ಟಿದ್ದಾರೆ.

ಅದ್ಭುತ ಪ್ರದರ್ಶನ ನೀಡಿದ 16 ವರ್ಷದ ಯುವ ಪ್ರತಿಭೆ ಜೆರೆಮಿ, 67ಕೆಜಿ ವಿಭಾಗದಲ್ಲಿ ಸ್ನ್ಯಾಚ್‌ ವಿಭಾಗದಲ್ಲಿ 136 ಕೆಜಿ ಭಾರ ಎತ್ತುವ ಮೂಲಕ ಯೂತ್‌ ವರ್ಲ್ಡ್‌ ಮತ್ತು ಏಷ್ಯನ್‌ ಕಾಮನ್‌ವೆಲ್ತ್‌ ದಾಖಲೆಗಳನ್ನು ಮುರಿದಿದ್ದಾರೆ. ಆದರೆ, ಕ್ಲೀನ್‌ ಅಂಡ್‌ ಜರ್ಕ್‌ ವಿಭಾಗದಲ್ಲಿ ತಪ್ಪೆಸಗಿ ನಿರಾಸೆ ಅನುಭವಿಸಿದ್ದಾರೆ.

ವಿಶ್ವಕಪ್‌ ಸೆಮಿಫೈನಲ್‌: ಮ್ಯಾಂಚೆಸ್ಟರ್‌ನಲ್ಲಿ ಹೊಳೆದ ಜಡೇಜಾ ಖಡ್ಗ!ವಿಶ್ವಕಪ್‌ ಸೆಮಿಫೈನಲ್‌: ಮ್ಯಾಂಚೆಸ್ಟರ್‌ನಲ್ಲಿ ಹೊಳೆದ ಜಡೇಜಾ ಖಡ್ಗ!

ವಿಶೇಷವೆಂದರೆ ಈ ಹಿಂದಿನ ಯೂತ್‌ ವರ್ಡ್‌ ಮತ್ತು ಏಷ್ಯನ್‌ ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ ದಾಖಲೆಗಳು ಕೂಡ ಜೆರೆಮಿ ಹೆಸರಲ್ಲೇ ಇತ್ತು. ಕಳೆದ ಏಪ್ರಿಲ್‌ನಲ್ಲಿ ಚೀನಾದಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಸ್ನ್ಯಾಚ್‌ ವಿಭಾಗದಲ್ಲಿ ಜೆರೆಮಿ 134 ಕೆಜಿ ಭಾರತ ಎತ್ತಿದ್ದರು.

ಒಲಿಂಪಿಕ್‌ ಕ್ರೀಡಾಕೂಟಕ್ಕೆ ಅರ್ಹತಾ ಸುತ್ತಿನ ಕೂಟವಾಗಿರುವ ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ಲೀನ್‌ ಅಂಡ್‌ ಜರ್ಕ್‌ನಲ್ಲೂ ಅಂಥದ್ದೇ ಪ್ರದರ್ಶನ ನೀಡಿ ಚಿನ್ನ ಗೆಲ್ಲುವಲ್ಲಿ ಜೆರೆಮಿ ವಿಫಲರಾಗಿದ್ದಾರೆ. ಆದರೂ, ಕೂಟದಲ್ಲಿ ಜೆರೆಮಿ ಗಳಿಸಿರುವ ಒಟ್ಟು ಅಂಕಗಳು 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಪ್ರಕಟಿಸಲಾಗುವ ಶ್ರೇಯಾಂಕ ಪಟ್ಟಿಗೆ ಗಣನೆಗೆ ಬರಲಿದೆ.

ಬೌನ್ಸರ್‌ ಪೆಟ್ಟಿನಿಂದ ರಕ್ತ ಹರಿದರೂ ಆಸೀಸ್‌ ಪರ ಹೋರಾಡಿದ ಕೇರಿ!ಬೌನ್ಸರ್‌ ಪೆಟ್ಟಿನಿಂದ ರಕ್ತ ಹರಿದರೂ ಆಸೀಸ್‌ ಪರ ಹೋರಾಡಿದ ಕೇರಿ!

ಕೂಟದಲ್ಲಿ ಭಾರತದ ಇತರ ಲಿಫ್ಟರ್‌ಗಳು ಕೂಡ ಗಮನಾರ್ಹ ಪ್ರದರ್ಶನ ನೀಡಿ 7 ಪದಕಗಳನ್ನು ಬಾಚಿಕೊಂಡಿದ್ದಾರೆ. ಇದರಲ್ಲಿ 4 ಚಿನ್ನ ಮತ್ತೆರಡು ಬೆಳ್ಳಿ ಹಾಗೂ ಏಕೈಕ ಕಂಚಿನ ಪದಕ ಲಭ್ಯವಾಗಿದೆ.

Story first published: Thursday, July 11, 2019, 21:34 [IST]
Other articles published on Jul 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X