ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

CWG 2022: ಭಾರತ ವನಿತೆಯರು vs ಆಸ್ಟ್ರೇಲಿಯಾ ವನಿತೆಯರು: ಟಾಸ್ ವರದಿ ಮತ್ತು ಆಡುವ ಬಳಗ

Commonwealth Games 2022: India Women vs Australia women toss report and live score

ಬರ್ಮಿಂಗ್‌ಹ್ಯಾಂ್‌ನಲ್ಲಿ ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟ ಆರಂಭಗೊಂಡಿದೆ. ನಿನ್ನೆಯಷ್ಟೇ ಕ್ರೀಡಾಕೂಟಕ್ಕೆ ಚಾಲನೆ ದೊರೆತಿದ್ದು, ಇಂದಿನಿಂದ ( ಜುಲೈ 29 ) ವಿವಿಧ ಸ್ಪರ್ಧೆಗಳು ನಡೆಯುತ್ತಿವೆ. ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ ಕೂಡ ಆಯೋಜನೆಯಾಗಿರುವುದು ವಿಶೇಷವಾಗಿದ್ದು, ಪ್ರಥಮ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಹಾಗೂ ಆಸ್ಟ್ರೇಲಿಯಾ ವನಿತೆಯರ ತಂಡಗಳು ಸೆಣಸಾಟಕ್ಕೆ ಇಳಿದಿವೆ.

ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಕೆಎಲ್ ರಾಹುಲ್ ಬದಲಿ ಆಟಗಾರ ಆಯ್ಕೆ; ಹೆಚ್ಚು ಮಿಂಚಿರದ ‌ಆಟಗಾರನಿಗೆ ಮಣೆ!ವಿಂಡೀಸ್ ವಿರುದ್ಧದ ಟಿ20 ಸರಣಿಗೆ ಕೆಎಲ್ ರಾಹುಲ್ ಬದಲಿ ಆಟಗಾರ ಆಯ್ಕೆ; ಹೆಚ್ಚು ಮಿಂಚಿರದ ‌ಆಟಗಾರನಿಗೆ ಮಣೆ!

ಎಡ್ಜ್ ಬಾಸ್ಟನ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ವನಿತೆಯರ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡಿದ್ದಾರೆ.

ಭಾರತ ವನಿತೆಯರ ತಂಡ ಹಾಗೂ ಆಸ್ಟ್ರೇಲಿಯಾ ವನಿತೆಯರ ತಂಡಗಳ ನಡುವಿನ ಈ ಪಂದ್ಯದ ಆಡುವ ಬಳಗದ ಕುರಿತಾದ ಮಾಹಿತಿ ಮುಂದೆ ಇದೆ ನೋಡಿ.

ಭಾರತ ಆಡುವ ಬಳಗ: ಹರ್ಮನ್‌ಪ್ರೀತ್ ಕೌರ್ (ನಾಯಕಿ) , ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ (ವಿಕಟ್ ಕೀಪರ್), ಜೆಮಿಮಾ ರಾಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ರಾಧಾ ಯಾದವ್, ರಾಜೇಶ್ವರಿ ಗಾಯಕ್‌ವಾಡ್, ಮೇಘನಾ ಸಿಂಗ್ , ರೇಣುಕಾ ಠಾಕೂರ್.

ಆಸ್ಟ್ರೇಲಿಯಾ ಆಡುವ ಬಳಗ : ಅಲಿಸ್ಸಾ ಹೀಲಿ (ವಿಕೆಟ್ ಕೀಪರ್), ಬೆತ್ ಮೂನಿ, ಮೆಗ್ ಲ್ಯಾನಿಂಗ್ (ನಾಯಕ), ತಹ್ಲಿಯಾ ಮೆಕ್‌ಗ್ರಾತ್, ರಾಚೆಲ್ ಹೇನ್ಸ್, ಆಶ್ಲೀ ಗಾರ್ಡ್ನರ್, ಗ್ರೇಸ್ ಹ್ಯಾರಿಸ್, ಜೆಸ್ ಜೊನಾಸೆನ್, ಅಲಾನಾ ಕಿಂಗ್, ಮೇಗನ್ ಶುಟ್, ಡಾರ್ಸಿ ಬ್ರೌನ್

'ಕೂ' ಮೂಲಕ ಭಾರತೀಯ ವನಿತೆಯರಿಗೆ ಶುಭ ಕೋರಿದ ವಿರಾಟ್ ಕೊಹ್ಲಿ

ಪುರುಷರ ಕ್ರಿಕೆಟ್‌ನ ಕಿಂಗ್ ಎಂದೇ ಖ್ಯಾತಿಯನ್ನು ಪಡೆದಿರುವ ವಿರಾಟ್ ಕೊಹ್ಲಿ ಕೂ ಅಪ್ಲಿಕೇಶನ್ ಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸುತ್ತಿರುವ ಭಾರತ ವನಿತೆಯರ ತಂಡ ಹಾಗೂ ಇತರೆ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದ್ದಾರೆ. ವಿರಾಟ್ ಕೊಹ್ಲಿಯ ಈ ನಡೆಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇಂದಿನ ( ಜುಲೈ 29) ಇತರೆ ಸ್ಪರ್ಧೆಗಳು

1:00 PM: ಲಾನ್ ಬೌಲ್ - ತಾನಿಯಾ ಚೌಧರಿ ಮಹಿಳೆಯರ ವಿಭಾಗೀಯ ಆಟದ ಸುತ್ತು 1 ರಲ್ಲಿ

1:00 PM: ಲಾನ್ ಬೌಲ್ - ಟ್ರಿಪಲ್ ಸೆಕ್ಷನಲ್ ಪ್ಲೇ ರೌಂಡ್ 1ರಲ್ಲಿ ಭಾರತ vs ನ್ಯೂಜಿಲೆಂಡ್

2:00 PM: ಟೇಬಲ್ ಟೆನಿಸ್ - ಭಾರತ vs ದಕ್ಷಿಣ ಆಫ್ರಿಕಾ ಗ್ರೂಪ್ 2 ಪಂದ್ಯ

3:11 PM: ಈಜು - 400 ಮೀ ಪುರುಷರ ಫ್ರೀಸ್ಟೈಲ್ ಹೀಟ್‌ನಲ್ಲಿ ಕುಶಾಗ್ರಾ ರಾವತ್

3:25 PM: ಸೈಕ್ಲಿಂಗ್ - ಪುರುಷರ 400 ಮೀ ಟೀಮ್ ಪರ್ಸ್ಯೂಟ್ ಕ್ವಾಲಿಫೈಯರ್

3:30 PM: ಕ್ರಿಕೆಟ್ - ಭಾರತ vs ಆಸ್ಟ್ರೇಲಿಯಾ ಗುಂಪು A ಪಂದ್ಯ

3:31 PM: ಟ್ರಯಥ್ಲಾನ್ - ಪುರುಷರ ವೈಯಕ್ತಿಕ ದೂರದ ಸ್ಪ್ರಿಂಟ್ ಆದರ್ಶ್ ಮತ್ತು ವಿಶ್ವನಾಥ್

4:00 PM: ಲಾನ್ ಬೌಲ್ - ಪುರುಷರ ಟ್ರಿಪಲ್ ಸೆಕ್ಷನಲ್ ಪ್ಲೇ ರೌಂಡ್ 2 ವಿರುದ್ಧ ಸ್ಕಾಟ್ಲೆಂಡ್

4:00 PM: ಲಾನ್ ಬೌಲ್ - ಮಹಿಳೆಯರ ವಿಭಾಗೀಯ ಆಟದ ಸುತ್ತು 2 ರಲ್ಲಿ ತಾನಿಯಾ ಚೌಧರಿ

4:03 PM: ಈಜು - ಪುರುಷರ 50 ಮೀ ಬಟರ್‌ಫ್ಲೈ ಹೀಟ್‌ನಲ್ಲಿ ಸಜನ್ ಪ್ರಕಾಶ್

4:12 PM: ಸೈಕ್ಲಿಂಗ್ - ಮಹಿಳಾ ತಂಡ ಸ್ಪ್ರಿಂಟ್ ಕ್ವಾಲಿಫೈಯರ್

4:29 PM: ಶ್ರೀಹರಿ ನಟರಾಜ್ - ಪುರುಷರ 100 ಮೀ ಬ್ಯಾಕ್‌ಸ್ಟ್ರೋಕ್ ಹೀಟ್

4:30 PM: ಟೇಬಲ್ ಟೆನಿಸ್ - ಭಾರತ vs ಬಾರ್ಬಡೋಸ್ ಗುಂಪು 3 ಪಂದ್ಯ

4:30 PM: ಜಿಮ್ನಾಸ್ಟಿಕ್ಸ್ - ಪುರುಷರ ಕಲಾತ್ಮಕ ಅರ್ಹತೆಯಲ್ಲಿ ಯೋಗೇಶ್ವರ್ ಸಿಂಗ್, ಸತ್ಯಜಿತ್ ಮೊಂಡಲ್, ಸೈಫ್ ತಾಂಬೋಲಿ

4:46 PM: ಸೈಕ್ಲಿಂಗ್ - ಪುರುಷರ ತಂಡ ಸ್ಪ್ರಿಂಟ್ ಕ್ವಾಲಿಫಯರ್

5:00 PM: ಬಾಕ್ಸಿಂಗ್ - 32 ರ ಸುತ್ತಿನಲ್ಲಿ ಶಿವ ಥಾಪಾ

6:30 PM: ಬ್ಯಾಡ್ಮಿಂಟನ್ - ಭಾರತ vs ಪಾಕಿಸ್ತಾನ ಮಿಶ್ರ ಡಬಲ್ಸ್

6:30 PM: ಮಹಿಳೆಯರ ಹಾಕಿ - ಭಾರತದ ಘಾನಾ

7:00 PM: ಟ್ರಯಥ್ಲಾನ್ - ಮಹಿಳೆಯರ ವೈಯಕ್ತಿಕ ಸ್ಪ್ರಿಂಟ್ ಸಂಜನಾ ಮತ್ತು ಪ್ರಜ್ಞಾ ಮೋಹನ್

7:30 PM: ಲಾನ್ ಬೌಲ್ - ಮಹಿಳೆಯರ ಫೋರ್ಸ್ ವಿಭಾಗೀಯ ಆಟ ರೌಂಡ್ ಆಫ್ 32 ಇಂಡಿಯಾ vs ಕುಕ್ ಐಲ್ಯಾಂಡ್ಸ್

8:30 PM: ಟೇಬಲ್ ಟೆನ್ನಿಸ್ - ಭಾರತ vs ಫಿಜಿ ಮಹಿಳೆಯರ ಗುಂಪು 2 ಪಂದ್ಯ

9:50 PM: ಸೈಕ್ಲಿಂಗ್ - ಪುರುಷರ ತಂಡ 4000m ಪರ್ಸ್ಯೂಟ್ ಫೈನಲ್

10:25 PM: ಸೈಕ್ಲಿಂಗ್ - ಮಹಿಳೆಯರ ತಂಡ 4000m ಪರ್ಸ್ಯೂಟ್ ಫೈನಲ್

10:30 PM: ಲಾನ್ ಬೌಲ್ - ಭಾರತ vs ಫಾಕ್ಲ್ಯಾಂಡ್ ದ್ವೀಪಗಳು ಪುರುಷರ ಜೋಡಿ ವಿಭಾಗೀಯ ಆಟ 2 ರೌಂಡ್

10:33 PM: ಸೈಕ್ಲಿಂಗ್ - ಪುರುಷರ ತಂಡ ಸ್ಪ್ರಿಂಟ್ ಫೈನಲ್

11:00 PM: ಟೇಬಲ್ ಟೆನಿಸ್ - ಭಾರತ vs ಸಿಂಗಾಪುರ ಪುರುಷರ ತಂಡ ಗುಂಪು 3 ಪಂದ್ಯ

11:00 PM: ಸ್ಕ್ವಾಷ್ - ಅನಾಹತ್ ಸಿಂಗ್ ಮಹಿಳೆಯರ ಸಿಂಗಲ್ ರೌಂಡ್ 64

11:45 PM: ಸ್ಕ್ವಾಷ್ - ಅಭಯ್ ಸಿಂಗ್ ಪುರುಷರ ಸಿಂಗಲ್ ರೌಂಡ್ 64

Story first published: Tuesday, August 2, 2022, 12:26 [IST]
Other articles published on Aug 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X