ಕ್ಯಾಪಿಟಲ್ಸ್‌ ಪಡೆಯನ್ನು ಕಟ್ಟಿಹಾಕಲು ಸಜ್ಜಾದ ರಾಯಲ್ಸ್‌

 A win at home finally achieved after multiple losses, a confident Delhi Capitals will hope to keep the juggernaut rolling when they take on Rajasthan Royals in an away IPL encounter here on Monday.

ಜೈಪುರ, ಏಪ್ರಿಲ್‌ 22: ನೂತನ ನಾಯಕ ಸ್ಟೀವನ್‌ ಸ್ಮಿತ್‌ ಅವರ ಸಾರಥ್ಯದಲ್ಲಿ ಗೆಲುವಿನ ಹಳಿಗೆ ಮರಳಿರುವ ರಾಜಸ್ಥಾನ್‌ ರಾಯಲ್ಸ್‌ ತಂಡ, ಇದೀಗ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕುವ ಲೆಕ್ಕಾಚಾರದಲ್ಲಿ ಇಲ್ಲಿನ ಸವಾಯ್‌ ಮಾನ್‌ ಸಿಂಗ್‌ ಕ್ರೀಡಾಂಗಣದಲ್ಲಿ ಸೋಮವಾರ ಕಣಕ್ಕಿಳಿಯಲಿದೆ.

ಡೆಲ್ಲಿ ತಂಡ ಮನೆಯಾಚೆ ಉತ್ತಮ ಪ್ರದರ್ಶನ ನೀಡಿದೆ. ಆದರೆ, ಶನಿವಾರ ನಡೆದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಪಂದ್ಯದಲ್ಲಿ 5 ವಿಕೆಟ್‌ ಜಯ ದಾಖಲಿಸಿ ಫಿರೋಜ್‌ ಶಾ ಕೋಟ್ಲಾದಲ್ಲಿ ಮೊದಲ ಜಯದ ಸಿಹಿಯುಂಡಿತು. ಈ ಮೂಲಕ ಅಂಕಪಟ್ಟಿಯಲ್ಲಿ 3ನೇ ಸ್ಥಾನ ವನ್ನು ಕಾಯ್ದುಕೊಂಡಿದೆ.

ಐಪಿಎಲ್ 2019 ವಿಶೇಷ ಪುಟ | ಗ್ಯಾಲರಿ

ಇನ್ನು ಶನಿವಾರ ನಡೆದ ಮತ್ತೊಂದು ಪಂದ್ಯದಲ್ಲಿ ಬಲಿಷ್ಠ ಮುಂಬಯಿ ಇಂಡಿಯನ್ಸ್‌ ಎದುರು 5 ವಿಕೆಟ್‌ಗಳ ಜಯ ದಕ್ಕಿಸಿಕೊಂಡಿರುವ ರಾಯಲ್ಸ್‌ ಹೊಸ ಹುರುಪು ಕಂಡುಕೊಂಡಂತಿದೆ. ಆದರೆ, 9 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿರುವ ರಾಯಲ್ಸ್‌ ಪ್ಲೇ ಆಫ್ಸ್‌ ಪ್ರವೇಶಿಸಬೇಕಾದರೆ ತನ್ನ ಪಾಲಿನ ಉಳಿದೆಲ್ಲಾ ಪಂದ್ಯಗಳನ್ನು ಗೆಲ್ಲುವ ಒತ್ತಡದಲ್ಲಿದೆ. ರಾಜಸ್ಥಾನ ತಂಡ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ರಹಾನೆಯ ಆರಂಭಿಕನ ಸ್ಥಾನಕ್ಕೂ ಕೊಕ್‌ ಸಾಧ್ಯತೆ

ಕಳಪೆ ಫರ್ಮ್‌ನಲ್ಲಿರುವ ಅಜಿಂಕ್ಯ ರಹಾನೆ ಅವರನ್ನು ತಂಡದ ನಾಯಕನ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿತ್ತು. ಇದೀಗ ಆರಂಭಿಕ ಬ್ಯಾಟ್ಸ್‌ಮನ್‌ ಸ್ಥಾನವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ರಹಾನೆ ಬದಲಾಗಿ ರಾಹುಲ್‌ ತ್ರಿಪಾಠಿ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ರಾಯಲ್ಸ್‌ ಸಂಭಾವ್ಯ 11

ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್‌, ಸ್ಟೀವನ್‌ ಸ್ಮಿತ್‌, ಬೆನ್‌ ಸ್ಟೋಕ್ಸ್‌, ರಿಯಾನ್‌ ಪರಾಗ್‌, ಆಷ್ಟನ್‌ ಟರ್ನರ್‌, ಸ್ಟುವರ್ಟ್‌ ಬಿನ್ನಿ, ಜೋಫ್ರಾ ಆರ್ಚರ್‌, ಶ್ರೇಯಸ್‌ ಗೋಪಾಲ್‌, ಜಯದೇವ್‌ ಉನಾದ್ಕಟ್‌, ಧವಳ್‌ ಕುಲಕರ್ಣಿ.

ಕ್ಯಾಪಿಟಲ್ಸ್‌ ಸಂಭಾವ್ಯ 11

ಪೃಥ್ವಿ ಶಾ, ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಕಾಲಿನ್‌ ಇಂಗ್ರಮ್‌, ಅಕ್ಷರ್‌ ಪಟೇಲ್‌, ಶೆರ್ಫೇನ್‌ ರುದರ್‌ಫೋರ್ಡ್‌, ಅಮಿತ್‌ ಮಿಶ್ರಾ, ಕಗಿಸೊ ರಬಾಡ, ಇಶಾಂತ್‌ ಶರ್ಮಾ, ಸಂದೀಪ್‌ ಲಾಮಿಚ್ಚಾನೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, April 22, 2019, 10:30 [IST]
Other articles published on Apr 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more