ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೇರಳ ರಣಜಿ ತಂಡದಲ್ಲಿ ವಿವಾದಾತ್ಮಕ ವೇಗಿ ಶ್ರೀಶಾಂತ್‌ಗೆ ಸ್ಥಾನ!

Controversial pacer Sreesanth included in Kerala Ranji team

ತಿರುವನಂತಪುರಂ: ಏಳು ವರ್ಷಗಳ ನಿಷೇಧದ ಬಳಿಕ ವಿವಾದಾತ್ಮಕ ವೇಗಿ ಎಸ್ ಶ್ರೀಶಾಂತ್ ಅವರನ್ನು ರಾಜ್ಯದ ರಣಜಿ ತಂಡದಲ್ಲಿ ಸೇರಿಸಿಕೊಳ್ಳಲು ಕೇರಳ ಕ್ರಿಕೆಟ್ ಅಸೋಸಿಯೇಶನ್ (ಕೆಸಿಎ) ನಿರ್ಧರಿಸಿದೆ. ಈಗ 37ರ ಹರೆಯದವರಾಗಿರುವ ಶ್ರೀಶಾಂತ್ ಅವರ ನಿಷೇಧದ ಅವಧಿ ಸೆಪ್ಟೆಂಬರ್‌ಗೆ ಮುಗಿಯಲಿದೆ. ಕೆಸಿಎಯು ರಣಜಿ ಟ್ರೋಫಿಗಾಗಿ ಪ್ರಕಟಿಸಿರುವ ಸಂಭಾವ್ಯ ರಾಜ್ಯ ತಂಡದಲ್ಲಿ ಶ್ರೀಶಾಂತ್ ಹೆಸರೂ ಕೂಡ ಇದೆ ಎಂದು ತಿಳಿದುಬಂದಿದೆ. ಒಂದು ವೇಳೆ ಶ್ರೀಶಾಂತ್ ತನ್ನ ಫಿಟ್ನೆಸ್ ಸಾಬೀತುಪಡಿಸಿದರೆ ಕೇರಳ ರಣಜಿ ತಂಡದಲ್ಲಿ ಆಡಲಿದ್ದಾರೆ.

ಎಂಎಸ್ ಧೋನಿ vs ವಿರಾಟ್ ಕೊಹ್ಲಿ: ಭಾರತ ಹೆಚ್ಚು ಗೆದ್ದಿದ್ದು ಯಾರ ನಾಯಕತ್ವದಲ್ಲಿ?!ಎಂಎಸ್ ಧೋನಿ vs ವಿರಾಟ್ ಕೊಹ್ಲಿ: ಭಾರತ ಹೆಚ್ಚು ಗೆದ್ದಿದ್ದು ಯಾರ ನಾಯಕತ್ವದಲ್ಲಿ?!

2013ರಲ್ಲಿ ದೆಹಲಿ ಪೊಲೀಸರು ಶ್ರೀಶಾಂತ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಇಬ್ಬರು ಆಟಗಾರರಾದ ಅಂಕಿತ್ ಚಾಂಡಿಲ ಮತ್ತು ಅಂಕಿತ್ ಚವಾಣ್ ಅವರನ್ನು ಸ್ಪಾಟ್ ಫಿಕ್ಸಿಂಗ್ ಆರೋಪದಡಿಯಲ್ಲಿ ಬಂಧಿಸಿದ್ದರು. ಹೀಗಾಗಿ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಶ್ರೀಶಾಂತ್‌ಗೆ ಆಜೀವ ನಿಷೇಧ ವಿಧಿಸಿತ್ತು.

ಕೆಎಲ್ ರಾಹುಲ್, ರಿಷಭ್ ಪಂತ್‌ ವಿಕೆಟ್ ಕೀಪಿಂಗ್ ಬಗ್ಗೆ ಬಾಯ್ತೆರೆದ ಕಿರ್ಮಾನಿಕೆಎಲ್ ರಾಹುಲ್, ರಿಷಭ್ ಪಂತ್‌ ವಿಕೆಟ್ ಕೀಪಿಂಗ್ ಬಗ್ಗೆ ಬಾಯ್ತೆರೆದ ಕಿರ್ಮಾನಿ

2015ರಲ್ಲಿ ಮತ್ತೆ ದೆಹಲಿಯ ವಿಶೇಷ ನ್ಯಾಯಾಲಯ ಶ್ರೀಶಾಂತ್ ಅವರನ್ನು ಆರೋಪದಿಂದ ಖುಲಾಸೆಗೊಳಿಸಿತ್ತು.

ನಿಷೇಧ ಶಿಕ್ಷೆ ಕಡಿತ

ನಿಷೇಧ ಶಿಕ್ಷೆ ಕಡಿತ

2018ರಲ್ಲಿ ಕೇರಳ ಹೈ ಕೋರ್ಟ್ ಕೂಡ ಶ್ರೀಶಾಂತ್ ಮೇಲೆ ಹೇರಲಾಗಿದ್ದ ಆಜೀವ ನಿಷೇಧವನ್ನು ಹಿಂತೆಗೆದುಕೊಳ್ಳುವಂತೆ ಬಿಸಿಸಿಐಗೆ ಹೇಳಿತ್ತು. ಮತ್ತೆ 2019ರಲ್ಲಿ ಸುಪ್ರೀಮ್ ಕೋರ್ಟ್ ಶ್ರೀಶಾಂತ್ ತಪ್ಪನ್ನು ಎತ್ತಿ ಹಿಡಿಯಿತು. ಆದರೆ ಆಜೀವ ನಿಷೇಧವನ್ನು ಶಿಕ್ಷೆಯನ್ನು ಕಡಿತಗೊಳಿಸುವಂತೆ ಬಿಸಿಸಿಐಗೆ ಸೂಚಿಸಿತ್ತು. ಹೀಗಾಗಿ ಬಿಸಿಸಿಐಯು ನಿಷೇಧವನ್ನು 7 ವರ್ಷಕ್ಕೆ ಕಡಿತಗೊಳಿಸಿತ್ತು.

'ಚಂಡಮಾರುತದಂತೆ ಮರಳುತ್ತೇನೆ'

'ಚಂಡಮಾರುತದಂತೆ ಮರಳುತ್ತೇನೆ'

'ನನಗೆ ಅವಕಾಶ ನೀಡುತ್ತಿರುವುದಕ್ಕೆ ನಾನು ಕೆಸಿಎಗೆ ಚಿರಋಣಿಯಾಗಿದ್ದೇನೆ. ನಾನು ನನ್ನ ಫಿಟ್‌ನೆಸ್ ಅನ್ನು ಸಾಬೀತುಪಡಿಸುತ್ತೇನೆ. ಚಂಡಮಾರುತದಂತೆ ಕ್ರಿಕೆಟ್‌ ಅಂಗಳಕ್ಕೆ ಮರಳುತ್ತೇನೆ. ಎಲ್ಲಾ ವಿವಾದಗಳಿಗೂ ತೆರೆ ಎಳೆಯಬೇಕಾದ ಸಮಯವಿದು,' ಎಂದು ಕೊಚ್ಚಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಶಾಂತ್ ಖುಷಿ ಹಂಚಿಕೊಂಡಿದ್ದಾರೆ.

ಶ್ರೀಶಾಂತ್ ಕಮ್‌ಬ್ಯಾಕ್ ಸಂಪತ್ತೆನಿಸಲಿದೆ

ಶ್ರೀಶಾಂತ್ ಕಮ್‌ಬ್ಯಾಕ್ ಸಂಪತ್ತೆನಿಸಲಿದೆ

ಕೆಸಿಎಯು ಇತ್ತೀಚೆಗೆ ಮಾಜಿ ವೇಗಿ ಟಿನು ಯೋಹಾನನ್ ಅವರನ್ನು ತಂಡದ ಕೋಚ್ ಆಗಿ ಆರಿಸಿತ್ತು. ಕೆಸಿಎ ಕಾರ್ಯದರ್ಶಿ ಶ್ರೀತ್ ನಾಯರ್ ಕೂಡ ಶ್ರೀಶಾಂತ್ ಕಮ್‌ಬ್ಯಾಕ್ ರಾಜ್ಯ ತಂಡಕ್ಕೆ ಸಂಪತ್ತಾಗಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅದರರ್ಥ ನಿಷೇಧದ ಬಳಿಕ ಶ್ರೀಶಾಂತ್ ರಣಜಿಯಲ್ಲಿ ಕೇರಳ ಪರ ಆಡೋದು ಬಹುತೇಕ ಖಚಿತವಾಗಿದೆ.

ಶ್ರೀಶಾಂತ್ ಆಸೆಗೆ ಬಲ

ಶ್ರೀಶಾಂತ್ ಆಸೆಗೆ ಬಲ

ಭಾರತ ತಂಡದ ಪರ ಶ್ರೀಶಾಂತ್ 27 ಟೆಸ್ಟ್ ಪಂದ್ಯಗಳಲ್ಲಿ 87 ವಿಕೆಟ್, 53 ಏಕದಿನ ಪಂದ್ಯಗಳಲ್ಲಿ 75 ವಿಕೆಟ್‌ಗಳು ಮತ್ತು 10 ಟಿ20ಐ ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ. ತನ್ನ ಮೇಲಿದ್ದ ನಿಷೇಧ ಶಿಕ್ಷೆ ಕಡಿಮೆಗೊಳಿಸಿ ಕೋರ್ಟ್ ತೀರ್ಪು ನೀಡಿದಾಗಲೇ ಶ್ರೀಶಾಂತ್ ತನಗೆ ಇನ್ನೊಂದಿಷ್ಟು ಕಾಲ ಕ್ರಿಕೆಟ್‌ ಆಡುವ ಆಸೆಯಿದೆ ಎಂದಿದ್ದರು. ಶ್ರೀಶಾಂತ್ ಆಸೆಗೆ ಈಗ ಪುಷ್ಟಿ ಬಂದಂತಾಗಿದೆ.

Story first published: Thursday, June 18, 2020, 13:11 [IST]
Other articles published on Jun 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X