ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಶ್ಲೀಲ ಕಾಮೆಂಟ್ ವಿವಾದ: ವಿಂಡೀಸ್ ವೇಗಿ ಶಾನನ್‌ಗೆ 4 ಪಂದ್ಯಗಳ ನಿಷೇಧ

Controversy hit Shannon reveals what he really said to Root during third Test

ಸೇಂಟ್ ಲೂಸಿಯಾ, ಫೆಬ್ರವರಿ 14: ಇಂಗ್ಲೆಂಡ್ ನಾಯಕ ಜೋ ರೂಟ್‌ ಗುರಿಯನ್ನಾಗಿಸಿ ವಿವಾದಾತ್ಮಕ ಕಾಮೆಂಟ್ ಮಾಡಿದ್ದ ವೆಸ್ಟ್‌ ಇಂಡೀಸ್ ವೇಗಿ ಶಾನನ್ ಗೇಬ್ರಿಯಲ್‌ಗೆ ಐಸಿಸಿ 4 ಏಕದಿನ ಪಂದ್ಯಗಳ ನಿಷೇಧ ಹೇರಿದೆ. ಸೇಂಟ್ ಲೂಸಿಯಾದಲ್ಲಿ ನಡೆದಿದ್ದ ಇಂಗ್ಲೆಂಡ್-ವೆಸ್ಟ್ ಇಂಡೀಸ್ 3ನೇ ಟೆಸ್ಟ್ ಪಂದ್ಯದ ವೇಳೆ ಈ ವಿವಾದ ಸೃಷ್ಠಿಯಾಗಿತ್ತು.

ಕೊಹ್ಲಿ ಜೊತೆ ಹೋಲಿಕೆಗೆ ಪ್ರತಿಕ್ರಿಯಿಸಿದ ಪಾಕ್ ಬ್ಯಾಟ್ಸ್ಮನ್ ಬಾಬರ್ ಅಝಾಮ್ಕೊಹ್ಲಿ ಜೊತೆ ಹೋಲಿಕೆಗೆ ಪ್ರತಿಕ್ರಿಯಿಸಿದ ಪಾಕ್ ಬ್ಯಾಟ್ಸ್ಮನ್ ಬಾಬರ್ ಅಝಾಮ್

ಗ್ರಾಸ್ ಐಲೆಟ್‌ನಲ್ಲಿರುವ ಡ್ಯಾರೆನ್ ಸಮಿ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇತ್ತಂಡಗಳ ನಡುವಿನ 3ನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಇನ್ನಿಂಗ್ಸ ವೇಳೆ ರೂಟ್ ಉದ್ದೇಶಿಸಿ ಶಾನನ್, 'ನನ್ನ ನೋಡಿ ಯಾಕೆ ನಗುತ್ತಿದ್ದೀಯ? ನಿಂಗೆ ಹುಡುಗರು ಅಂದ್ರೆ ಇಷ್ಟಾನಾ?' ಅಂತ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದರು.

ಅಡಿಲೇಡ್‌ನಲ್ಲಿ ಇತಿಹಾಸ ನಿರ್ಮಿಸಲಿದೆ ಈ ಮಹಿಳಾ ಅಂಪೈರ್ ಜೋಡಿ!ಅಡಿಲೇಡ್‌ನಲ್ಲಿ ಇತಿಹಾಸ ನಿರ್ಮಿಸಲಿದೆ ಈ ಮಹಿಳಾ ಅಂಪೈರ್ ಜೋಡಿ!

ಶಾನನ್ ಕಾಮೆಂಟ್ ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸುವುದರಿಂದ ಅವರನ್ನು ನಾಲ್ಕು ಏಕದಿನ ಪಂದ್ಯಗಳಿಂದ ಹೊರಗಿಡಲು ಐಸಿಸಿ ನಿರ್ಧರಿಸಿದೆ.

ಅದರಲ್ಲಿ ಅಂತ ತಪ್ಪೇನಿಲ್ಲ

ಅದರಲ್ಲಿ ಅಂತ ತಪ್ಪೇನಿಲ್ಲ

ಶಾನನ್ ಛೇಡಿಕೆಗೆ ಉತ್ತರಿಸಿ ಜೋ ರೂಟ್, 'ಗೇಲಿ ಮಾಡುವುದಕ್ಕಾಗಿ ಆ (ಸಲಿಂಗಿ) ವಿಚಾರವನ್ನು ಬಳಸಿಕೊಳ್ಳಬೇಡ. ಗೇ (ಸಲಿಂಗಿ) ಆಗಿದ್ದರೆ ಅದರಲ್ಲಿ ಅಂತ ತಪ್ಪೇನಿಲ್ಲ' ಎಂದಿದ್ದರು. ಶಾನನ್ ಹೇಳಿದ್ದೇನು? ರೂಟ್ ಪ್ರತಿಕ್ರಿಯಿಸಿದ್ದೇನು ಎಂಬುದು ಕೊಂಚ ತಡವಾಗಿ ಗೊತ್ತಾಗಿತ್ತಾದರೂ ರೂಟ್ ಪ್ರತಿಕ್ರಿಯೆಗೆ ಕ್ರಿಕೆಟ್ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

ಅಪರಾಧವೆಂದು ಭಾವಿಸಿರಲಿಲ್ಲ

ಅಪರಾಧವೆಂದು ಭಾವಿಸಿರಲಿಲ್ಲ

ಘಟನೆ ವಿವಾದಕ್ಕೆ ತಿರುಗಿದ ಬಳಿಕ 30ರ ಹರೆಯದ ಗೇಬ್ರಿಯಲ್, ರೂಟ್ ಮತ್ತು ಇಂಗ್ಲೆಂಡ್ ತಂಡದ ಕ್ಷಮೆಯಾಚಿಸಿದ್ದರು. 'ಹಾಗೆ ಕಾಮೆಂಟ್ ಮಾಡಿದರೆ ಅದು ಅಪರಾಧವಾಗುತ್ತದೆ ಎಂದು ನಾನು ಭಾವಿಸಲಿಲ್ಲ. ಬದಲಿಗೆ ಕ್ರೀಡೆಯಲ್ಲಿ ಅಂತ ತರ್ಲೆಗಳು ಸಹಜವೆಂದು ಭಾವಿಸಿದ್ದೆ. ಏನೇ ಇರಲಿ, ನನ್ನನ್ನು ಕ್ಷಮಿಸಿ' ಎಂದು ಶಾನನ್ ಹೇಳಿಕೊಂಡಿದ್ದರು.

ವಿಂಡೀಸ್ ಸರಣಿ ಜಯ

ವಿಂಡೀಸ್ ಸರಣಿ ಜಯ

ಈ ಅಂತಿಮ ಟೆಸ್ಟ್ ನಲ್ಲಿ ಇಂಗ್ಲೆಂಡ್ 232 ರನ್ ಗೆಲುವನ್ನಾಚರಿಸಿತು. ಆದರೆ ಮೊದಲೆರಡು ಪಂದ್ಯಗಳಲ್ಲಿ ವಿಂಡೀಸ್ ಜಯ ಸಾಧಿಸಿದ್ದರಿಂದ ಟೆಸ್ಟ್ ಸರಣಿ ವೆಸ್ಟ್ ಇಂಡೀಸ್ 2-1ರಿಂದ ಗೆದ್ದುಕೊಂಡಿದೆ. ಅಂತೂ ಐಸಿಸಿ ಗೇಬ್ರಿಯಲ್ ಅವರನ್ನು ಅಪರಾಧಿ ಎಂದು ನಿರ್ಧರಿಸಿ ಆಗಿದೆ.

ಫೆಬ್ರವರಿ 20ರಿಂದ ಆರಂಭ

ಫೆಬ್ರವರಿ 20ರಿಂದ ಆರಂಭ

4 ಏಕದಿನ ಪಂದ್ಯಗಳಿಂದ ನಿಷೇಧಕ್ಕೊಳಗಾಗಿರುವುದರಿಂದ ಫೆಬ್ರವರಿ 20ರಿಂದ ಆರಂಭಗೊಳ್ಳುವ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಶಾನನ್ ಗೇಬ್ರಿಯಲ್ ಆಡುತ್ತಿಲ್ಲ. ಅಂತಿಮ ಪಂದ್ಯದಲ್ಲಿ ಮಾತ್ರ ಆಡಲಿದ್ದಾರೆ.

Story first published: Thursday, February 14, 2019, 17:31 [IST]
Other articles published on Feb 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X