ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವೈರಸ್ ಭೀತಿ: ಸೆಲ್ಫಿಗಾಗಿ ಬಂದಾಕೆಗೆ ವಿರಾಟ್ ಪ್ರತಿಕ್ರಿಯೆ ಹೀಗಿತ್ತು: ವಿಡಿಯೋ

Coronavirus Effect? Virat Kohli Denies Selfie To A Fan

ಭಾರತದಲ್ಲೂ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಲ್ಲರೂ ಈ ಭಯಾನಕ ವೈರಸ್‌ನಿಂದ ರಕ್ಷಣೆಯನ್ನು ಪಡೆಯಲು ಹರಸಾಹಸವನ್ನು ಪಡುತ್ತಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶುಕ್ರವಾರ ಏರ್‌ಪೋರ್ಟ್‌ನಲ್ಲಿ ಅಂತದ್ದೇ ಸನ್ನಿವೇಶವನ್ನು ಎದುರಿಸಿದ್ದಾರೆ.

ಇಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೆಹಲಿ ವಿಮಾನ ನಿಲ್ದಾಣದಿಂದಾಚೆಗೆ ಬರುತ್ತಿದ್ದ ವೇಳೆ ವಿರಾಟ್ ಕೊಹ್ಲಿಯ ಬಳಿ ಅಭಿಮಾನಿಯೋರ್ವಳು ಸೆಲ್ಫಿಗಾಗಿ ಆಗಮಿಸಿದಳು. ಆದರೆ ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡದೆ ಮುಂದೆ ಸಾಗಿದ್ದಾರೆ. ಈ ಮೂಲಕ ಕೊರೊನಾ ದಿಂದ ತಮ್ಮನ್ನ ತಾವು ರಕ್ಷಣೆ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಏಕದಿನದಲ್ಲಿ 264 : ರೋಹಿತ್ ಶರ್ಮಾ ದಾಖಲೆ ಮುರಿಯುವ ಸಾಧ್ಯತೆಯಿರುವ 5 ಆಟಗಾರರುಏಕದಿನದಲ್ಲಿ 264 : ರೋಹಿತ್ ಶರ್ಮಾ ದಾಖಲೆ ಮುರಿಯುವ ಸಾಧ್ಯತೆಯಿರುವ 5 ಆಟಗಾರರು

ಬಳಿಕ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಸಾಮಾಜಿಕ ಜಾಲತಾಣದ ಮೂಲಕ ವೀಡಿಯೋ ಸಂದೇಶವನ್ನು ನೀಡಿದ್ದಾರೆ. ಕೊರೊನಾ ಕುರಿತಾಗಿ ಜಾಗೃತಿಯನ್ನು ಮೂಡಿಸುವ ಕೆಲಸವನ್ನು ವಿರಾಟ್ ದಂಪತಿ ಮಾಡಿದ್ದಾರೆ.

ಎಲ್ಲರೂ ಪ್ರತ್ಯೇಕಗೊಂಡಿದ್ದು ಮನೆಯಿಂದ ಹೊರಗೆ ಬಾರದಂತೆ ವಿರಾಟ್ ಕೊಹ್ಲಿ ಈ ವಿಡಿಯೋದಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ಇದೇ ವಿಡಿಯೋದಲ್ಲಿ ಅನುಷ್ಕಾ ಶರ್ಮಾ ಕೂಡ ಮಾತನಾಡಿದ್ದು ಈ ವೈರಸ್ ವಿರುದ್ಧ ಹೋರಾಡಲು ಎಲ್ಲರೂ ಜೊತೆಯಾಗಿ ಕೈಜೋಡಿಸಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.

ಕೊರೊನಾ ವೈರಸ್ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಕ್ರೀಡಾಕೂಟಗಳನ್ನೂ ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಕೆಲ ಕ್ರೀಡಾಕೂಟಗಳನ್ನು ರದ್ದುಗೊಳಿಸಲಾಗಿದೆ. ಕ್ರಿಕೆಟ್‌ನ ಪ್ರಮುಖ ಲೀಗ್‌ಟೂರ್ನಿಯಾದ ಐಪಿಎಲ್ ಕೂಡ ಮುಂದೂಡಲಾಗಿದ್ದು ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ

Story first published: Friday, March 20, 2020, 21:29 [IST]
Other articles published on Mar 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X