ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾವೈರಸ್ ಹೋರಾಟಕ್ಕೆ ಕೈ ಸೇರಿಸಿದ ಕರ್ನಾಟಕ ಕ್ರಿಕೆಟ್

Coronavirus: Karnataka State Cricket Association has donated ₹1 Crore

ಬೆಂಗಳೂರು, ಮಾರ್ಚ್ 30: ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ (ಕೆಎಸ್‌ಸಿಎ) ಕೈ ಸೇರಿಸಿದೆ. ಕೊರೊನಾ ಹತ್ತಿಕ್ಕುವುದಕ್ಕಾಗಿ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ 1 ಕೋಟಿ ರೂ. ಕೊಡುಗೆ ನೀಡಿದೆ. 1 ಕೋ.ರೂ.ನಲ್ಲಿ 50 ಲಕ್ಷ ರೂ. ಕೇಂದ್ರಕ್ಕೆ, 50 ಲಕ್ಷ ರೂ. ರಾಜ್ಯ ಸರ್ಕಾರಕ್ಕೆ ತಲುಪಲಿದೆ.

ಒಂದು ತಿಂಗಳ ಸಂಬಳವನ್ನೇ ದಾನ ಮಾಡಿದ ಬಾಕ್ಸರ್ ಮೇರಿ ಕೋಮ್ಒಂದು ತಿಂಗಳ ಸಂಬಳವನ್ನೇ ದಾನ ಮಾಡಿದ ಬಾಕ್ಸರ್ ಮೇರಿ ಕೋಮ್

ಟ್ವಿಟರ್‌ನಲ್ಲಿ ಕರ್ನಾಟಕ ರಣಜಿ ತಂಡ ಈ ವಿಚಾರವನ್ನು ತಿಳಿಸಿದೆ. 'ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ 1 ಕೋಟಿ ರೂ. (ತಲಾ 50 ಲ.ರೂ. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ) ದಾನ ನೀಡುತ್ತಿದೆ,' ಎಂದು ಟ್ವಿಟರ್‌ನಲ್ಲಿ ಬರೆದುಕೊಳ್ಳಲಾಗಿದೆ.

ಐಪಿಎಲ್ 2020: ರದ್ದಾಗುವ ಹಾದಿಯಲ್ಲಿ ಮೆಗಾ ಟೂರ್ನಿ!ಐಪಿಎಲ್ 2020: ರದ್ದಾಗುವ ಹಾದಿಯಲ್ಲಿ ಮೆಗಾ ಟೂರ್ನಿ!

ಕೊರೊನಾ ವಿರುದ್ಧದ ಹೋರಾಟಕ್ಕಾಗಿ ಸಮಯೋಚಿತವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡ ಕ್ರಮಕ್ಕೆ ನಮ್ಮ ಮೆಚ್ಚುಗೆಗಳು. ನಾವು ಇನ್ನೂ ನಮ್ಮ ಕೈಲಾದ ಬೆಂಬಲ ನೀಡುತ್ತೇವೆ ಎಂದು ಟ್ವೀಟ್‌ನ ಮುಂದುವರೆದ ಭಾಗದಲ್ಲಿ ಬರೆಯಲಾಗಿದೆ.

ಸೋಮವಾರ (ಮಾರ್ಚ್ 30) ಭಾರತದಲ್ಲಿ ಸುಮಾರು 1071 ಕೊರೊನಾವೈರಸ್ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 100 ಮಂದಿ ಈಗಾಗಲೇ ಗುಣಮುಖರಾಗಿದ್ದರೆ, 29 ಮಂದಿ ಸಾವನ್ನಪ್ಪಿದ್ದರು. ಮಾರಕ ಕೊರೊನಾವೈರಸ್ ಹತ್ತಿಕ್ಕಲು ಭಾರತದ ಅನೇಕ ಕ್ರೀಡಾಪಟುಗಳು ಮತ್ತು ಕ್ರೀಡಾಸಂಸ್ಥೆಗಳು ಈಗಾಗಲೇ ಸರ್ಕಾರದೊಂದಿಗೆ ಕೈ ಜೋಡಿಸಿವೆ.

Story first published: Monday, March 30, 2020, 17:31 [IST]
Other articles published on Mar 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X