ಅಕ್ಟೋಬರ್‌ನಲ್ಲಿ ಭಾರತೀಯ ಕ್ರಿಕೆಟನ್ನು ಕೊರೊನಾ ಹೆಚ್ಚು ಕಾಡಲಿದೆ: ದ್ರಾವಿಡ್

ಬೆಂಗಳೂರು, ಆಗಸ್ಟ್ 1: ವಿಶ್ವದ ಜನರಿಗೆ 2020 ವರ್ಷ ಹೆಚ್ಚು ಸವಾಲಿನದ್ದೆನಿಸಿದೆ. ಕಾರಣ ಕೊರೊನಾವೈರಸ್ ಪಿಡುಗು. ಚೀನಾದ ವುಹಾನ್‌ನಲ್ಲಿ ಮೊದಲು ಕಾಣಿಸಿಕೊಂಡ ಮಾರಕ ಸೋಂಕು ಈಗ ಇಡೀ ವಿಶ್ವವನ್ನೇ ಸಮಸ್ಯೆಗೀಡು ಮಾಡಿದೆ. ಕ್ರೀಡಾ ಚಟುವಟಿಕೆಗಳೂ ಕೊರೊನಾದಿಂದಾಗಿ ತೊಂದರೆಗೊಳಗಾಗಿವೆ. ಮುಖ್ಯವಾಗಿ ವೀಕ್ಷಕರಿಲ್ಲದೆಯೇ ಕ್ರೀಡಾ ಸ್ಪರ್ಧೆಗಳನ್ನು ನಡೆಸಬೇಕಾದ ಅನಿರ್ವಾಯತೆಯನ್ನು ಕೋವಿಡ್-19 ತಂದೊಡ್ಡಿದೆ. (ಚಿತ್ರಕೃಪೆ: ಇಎಸ್‌ಪಿಎನ್ ಕ್ರಿಕ್‌ಇನ್ಫೋ).

330 ರನ್ ಗುರಿ, ಭಾರತ 0/1: ಪಾಕ್ ವಿರುದ್ಧದ ರೋಚಕ ಪಂದ್ಯ ನೆನೆದ ಗಂಭೀರ್

ವಿಶ್ವದಲ್ಲಿನ ಕೊರೊನಾ ಆತಂಕ್ಕೆ ಹೋಲಿಸಿದರೆ ಆರಂಭದಲ್ಲಿ ಭಾರತದಲ್ಲಿ ನಿಟ್ಟುಸಿರುವ ಬಿಡುವ ಸ್ಥಿತಿಯಿತ್ತು. ಆದರೆ ಈಗ ಭಾರತವೇ ಹೆಚ್ಚು ಆತಂಕಕ್ಕೊಳಗಾಗುವ ಮಟ್ಟಿಗೆ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಈ 5 ಆಟಗಾರರ ಪಾಲಿಗೆ 2020ರ ಐಪಿಎಲ್ ಕೊನೇಯ ಸೀಸನ್ ಎನಿಸಲಿದೆ!

ಇದೇ ಕಾರಣಕ್ಕೆ ಭಾರತದಲ್ಲಿ ನಡೆಯಬೇಕಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರಿಸಲಾಗಿದೆ.

ಕೊರೊನಾ ಸಂಕಟ ಜೋರಾಗಲಿದೆ

ಕೊರೊನಾ ಸಂಕಟ ಜೋರಾಗಲಿದೆ

ಸೆಪ್ಟೆಂಬರ್ 19ರಿಂದ ನವೆಂಬರ್ 8ರ ವರೆಗೆ ಯುಎಇಯಲ್ಲಿ ಐಪಿಎಲ್ ನಡೆಯುವುದರಲ್ಲಿದೆ. ಆದರೆ ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್, ಅಕ್ಟೋಬರ್‌ನಲ್ಲೇ ಕೊರೊನಾ ಆತಂಕ ಇನ್ನಷ್ಟು ಹೆಚ್ಚುವ ಕಳವಳ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್‌ನಲ್ಲಿ ಕೊರೊನಾ ಸಂಕಟ ಮತ್ತೂ ಜೋರಾಗಲಿದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ತಲೆನೋವು ಶುರುವಾಗಲಿದೆ

ಇನ್ನಷ್ಟು ತಲೆನೋವು ಶುರುವಾಗಲಿದೆ

ಡೆಕ್ಕನ್ ಕ್ರಾನಿಕಲ್ಸ್ ವೆಬಿನಾರ್‌ನಲ್ಲಿ ಮಾತನಾಡಿದ 'ಗ್ರೇಟ್ ವಾಲ್' ದ್ರಾವಿಡ್, 'ಕೆಲ ಅಂತಾರಾಷ್ಟ್ರೀಯ ಟೂರ್ನಿಗಳು ರದ್ದಾದವು ಮತ್ತು ಮರು ವೇಳಾಪಟ್ಟಿಗೆ ಒಳಪಟ್ಟವು. ಜನರಿಗೆ ಪಂದ್ಯಗಳು ನಡೆಸಲು ಯಾವಾಗಲೂ ಸಮಯ ಮತ್ತು ಸ್ಥಳ ಸಿಗುತ್ತದೆ. ಆದರೆ ಮುಂಬರುವ ಅಕ್ಟೋಬರ್‌ನಲ್ಲಿ ಕೊರೊನಾ ನಮಗೆ ಇನ್ನಷ್ಟು ತಲೆ ನೋವು ತರಲಿದೆ,' ಎಂದರು.

ದೇಸೀ ಕ್ರಿಕೆಟ್ ಅಕ್ಟೋಬರ್‌ನಲ್ಲಿ

ದೇಸೀ ಕ್ರಿಕೆಟ್ ಅಕ್ಟೋಬರ್‌ನಲ್ಲಿ

ಮಾತು ಮುಂದುವರೆಸಿದ ದ್ರಾವಿಡ್, 'ಅಕ್ಟೋಬರ್‌ನಲ್ಲಿ ಸಮಸ್ಯೆ ನಮ್ಮನ್ನು ಇನ್ನೂ ಜಾಸ್ತಿ ಬಡಿಯಲಾರಂಭಿಸುತ್ತದೆ ಎಂದು ನನಗನ್ನಿಸುತ್ತದೆ. ಯಾಕೆಂದರೆ ಮುಂದೆ ದೇಸೀ ಸೀಸನ್ ಆರಂಭವಾಗಲಿದೆ. ದೇಸೀಯ ಜೂನಿಯರ್‌ಗಳಿಗೆ ಅಂಡರ್ 16, ಅಂಡರ್ 19 ಮತ್ತು ಮಹಿಳಾ ಕ್ರಿಕೆಟರ್‌ಗಳಿಗೆ ಸೀಸನ್ ಆರಂಭವಾಗೋದೇ ಅಕ್ಟೋಬರ್‌ನಲ್ಲಿ,' ಎಂದು ವಿವರಿಸಿದರು.

ಭಾರತ vs ಆಸ್ಟ್ರೇಲಿಯಾ ಸರಣಿ ಆರಂಭ

ಭಾರತ vs ಆಸ್ಟ್ರೇಲಿಯಾ ಸರಣಿ ಆರಂಭ

ಭಾರತದಲ್ಲಿ ಸದ್ಯಕ್ಕೆ ಯಾವುದೇ ಕ್ರೀಡಾ ಸ್ಪರ್ಧೆಗಳು ನಡೆಯುತ್ತಿಲ್ಲ. ಕೆಲ ಆಟಗಾರರು, ಕ್ರಿಕೆಟಿಗರು ಅಭ್ಯಾಸ ಶುರು ಮಾಡಿದ್ದಾರಷ್ಟೆ. ಅಕ್ಟೋಬರ್‌-ನವೆಂಬರ್‌ನಲ್ಲಿ ಕೊರೊನಾ ಸುಧಾರಿಸುವ ನಿರೀಕ್ಷೆಯನ್ನಿಟ್ಟು ದೇಸೀ ಕ್ರಿಕೆಟ್‌ ಸ್ಪರ್ಧೆಗಳಿಗಾಗಿ ಕಾಯಲಾಗುತ್ತಿದೆ. ಸದ್ಯಕ್ಕೆ ದೇಸೀ ಕ್ರಿಕೆಟ್‌ನ ಯಾವುದೇ ವೇಳಾಪಟ್ಟಿ ಖಾತರಿಗೊಂಡಿಲ್ಲ. ಸೆಪ್ಟೆಂಬರ್‌ನಲ್ಲಿ ಐಪಿಎಲ್ ಆರಂಭವಾದರೆ, ಅಕ್ಟೋಬರ್‌ನಲ್ಲಿ ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿಗಳು ಆರಂಭವಾಗಲಿವೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, August 1, 2020, 18:17 [IST]
Other articles published on Aug 1, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X