ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

350 ಬಡ ಕುಟುಂಬಗಳಿಗೆ ನೆರವೀಯಲಿದ್ದಾರೆ ಕ್ರಿಕೆಟರ್ ಶಹಬಾಝ್ ನದೀಮ್

Coronavirus: Shahbaz Nadeem helping 350 needy families

ರಾಂಚಿ, ಏಪ್ರಿಲ್ 3: ದೇಸಿ ಕ್ರಿಕೆಟ್‌ನಲ್ಲಿ ಝಾರ್ಖಂಡ್‌ ತಂಡದಲ್ಲಿ ಮುಂಚೂಣಿ ಬೌಲರ್ ಆಗಿರುವ ಶಹಬಾಝ್ ನದೀಮ್, ಕೊರೊನಾವೈರಸ್ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೀಡಾಗಿರುವ ಸುಮಾರು 350 ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. 16 ವರ್ಷಗಳ ವೃತ್ತಿಬದುಕು ಕಂಡಿರುವ ನದೀಮ್, ಕೊರೊನಾ ವಿರುದ್ಧದ ಹೋರಾಟಕ್ಕೆ ಜೊತೆಯಾಗಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಗ್ಗೆ ಬಾಯ್ತೆರೆದ ವಿರಾಟ್ ಕೊಹ್ಲಿರಾಯಲ್ ಚಾಲೆಂಜರ್ಸ್ ಬೆಂಗಳೂರು ಬಗ್ಗೆ ಬಾಯ್ತೆರೆದ ವಿರಾಟ್ ಕೊಹ್ಲಿ

ಸದ್ಯ ಧನ್‌ಬಾದ್‌ನ ಝರಿಯಾದಲ್ಲಿ ವಾಸವಿರುವ ಶಹಬಾಝ್ ನದೀಮ್, ಲಾಕ್‌ ಡೌನ್‌ನಿಂದಾಗಿ ತೊಂದರೆಗೊಳಗಾಗಿರುವ ಕುಟುಂಬಗಳ ನೆರವಿಗೆ ನಿಂತಿದ್ದಾರೆ. ತನ್ನ ಮನೆಯ ಆಸುಪಾಸಿನಲ್ಲಿ, ತನ್ನ ಏರಿಯಾದಲ್ಲಿ ವಾಸವಿರುವ ಸುಮಾರು 350 ಕುಟುಂಬಗಳಿಗೆ ಅಕ್ಕಿ, ಸಿರಿಧಾನ್ಯ, ತರಕಾರಿ ಮತ್ತು ಸಕ್ಕರೆ ವಿತರಿಸುತ್ತಿದ್ದಾರೆ.

ಟೀಮ್ ಇಂಡಿಯಾ ಮತ್ತು ಆರ್‌ಸಿಬಿಯಲ್ಲಿ ಕೊಹ್ಲಿಯ ಬೆಸ್ಟ್ ಬ್ಯಾಟಿಂಗ್ ಪಾರ್ಟ್‌ನರ್ಸ್ ಇವರು!ಟೀಮ್ ಇಂಡಿಯಾ ಮತ್ತು ಆರ್‌ಸಿಬಿಯಲ್ಲಿ ಕೊಹ್ಲಿಯ ಬೆಸ್ಟ್ ಬ್ಯಾಟಿಂಗ್ ಪಾರ್ಟ್‌ನರ್ಸ್ ಇವರು!

'ಈವರೆಗೂ ನಾವು ಸುಮಾರು 150 ಕುಟುಂಬಗಳಿಗೆ ಅಗತ್ಯ ಆಹಾರ ವಸ್ತುಗಳನ್ನು ವಿತರಿಸಲು ಸಾಧ್ಯವಾಗಿದೆ. ಇನ್ನೂ ಸುಮಾರು 200 ಹೆಚ್ಚಿನ ಕುಟುಂಬಗಳಿಗೆ ನೆರವೀಯಬೇಕಿದೆ. ನೆರವಿನ ಅಗತ್ಯವಿರುವವರು ಇಲ್ಲಿ ಬಹಳಷ್ಟು ಮಂದಿಯಿದ್ದಾರೆ,' ಎಂದು 30ರ ಹರೆಯದ ನದೀಮ್ ಹೇಳಿಕೊಂಡಿದ್ದಾರೆ.

ಎಜ್‌ಬಾಸ್ಟನ್ ಸ್ಟೇಡಿಯಂ ಇನ್ಮುಂದೆ ಕೊರೊನಾವೈರಸ್ ಪರೀಕ್ಷಾ ಕೇಂದ್ರಎಜ್‌ಬಾಸ್ಟನ್ ಸ್ಟೇಡಿಯಂ ಇನ್ಮುಂದೆ ಕೊರೊನಾವೈರಸ್ ಪರೀಕ್ಷಾ ಕೇಂದ್ರ

'ನೇರ ನೆರವು ನೀಡುವುದರಲ್ಲಿ ನನಗೆ ಹೆಚ್ಚಿನ ನಂಬಿಕೆಯಿದೆ. ಹೀಗಾಗಿಯೇ ನಾವು ಬೆಳಗ್ಗಿನ ಹೊತ್ತಿನಲ್ಲಿ ಅಗತ್ಯದವರಿಗೆ ತಲುಪಿಸಬೇಕಾದ ವಸ್ತುಗಳ ಪ್ಯಾಕೇಜಿಂಗ್‌ನಲ್ಲಿ ಬ್ಯುಸಿಯಾಗುತ್ತಿದ್ದೇವೆ,' ಎಂದು ನದೀಮ್ ವಿವರಿಸಿದರು. ಐಪಿಎಲ್‌ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಆಡುವ ಸ್ಪಿನ್ನರ್ ನದೀಮ್ 62 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 42 ವಿಕೆಟ್ ಮುರಿಸಿದ್ದಾರೆ.

Story first published: Friday, April 3, 2020, 17:55 [IST]
Other articles published on Apr 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X