ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ ವೈರಸ್: ಭಾರತದ ಮಾಜಿ ಕ್ರಿಕೆಟಿಗರ ಐತಿಹಾಸಿಕ ಜೊತೆಯಾಟ ನೆನಪಿಸಿದ ಪ್ರಧಾನಿ ಮೋದಿ

Coronavirus: Time For Another Partnership Says Pm Narendra Modi

ಕೊರೊನಾ ವೈರಸ್ ಭಾರತದಲ್ಲೂ ವ್ಯಾಪಕವಾಗಿ ಹಬ್ಬುತ್ತಿದೆ. ದೇಶಾದ್ಯಂತ ಭಯದ ವಾತಾವರಣ ನಿರ್ಮಾಣವಾಗಿದೆ. ಇಂತಾ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಟೀಮ್ ಇಂಡಿಯಾದ ಮಾಜಿ ಆಟಗಾರರಿಬ್ಬರ ಪಾರ್ಟ್‌ನರ್‌ಶಿಪ್‌ಅನ್ನು ನೆನಪಿಸಿಕೊಂಡಿದ್ದಾರೆ.

ಭಾರತದಲ್ಲಿ ಕೊರೊನಾ ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಒಂದು ದಿನ ಜನತಾ ಕರ್ಫ್ಯೂ ಹೇರುವಂತೆ ಭಾರತದ ಜನತೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಇದಕ್ಕೆ ಭಾರತದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರು ಟೀಮ್ ಇಂಡಿಯಾದ ಮಾಜಿ ಆಟಗಾರರಿಬ್ಬರ ಜೊತೆಯಾಟವನ್ನು ನೆನಪಿಸಿಕೊಂಡಿದ್ದಾರೆ.

ತನ್ನ ನೆಚ್ಚಿನ ಭಾರತದ ಕ್ರಿಕೆಟರ್ ಹೆಸರಿಸಿದ ಪಾಕ್ ದಂತಕತೆ ಮಿಯಾಂದಾದ್ತನ್ನ ನೆಚ್ಚಿನ ಭಾರತದ ಕ್ರಿಕೆಟರ್ ಹೆಸರಿಸಿದ ಪಾಕ್ ದಂತಕತೆ ಮಿಯಾಂದಾದ್

ಹಾಗಾದರೆ ಪ್ರಧಾನಿ ನರೇಂದ್ರ ಮೋದಿ ತಾವು ಯಾವ ಹಿನ್ನೆಲೆಯಲ್ಲಿ ಕ್ರಿಕೆಟನ್ನು ನೆನಪಿಸಿಕೊಂಡಿದ್ದಾರೆ. ಪ್ರಧಾನಿಗಳು ನೆನಪಿಸಿಕೊಂಡ ಟೀಮ್ ಇಂಡಿಯಾದ ಖ್ಯಾತ ಜೋಡಿ ಯಾವುದು ಮುಂದೆ ಓದಿ

ಜನತಾ ಕರ್ಫ್ಯೂಗೆ ಕ್ರಿಕೆಟಿಗರ ಬೆಂಬಲ

ಜನತಾ ಕರ್ಫ್ಯೂಗೆ ಕ್ರಿಕೆಟಿಗರ ಬೆಂಬಲ

ಭಾರತದ ಪ್ರದಾನಿ ನರೇಂದ್ರ ಮೋದಿ ಜನತಾ ಕರ್ಫ್ಯೂಗೆ ಕರೆನೀಡಿದ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಆಟಗಾರರು ಇದಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಸೇರಿದಂತೆ ಅನೇಕ ಕ್ರಿಕೆಟಿಗರು ಸಾರ್ವಜನಿಕರಲ್ಲಿ ಮನವಿಯನ್ನು ಮಾಡಿಕೊಂಡಿದ್ದರು.

ಯುವಿ, ಕೈಫ್ ಮಾಡಿಕೊಂಡ ಮನವಿ

ಪ್ರದಾನಿ ನರೇಂದ್ರ ಮೋದಿಯವರು ನೀಡಿದ್ದ ಜನತಾ ಕರ್ಫ್ಯೂ ಕರೆಗೆ ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಮೊಹಮ್ಮದ್ ಕೈಫ್ ಮತ್ತು ಯುವರಾಜ್‌ಸಿಂಗ್ ಬೆಂಬಲವನನ್ಉ ನೀಡುವಂತೆ ಮನವಿಯನ್ನು ಮಾಡಿಕೊಂಡಿದ್ದರು. ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಇಬ್ಬರೂ ಆಟಗಾರರು ಬರೆದುಕೊಂಡು ಅಭಿಮಾನಿಗಳಲ್ಲಿ ಮನವಿಯನ್ನು ಮಾಡಿಕೊಂಡಿದ್ದರು.

ಕೈಫ್, ಯುವಿ ಐತಿಹಾಸಿಕ ಜೊತೆಯಾಟ ನೆನಪು

ಕೈಫ್, ಯುವಿ ಐತಿಹಾಸಿಕ ಜೊತೆಯಾಟ ನೆನಪು

ಪ್ರದಾನಿ ನರೇಂದ್ರ ಮೋದಿ ಮೊಹಮದ್ ಕೈಫ್ ಮತ್ತು ಯುವರಾಜ್ ಸಿಂಗ್ ಮಾಡಿದ ಮನವಿಗೆ ಈ ಟ್ವೀಟ್‌ನ್ನು ರೀಟ್ವೀಟ್ ಮಾಡಿ ಮತ್ತೊಂದು ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ಯುವರಾಜ್ ಸಿಂಗ್ ಮೊಹಮದ್ ಕೈಫ್ ಜೋಡಿಯ ಐತಿಹಾಸಿಕ ಜೊತೆಯಾಟವನ್ನು ಪ್ರದಾನಿ ನರೇಂದ್ರ ಮೋದಿ ನೆನಪಿಸಿಕೊಂಡಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್‌ನಲ್ಲೇನಿದೆ

'2 ಅತ್ಯುತ್ತಮ ಕ್ರಿಕೆಟಿಗರು ಇಲ್ಲಿದ್ದಾರೆ, ಅವರ ಜೊತೆಯಾಟವನ್ನು ನಾವು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇವೆ. ಈಗ, ಅವರು ಹೇಳಿದಂತೆ, ಇದು ಮತ್ತೊಂದು ಜೊತೆಯಾಟದ ಸಮಯ ಬಂದಿದೆ. ಈ ಬಾರಿ ಭಾರತವು ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಜೊತೆಯಾಗಿ ಹೋರಾಡಬೇಕಿದೆ' ಎಂದು ಟ್ವೀಟ್ ಮಾಡಿದ್ದಾರೆ.

ಅದು ನಾಟ್‌ವೆಸ್ಟ್‌ ಸರಣಿಯ ಫೈನಲ್ ಪಂದ್ಯ

ಅದು ನಾಟ್‌ವೆಸ್ಟ್‌ ಸರಣಿಯ ಫೈನಲ್ ಪಂದ್ಯ

ಹೌದು, ಅದು ಇಂಗ್ಲೆಂಡ್ ವಿರುದ್ಧದ ನಾಟ್‌ವೆಸ್ಟ್‌ ಏಕದಿನ ಸರಣಿಯ ಫೈನಲ್ ಪಂದ್ಯ. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಟೀಮ್ ಇಂಡಿಯಾಗೆ 326ರನ್‌ಗಳ ಬೃಹತ್‌ ಟಾರ್ಗೆಟನ್ನು ನೀಡಿತ್ತು. ಇದನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು.

ಕೈಫ್ ಯುವಿ ಜೊತೆಯಾಟ

ಕೈಫ್ ಯುವಿ ಜೊತೆಯಾಟ

146 ರನ್‌ಗಳಿಸಿದ ಟೀಮ್ ಇಂಡಿಯಾ ಈ ಸಂದರ್ಭದಲ್ಲಿ ತನ್ನ ಅಮೂಲ್ಯ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಎಲ್ಲರೂ ಟೀಮ್ ಇಂಡಿಯಾ ಸೋಲುವುದನ್ನು ಖಚಿತಪಡಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಕ್ರೀಸ್‌ನಲ್ಲಿ ಯುವರಾಜ್ ಸಿಂಗ್ ಮತ್ತು ಮೊಹಮದ್ ಕೈಫ್ ಕೂಡಿಕೊಂಡು ಅಚ್ಚರಿಯನ್ನು ಸೃಷ್ಟಿಸಿಬಿಟ್ಟಿದ್ದರು.

121 ರನ್‌ಗಳ ಅಮೂಲ್ಯ ಜೊತೆಯಾಟವದು

121 ರನ್‌ಗಳ ಅಮೂಲ್ಯ ಜೊತೆಯಾಟವದು

ಈ ಜೋಡಿ ಅಂದಿನ ಪಂದ್ಯದಲ್ಲಿ ಅಮೂಲ್ಯ 121 ರನ್‌ಗಳ ಜೊತೆಯಾಟವನ್ನು ನೀಡಿತು. ಟೀಮ್ ಇಂಡಿಯಾವನ್ನು ಗೆಲುವಿನ ಸನಿಹಕ್ಕೆ ತಲುಪಿಸಿತು. ಬಳಿಕ ಯುವರಾಜ್ ಸಿಂಗ್ 69 ರನ್‌ಗಳಿಸಿ ಔಟಾದರೂ ಮೊಹಮದ್ ಕೈಫ್ ಬಾಲಂಗೋಚಿಗಳ ನೆರವಿನೊಂದಿಗೆ ಈ ಪಂದ್ಯವನ್ನು ಕೊನೆಯ ಓವರ್‌ನಲ್ಲಿ ಗೆಲ್ಲಿಸಿಕೊಟ್ಟಿದ್ದರು. ಈ ಗೆಲುವು ಟೀಮ್ ಇಂಡಿಯಾಗೆ ದೊಡ್ಡ ಬಲವನ್ನು ನೀಡಿತ್ತು.

ಸಂಕಷ್ಟದ ಸಂದರ್ಭದಲ್ಲಿ ಜೊತೆಯಾಗೋಣ

ಸಂಕಷ್ಟದ ಸಂದರ್ಭದಲ್ಲಿ ಜೊತೆಯಾಗೋಣ

ಭಾರತದ ಪ್ರಧಾನಿ ನೆನಪಿಸಿಕೊಂಡಿದ್ದು ಇದೇ ಇನ್ನಿಂಗ್ಸ್‌ನ್ನು. ಭಾರತದ ಎಲ್ಲಾ ಪ್ರಜೆಗಳು ಈ ಸಂಕಷ್ಟದ ಸಂದರ್ಭದಲ್ಲಿ ಯುವರಾಜ್ ಸಿಂಗ್ ಮೊಹಮದ್ ಕೈಫ್ ರೀತಿಯಲ್ಲಿ ಜೊತೆಯಾಗೋಣ ಎಂದು ಕರೆ ನೀಡಿದ್ದಾರೆ.

Story first published: Sunday, March 22, 2020, 12:21 [IST]
Other articles published on Mar 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X