ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಪ್ರೇಮಿಗಳ ಹೃದಯಗೆದ್ದ ಟಾಪ್ 5 ಟಿವಿ ನಿರೂಪಕಿಯರು ಇವರು!

Corrent Top 5 Female Anchors Of Cricket

ಕ್ರಿಕೆಟ್ ವಿಶ್ವದ ಖ್ಯಾತ ಕ್ರೀಡೆಗಳಲ್ಲಿ ಒಂದು. ಆಟವಾಗಿ ಮಾತ್ರವೇ ಅಭಿಮಾನಿಗಳನ್ನು ಹೊಂದಿದ್ದ ಈ ಕ್ರೀಡೆಗೆ ಗ್ಲಾಮರ್ ಟಚ್ ದೊರೆತು ದಶಕಗಳು ಕಳೆದಿದೆ. ಐಪಿಎಲ್‌ನಂತಾ ಕ್ರಿಕೆಟ್‌ ಲೀಗ್ ಟೂರ್ನಿ ಕ್ರೀಡೆಯ ಜೊತೆ ಜೊತೆಗೆ ವೀಕ್ಷಕರನ್ನು ಸೆಳೆಯಲು ಚಿಯರ್ ಗರ್ಲ್‌ ಸೇರಿದಂತೆ ಅನೇಕ ಸಂಗತಿಗಳು ಕ್ರಿಕೆಟ್‌ನ ಭಾಗವಾಗಿ ಬಿಟ್ಟಿತು.

ಅದರಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ ಟಿವಿ ನಿರೂಪಕಿಯರು. ಪುರುಷ ನಿರೂಪಕರೇ ಹೆಚ್ಚಾಗಿದ್ದ ಕ್ರಿಕೆಟ್‌ನಲ್ಲಿ ಐಪಿಎಲ್ ಬಳಿಕ ಮಹಿಳಾ ನಿರೂಪಕಿಯರು ರಾರಾಜಿಸಲು ಆರಂಭಿಸಿದರು. ಸುಂದರ ನಿರೂಪಕಿಯರು ಕ್ರಿಕೆಟ್ ಬಗ್ಗೆ ತಮ್ಮದೇ ಶೈಲಿಯಲ್ಲಿ ಮಾಡುವ ನಿರೂಪಣೆ ಈಗ ಖ್ಯಾತಿ ಪಡೆದುಕೊಂಡಿದೆ. ಹೀಗಾಗಿ ನೇರ ಪ್ರಸಾರ ಮಾಡುವ ವಾಹಿನಿಗಳು ಆಟದ ಜೊತೆಗೆ ನಿರೂಪಣೆಯ ಕಡೆಗೂ ಸಾಕಷ್ಟು ಮಹತ್ವ ನೀಡುತ್ತಿದೆ.

ಏಕದಿನದಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳು!ಏಕದಿನದಲ್ಲಿ ಅತೀ ಹೆಚ್ಚು ಬಾರಿ ಹ್ಯಾಟ್ರಿಕ್ ವಿಕೆಟ್ ಪಡೆದ ಟಾಪ್ 5 ಬೌಲರ್‌ಗಳು!

ಹೀಗೆ ಕ್ರಿಕೆಟ್ ಲೋಕದಲ್ಲಿ ತಮ್ಮ ಸೌಂದರ್ಯ ಮತ್ತು ನಿರೂಪಣೆ ಎರಡೂ ಕಾರಣಗಳಿಂದ ಕೆಲ ನಿರೂಪಕಿಯರು ಸಾಕಷ್ಟು ಖ್ಯಾತಿಯನ್ನು ಗಳಿಸಿದ್ದಾರೆ. ಅಂತಾ ಟಾಪ್ ಐದು ನಿರೂಪಕಿಯರು ಯಾರು ಎಂಬುದನ್ನು ಬನ್ನಿ ನೋಡೋಣ

ಟಾಪ್ 5: ಇಸಾ ಗುಹಾ

ಟಾಪ್ 5: ಇಸಾ ಗುಹಾ

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟ್ ಆಟಗಾರ್ತಿ ಇಸಾ ಗುಹಾ ಕ್ರಿಕೆಟ್ ತೊರೆದ ಬಳಿಕ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಕ್ರಿಕೆಟ್ ಲೋಕದ ಜನಪ್ರಿಯ ನಿರೂಪಕಿಯರಲ್ಲಿ ಇಸಾ ಒಬ್ಬರಾಗಿದ್ದಾರೆ. 19ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ತಂಡ ಪ್ರಶಸ್ತಿ ಮುಡಿಗೇರಿಸಿದ ಸಂದರ್ಭದಲ್ಲಿ ಗುಹಾ ಪ್ರಸಾರ ಮಾಧ್ಯಮದ ತಂಡದಲ್ಲಿ ಇದ್ದರು. ಟೆಸ್ಟ್‌ ಮ್ಯಾಚ್‌ ಸ್ಪೆಷಲಿಸ್ಟ್‌ ಕಾಮೆಂಟೇಟರ್‌ ಕೂಡ ಆಗಿರುವ ಇಸಾ, ಬಿಬಿಸಿ ಸ್ಪೋರ್ಟ್ಸ್‌ನಲ್ಲಿ ಲೇಖನಗಳನ್ನೂ ಬರೆಯುತ್ತಾರೆ. ಈಕೆ ಭಾರತೀಯ ಸಂಜಾತೆ ಎಂಬುದು ವಿಶೇಷ.

ಟಾಪ್ 4: ಎರಿನ್‌ ಹಾಲ್ಯಾಂಡ್‌

ಟಾಪ್ 4: ಎರಿನ್‌ ಹಾಲ್ಯಾಂಡ್‌

ಕ್ರಿಕೆಟ್ ಲೋಕದ ಮತ್ತೋರ್ವ ಪ್ರಖ್ಯಾತ ನಿರೂಪಕಿ ಎಂದರೆ ಅದು ಎರಿನ್‌ ಹಾಲ್ಯಾಂಡ್‌. ಕ್ರಿಕೆಟ್‌ ಆಸ್ಟ್ರೇಲಿಯಾದ ಮಹಿಳಾ ನಿರೂಪಕಿಯರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಈಕೆ 2013ರಲ್ಲಿ ಮಿಸ್‌ ವರ್ಲ್ಡ್‌ ಆಸ್ಟ್ರೇಲಿಯಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಬಿಗ್ ಬ್ಯಾಗ್ ಬ್ಯಾಷ್‌ಲೀಗ್‌ನ ಪ್ರಮುಖ ಆಕರ್ಷಣೆಯಲ್ಲಿ ಎರಿನ್ ಕೂಡ ಒಬ್ಬರು. ಈಕೆ ಆಸಿಸ್ ಕ್ರಿಕೆಟರ್ ಬೆನ್ ಕಟ್ಟಿಂಗ್ ಅವರ ಪ್ರೇಯಸಿಯೂ ಹೌದು.

ಟಾಪ್ 3: ಝೈನಬ್‌ ಅಬ್ಬಾಸ್‌

ಟಾಪ್ 3: ಝೈನಬ್‌ ಅಬ್ಬಾಸ್‌

ಖ್ಯಾತ ನಿರೂಪಕಿಯರ ಪಟ್ಟಿಯಲ್ಲಿರುವ ಮೂರನೇ ಹೆಸರು ಪಾಕಿಸ್ತಾನದ ನಿರೂಪಕಿ ಝೈನಬ್‌ ಅಬ್ಬಾಸ್‌ ಅವರದ್ದು. ಮೇಕಪ್ ಕಲಾವಿದೆಯಾಗಿದ್ದ ಝೈನಬ್ 2015ರಲ್ಲಿ ಮೊದಲ ಬಾರಿ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ನಿರೂಪಣೆಯ ಅವಕಾಶ ಪಡೆದು ಸೈ ಎನಿಸಿಕೊಂಡರು. ಪಾಕಿಸ್ತಾನ್‌ ಸೂಪರ್‌ ಲೀಗ್‌ನಲ್ಲಿ 2017ರ ಬಳಿಕ ನಿರೂಪಕಿಯಾಗಿ ಕಾಣಿಸಿಕೊಂಡ ಝೈನಬ್, 2019ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಎಲ್ಲಾ ಪಂದ್ಯಗಳಿಗೆ ನಿರೂಪಣೆ ಒದಗಿಸಿದ್ದರು.

ಟಾಪ್ 2: ಜನ್ನುತಲ್‌ ಪೇಯಾ

ಟಾಪ್ 2: ಜನ್ನುತಲ್‌ ಪೇಯಾ

ಪ್ರಖ್ಯಾತ ಕ್ರಿಕೆಟ್ ನಿರೂಪಕಿಯರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿರುವುದು ಬಾಂಗ್ಲಾದೇಶ ಮೂಲದ ನಿರೂಪಕಿ ಜನ್ನುತಲ್‌ ಪೇಯಾ. ಈಕೆ 2007ರಲ್ಲಿ ಮಿಸ್ ಬಾಂಗ್ಲಾದೇಶ ಪಟ್ಟವನ್ನು ಗೆದ್ದಿದ್ದರು. ಬಾಂಗ್ಲಾದೇಶ ಪ್ರೀಮಿಯರ್‌ನಲ್ಲಿ ನಿರೂಪಣೆ ಮಾಡಿ ಸೈ ಎನಿಸಿಕೊಂಡ ಜನ್ನುತಲ್‌ ಪೇಯಾ 2019ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ ಆತಿಥ್ಯದಲ್ಲಿ ನಡೆದ ಐಸಿಸಿ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲೂ ನಿರೂಪಣೆ ಮಾಡುವ ಅವಕಾಶ ಗಿಟ್ಟಿಸಿಕೊಂಡರು. ಈ ಮೂಲಕ ವಿಶ್ವಕಪ್‌ ಟೂರ್ನಿಯಲ್ಲಿ ನಿರೂಪಣೆ ಮಾಡಿದ ಬಾಂಗ್ಲಾದೇಶದ ಮೊತ್ತ ಮೊದಲ ಮಹಿಳಾ ಆಂಕರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಟಾಪ್ 1: ಮಯಾಂತಿ ಲ್ಯಾಂಗರ್

ಟಾಪ್ 1: ಮಯಾಂತಿ ಲ್ಯಾಂಗರ್

ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿರುವ ನಿರೂಪಕಿ ಭಾರತದ ಮಯಾಂತಿ ಲ್ಯಾಂಗರ್. ಐಪಿಎಲ್‌ನಲ್ಲಿ ನಿರೂಪಣೆ ಮಾಡಿ ಮಯಾಂತಿ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಪ್ರಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ದಿಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಸೇರಿದಂತೆ ಅನೇಕ ಕ್ರೀಡಾಕೂಟಗಳಿಗೆ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಸಕ್ತ ಐಪಿಎಲ್ ಸೇರಿದಂತೆ ಭಾರತ ಕ್ರಿಕೆಟ್ ತಂಡ ಪಾಲ್ಗೊಳ್ಳುವ ಎಲ್ಲಾ ಟೂರ್ನಿಗೂ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಸ್ಟುವರ್ಟ್ ಬಿನ್ನಿ ಅವರನ್ನು ಮಯಾಂತಿ 2012ರಲ್ಲಿ ವಿವಾಹವಾಗಿದ್ದಾರೆ.

Story first published: Tuesday, May 19, 2020, 22:34 [IST]
Other articles published on May 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X