ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇನ್ನೊಂದು ವಿಶ್ವಕಪ್‌ನಲ್ಲಿ ಆಡಬೇಕೆಂದಿದ್ದೆ: ಆಸೆ ಬಿಚ್ಚಿಟ್ಟ ಯುವರಾಜ್ ಸಿಂಗ್!

ಕೋಟ್ಯಾಂತರ ಅಭಿಮಾನಿಗಳ ಆಸೆ ಪಟ್ಟಿದ್ದು ಇದನ್ನೆ. | yuvraj singh
Could’ve played another World Cup says Yuvraj Singh

ನವದೆಹಲಿ, ಸೆಪ್ಟೆಂಬರ್ 27: ಐಸಿಸಿ ಕ್ರಿಕೆಟ್ ವಿಶ್ವಕಪ್ 2019ಕ್ಕೆ ಭಾರತ ತಂಡ ಪ್ರಕಟಗೊಂಡಾಗ ತಂಡದಲ್ಲಿ ಸಿಕ್ಸರ್ ಕಿಂಗ್ ಯುವರಾಜ್ ಹೆಸರು ಇದೆಯೇ ಎಂದು ಬಹಳಷ್ಟು ಮಂದಿ ಹುಡುಕಾಡಿದ್ದರು. ಆದರೆ ಅಲ್ಲಿ ಸ್ಫೋಟಕ ಬ್ಯಾಟ್‌ಮನ್ ಯುವಿ ಹೆಸರು ಕಾಣಿಸದೆ ಅನೇಕ ಅಭಿಮಾನಿಗಳು ನಿರಾಶೆ ವ್ಯಕ್ತ ಪಡಿಸಿದ್ದರು.

ತಂಡದಿಂದ ಎಂಎಸ್ ಧೋನಿ ಹೊರಗುಳಿಯಲು ಅಸಲಿ ಕಾರಣ ಬಹಿರಂಗ!ತಂಡದಿಂದ ಎಂಎಸ್ ಧೋನಿ ಹೊರಗುಳಿಯಲು ಅಸಲಿ ಕಾರಣ ಬಹಿರಂಗ!

ವಿಶ್ವಕಪ್‌ಗೂ ಮುನ್ನ ಯುವರಾಜ್ ಸಿಂಗ್‌ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರಲಿಲ್ಲ. ಅಂತಾರಾಷ್ಟ್ರೀಯ ಪಂದ್ಯಗಳಿಗೆ ಬಿಸಿಸಿಐ ಯುವಿಯನ್ನು ಹೆಸರಿಸಿರಲಿಲ್ಲ ಕೂಡ. ಆದರೆ ವಿಶ್ವಕಪ್‌ ಆರಂಭಕ್ಕೂ ಮುನ್ನ ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸಿಂಗ್ ಕಾಣಿಸಿಕೊಂಡಿದ್ದರಿಂದ ವಿಶ್ವಕಪ್‌ನಲ್ಲಿ ಯುವಿಗೆ ಅವಕಾಶ ದೊರೆತರೂ ದೊರೆಯಬಹುದು ಎಂಬ ನಿರೀಕ್ಷೆ ಕ್ರಿಕೆಟ್‌ ಅಭಿಮಾನಿಗಳಲ್ಲಿತ್ತು.

ಭಾರತ vs ದಕ್ಷಿಣ ಆಫ್ರಿಕಾ: 1ನೇ ಟೆಸ್ಟ್‌ಗೆ ಪಂತ್‌ ಬದಲು ಸಹಾಗೆ ಸ್ಥಾನ?!ಭಾರತ vs ದಕ್ಷಿಣ ಆಫ್ರಿಕಾ: 1ನೇ ಟೆಸ್ಟ್‌ಗೆ ಪಂತ್‌ ಬದಲು ಸಹಾಗೆ ಸ್ಥಾನ?!

ಯುವರಾಜ್‌ಗೂ ಮತ್ತೊಂದು ವಿಶ್ವಕಪ್‌ನಲ್ಲಿ ಆಡಲು ಆಸೆಯಿತ್ತಂತೆ. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ನನಗೆ ವಿಷಾದವಾಗುತ್ತಿದೆ

ನನಗೆ ವಿಷಾದವಾಗುತ್ತಿದೆ

'2011ರ ವಿಶ್ವಕಪ್‌ ಬಳಿಕ ನಾನು ಮತ್ತೊಂದು ವಿಶ್ವಕಪ್‌ನಲ್ಲಿ ಆಡಬೇಕಿತ್ತು ಎಂದು ನನಗೆ ವಿಷಾದವಾಗುತ್ತಿದೆ. ತಂಡ ನಿರ್ವಹಣಾ ಸಮಿತಿಯಿಂದ ಅಥವಾ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳಿಂದ ನನಗೆ ಬೆಂಬಲ ದೊರೆತಿದ್ದರೆ ನಾನು ಇನ್ನೊಂದು ವಿಶ್ವಕಪ್‌ನಲ್ಲಿ ಆಡುತ್ತಿದ್ದೆ,' ಎಂದು ಯುವಿ ಬೇಸರ ವ್ಯಕ್ತಪಡಿಸಿದ್ದಾರೆ.

ಗಾಡ್ ಫಾದರ್ ಇರಲಿಲ್ಲ

ಗಾಡ್ ಫಾದರ್ ಇರಲಿಲ್ಲ

ಆಜ್‌ತಕ್ ಚಾನೆಲ್ ಜೊತೆ ಮಾತನಾಡುತ್ತ ಯುವರಾಜ್, 'ಆದರೆ ನಾನೇನು ಕ್ರಿಕೆಟ್‌ ಆಡಿದ್ದೆನೋ ಅವೆಲ್ಲವೂ ನನ್ನದೇ ಸ್ವಂತ ಆಟ. ಯಾಕೆಂದರೆ ನನಗ್ಯಾರೂ ಗಾಡ್ ಫಾದರ್ ಇರಲಿಲ್ಲ,' ಎಂದು ಹೇಳಿಕೊಂಡಿದ್ದಾರೆ. 2019 ಜೂನ್ 10ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕೆಚ್ಚೆದೆಯ ಮಹಾರಾಜ ಯುವಿ ನಿವೃತ್ತಿ ಘೋಷಿಸಿದ್ದರು.

ತಂಡ ನಿರ್ವಹಣಾ ಸಮಿತಿಯ ಹುನ್ನಾರ

ತಂಡ ನಿರ್ವಹಣಾ ಸಮಿತಿಯ ಹುನ್ನಾರ

ಕಡ್ಡಾಯ ಫಿಟ್‌ನೆಸ್‌ ಟೆಸ್ಟ್‌ನಲ್ಲಿ ಪಾಸಾಗಿಯೂ ತನ್ನನ್ನು ತಂಡ ಸಮಿತಿ ಕಡೆಗಣಿಸಿದೆ ಎಂದು ಮತ್ತೊಂದು ಸ್ಫೋಟಕ ವಿಚಾರ ಯುವಿ ಬಾಯ್ಬಿಟ್ಟಿದ್ದಾರೆ. 'ನಾನು ಗಾಯಗೊಂಡಿದ್ದೆ. ಶ್ರೀಲಂಕಾ ವಿರುದ್ಧದ ಸರಣಿಗಾಗಿ ತಯಾರಾಗುವುದಾಗಿ ಹೇಳಿದ್ದೆ. ತಕ್ಷಣ ನನಗೆ ಯೋಯೋ ಫಿಟ್‌ನೆಸ್‌ ಟೆಸ್ಟ್‌ಗೆ ಹೇಳಲಾಯಿತು. 36ರ ಹರೆಯದಲ್ಲೂ ನಾನು ಯೋಯೋ ಟೆಸ್ಟ್ ಮುಗಿಸಿದೆ. ಆ ನಂತರ ನನಗೆ ದೇಸಿ ಕ್ರಿಕೆಟ್‌ನಲ್ಲಿ ಆಡಲು ತಿಳಿಸಲಾಯ್ತು. ಯಾಕೆಂದರೆ ತಂಡ ತಮಿತಿ ನಾನು 36ರ ಹರೆಯದಲ್ಲಿ ಯೋಯೋ ಟೆಸ್ಟ್‌ ಪಾಸ್ ಮಾಡಲಾರೆ ಎಂದು ಯೋಚಿಸಿತ್ತು. ಇದಕ್ಕೆ ಬೇಸತ್ತು ಮುಂದೆ ನಾನೇ ಆವಕಾಶ ನಿರಾಕರಿಸಿದೆ,' ಎಂದು ಸಿಂಗ್ ಹೇಳಿದ್ದಾರೆ.

ಯಾವತ್ತೂ ಧಾವಿಸಿರಲಿಲ್ಲ

ಯಾವತ್ತೂ ಧಾವಿಸಿರಲಿಲ್ಲ

'2017ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ 8-9 ಪಂದ್ಯಗಳಲ್ಲಿ 2ರಲ್ಲಿ ಮ್ಯಾನ್‌ ಆಫ್‌ ದ ಮ್ಯಾಚ್ ಪ್ರಶಸ್ತಿ ಗೆದ್ದಿದ್ದ ನನ್ನನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಕಡೆಗಣಿಸಲಾಗುತ್ತದೆ ಎಂದು ಯಾವತ್ತೂ ಧಾವಿಸಿರಲಿಲ್ಲ,' ಎಂದು ಯುವಿ ತಂಡ ಸಮಿತಿಯ ನಿರ್ಲಕ್ಷ್ಯದ ಬಗ್ಗೆ ಯುವರಾಜ್ ಬೇಸರ ತೋರಿಕೊಂಡಿದ್ದಾರೆ.

Story first published: Friday, September 27, 2019, 16:21 [IST]
Other articles published on Sep 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X