ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಡೆಲ್ಲಿ ಕ್ಯಾಪಿಟಲ್ಸ್ ಶಿಬಿರದಲ್ಲಿ ಕೋವಿಡ್-19 ಪಾಸಿಟಿವ್ ಪತ್ತೆ; CSK vs DC ಪಂದ್ಯದ ಗತಿ ಏನು?

ಇತ್ತೀಚೆಗೆ ನಡೆದ ಕೋವಿಡ್ ಪರೀಕ್ಷೆಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಶಿಬಿರದ ಒಬ್ಬ ಸದಸ್ಯನಿಗೆ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದ್ದು, ಹೀಗಾಗಿ ಇಡೀ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮತ್ತೊಮ್ಮೆ ಐಸೋಲೇಷನ್‌ಗೆ ಒಳಪಡಿಸಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮತ್ತು ಬಿಸಿಸಿಐ ಮೂಲಗಳ ಪ್ರಕಾರ ತಂಡದ ನೆಟ್ ಬೌಲರ್‌ಗೆ ಪರೀಕ್ಷೆ ವೇಳೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವುದನ್ನು ಬಹಿರಂಗಪಡಿಸಿವೆ ಎಂದು ಕ್ರಿಕ್‌ಬಝ್ ವೆಬ್‌ಸೈಟ್‌ ವರದಿ ಮಾಡಿದೆ.

Covid-19 Positive Case Reported At Delhi Capitals Camp; What is the Pace of the CSK vs DC Match?


ಭಾನುವಾರ (ಮೇ 8) ಸಂಜೆ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕ್ಯಾಪಿಟಲ್ಸ್ ತನ್ನ 11ನೇ ಪಂದ್ಯವನ್ನು ಆಡುವ ಕೆಲವೇ ಗಂಟೆಗಳ ಮೊದಲು ಈ ಆಘಾತಕಾರಿ ಬೆಳವಣಿಗೆ ನಡೆದಿದೆ.

ಭಾನುವಾರ ಬೆಳಗ್ಗೆ ಮತ್ತೊಂದು ಸುತ್ತಿನ ಕೋವಿಡ್ ಪರೀಕ್ಷೆ ನಡೆದಿದೆ ಎಂದು ಮೂಲಗಳು ಬಹಿರಂಗಪಡಿಸಿದ್ದು, ಈ ಅನಿಶ್ಚಿತತೆಯಿಂದ ಎಲ್ಲಾ ಸದಸ್ಯರು ತಮ್ಮ ಕೋಣೆಗಳಿಗೆ ಸೀಮಿತರಾಗಿದ್ದಾರೆ.

Covid-19 Positive Case Reported At Delhi Capitals Camp; What is the Pace of the CSK vs DC Match?

ಐಪಿಎಲ್ 2022ರ ಅವಧಿಯಲ್ಲಿ ಇದು ಎರಡನೇ ಬಾರಿಗೆ ದೆಹಲಿ ತಂಡವನ್ನು ಐಸೋಲೇಷನ್ ಮಾಡಲಾಗಿದೆ. ಈ ಋತುವಿನ ಆರಂಭದಲ್ಲಿ ತಂಡದ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್, ಆಲ್ ರೌಂಡರ್ ಮಿಚೆಲ್ ಮಾರ್ಷ್, ಕೀಪರ್-ಬ್ಯಾಟರ್ ಟಿಮ್ ಸೀಫರ್ಟ್ ಮತ್ತು ಇತರ ಮೂವರು ಆಡದ ಸದಸ್ಯರು ಸೇರಿದಂತೆ ತಂಡದ ಆರು ಸದಸ್ಯರು ಕೊರೊನಾ ವೈರಸ್ ಪಾಸಿಟಿವ್ ದೃಢಪಟ್ಟಿತ್ತು.

ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಅವರ ಪಂದ್ಯಗಳನ್ನು ಮೂಲತಃ ಪುಣೆಯಲ್ಲಿ ಆಡಬೇಕಾಗಿತ್ತು, ನಂತರ ಮುಂಬೈಗೆ ಸ್ಥಳಾಂತರಿಸಲಾಯಿತು.

ಬಿಸಿಸಿಐ ಈ ಕುರಿತು ಇನ್ನೂ ಯಾವುದೇ ಘೋಷಣೆ ಮಾಡಿಲ್ಲ, ಆದರೆ ಫ್ರಾಂಚೈಸಿಗಳ ಮೂಲಗಳ ಪ್ರಕಾರ ಪಂದ್ಯದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯನ್ನು ನಿರೀಕ್ಷಿಸುತ್ತಿಲ್ಲ ಎಂದು ಹೇಳಿದ್ದಾರೆ.

Maviಗೆ ಒಂದೇ ಓವರ್‌ನಲ್ಲಿ 5 ಸಿಕ್ಸರ್ | Oneindia Kannada

"ಪಂದ್ಯವು ಮುಂದುವರಿಯುತ್ತದೆ ಎಂದು ನಾವು ಅಂದುಕೊಂಡಿದ್ದೇವೆ, ಇಲ್ಲದಿದ್ದರೆ ನಮಗೆ ಈಗಾಗಲೇ ತಿಳಿಸಲಾಗುತ್ತಿತ್ತು, ಇದು ಕೇವಲ ನೆಟ್ ಬೌಲರ್‌ಗೆ ಪಾಸಿಟಿವ್ ಕಾಣಿಸಿಕೊಂಡಿದೆ ಮತ್ತು ಎಲ್ಲಾ ಆಟಗಾರರು ಅವರ ಕೊಠಡಿಗಳಲ್ಲಿದ್ದಾರೆ. ಆದ್ದರಿಂದ ನಾವು ಬದಲಾವಣೆಗಳನ್ನು ನಿರೀಕ್ಷಿಸುವುದಿಲ್ಲ," ಎಂದು ಸಿಎಸ್‌ಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ.

Story first published: Sunday, May 8, 2022, 15:23 [IST]
Other articles published on May 8, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X