ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶಕೀಬ್ ಅಲ್ ಹಸನ್‌ಗೆ ಕೊರೊನಾ ಪಾಸಿಟಿವ್; ಲಂಕಾ ವಿರುದ್ಧದ ಮೊದಲ ಟೆಸ್ಟ್‌ನಿಂದ ಔಟ್

Covid-19 Reported Positive for Shakib Al Hasan; He Ruled Out Of First Test Against Sri Lanka

ಬಾಂಗ್ಲಾದೇಶದ ಆಲ್‌ರೌಂಡರ್ ಹಾಗೂ ಮಾಜಿ ನಾಯಕ ಶಕೀಬ್ ಅಲ್ ಹಸನ್ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಮಾಗುರಾದಲ್ಲಿ ಜನಿಸಿಸುರವ ಕ್ರಿಕೆಟಿಗ ಶಕೀಬ್ ಅಲ್ ಹಸನ್ ಮಂಗಳವಾರ, ಮೇ 10 ರಂದು ಆರ್‌ಟಿ-ಪಿಸಿಆರ್ ಮತ್ತು ಕ್ಷಿಪ್ರ ಪ್ರತಿಜನಕ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದಿದೆ.

ಸೋಮವಾರದಂದು, ಬಾಂಗ್ಲಾದೇಶದ ರಾಷ್ಟ್ರೀಯ ತಂಡವು ಚಟ್ಟೋಗ್ರಾಮ್‌ನಲ್ಲಿ ಅಭ್ಯಾಸವನ್ನು ಪ್ರಾರಂಭಿಸಿದ್ದು, ಶಕೀಬ್ ಬುಧವಾರ ತಂಡವನ್ನು ಕೂಡಿಕೊಳ್ಳುವ ನಿರೀಕ್ಷೆಯಿದೆ. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಹೇಳಿಕೆಯ ಪ್ರಕಾರ, "ಅನುಭವಿ ಸ್ವಯಂ-ಪ್ರತ್ಯೇಕತೆಗೆ ಹೋಗಿದ್ದಾರೆ ಮತ್ತು ಕೆಲವೇ ದಿನಗಳಲ್ಲಿ ಮತ್ತೊಂದು ಪರೀಕ್ಷೆಗೆ ಒಳಗಾಗಲಿದ್ದಾರೆ' ಎಂದು ತಿಳಿಸಿದೆ.

ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಭಾನುವಾರ ಮೇ 15ರಿಂದ ಮೊದಲ ಟೆಸ್ಟ್ ನಡೆಯಲಿದೆ. ಆತಿಥೇಯರು 35 ವರ್ಷ ವಯಸ್ಸಿನ ಬದಲಿ ಆಟಗಾರನನ್ನು ಇನ್ನೂ ಹೆಸರಿಸಿಲ್ಲ. ಇದಕ್ಕೂ ಮೊದಲು ಬಾಂಗ್ಲಾ ಆಲ್ ರೌಂಡರ್ ಮೆಹಿದಿ ಹಸನ್ ಮಿರಾಜ್ ಮತ್ತು ವೇಗದ ಬೌಲರ್ ತಸ್ಕಿನ್ ಅಹ್ಮದ್ ಅವರ ಸೇವೆಯನ್ನು ತಪ್ಪಿಸಿಕೊಂಡಿದೆ.

Covid-19 Reported Positive for Shakib Al Hasan; He Ruled Out Of First Test Against Sri Lanka

ಬಾಂಗ್ಲಾದೇಶ ಕೂಡ ಆಲ್‌ರೌಂಡರ್ ಮೊಸದ್ದೆಕ್ ಹೊಸೈನ್ ಸೈಕತ್ ಅವರನ್ನು ಮೆಹಿದಿಗೆ ಕವರ್ ಆಗಿ ಆಯ್ಕೆ ಮಾಡಿದೆ. ಮೊದಲ ಟೆಸ್ಟ್‌ನಲ್ಲಿ ಸ್ಪೀಡ್‌ಸ್ಟರ್ ಶೋರಿಫುಲ್ ಇಸ್ಲಾಂ ಫಿಟ್‌ನೆಸ್‌ಗೆ ಒಳಪಟ್ಟಿದ್ದಾರೆ. ಇನ್ನು ಶಕೀಬ್ ಅಲ್ ಹಸನ್‌ಗೆ ಕುರಿತಾಗಿ ಹೇಳುವುದಾದರೆ, ಅವರು ತಮ್ಮ ಒಂದು ವರ್ಷದ ನಿಷೇಧದಿಂದ ಮರಳಿದ ನಂತರ ಬಾಂಗ್ಲಾದೇಶ ಆಡಿದ 11 ಟೆಸ್ಟ್‌ಗಳಲ್ಲಿ ಕೇವಲ 3ರಲ್ಲಿ ಮಾತ್ರ ಆಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶ ಬ್ಯಾಟ್ಸ್‌ಮನ್‌ಗಳು ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಪ್ರಯಾಸಪಟ್ಟರು. ಶಕೀಬ್ ಅವರ ಅನುಪಸ್ಥಿತಿಯು ಅವರ ಮಧ್ಯಮ ಕ್ರಮಾಂಕವನ್ನು ಮತ್ತಷ್ಟು ದುರ್ಬಲಗೊಳಿಸಿದೆ. ಆದರೆ ಬಾಂಗ್ಲಾ ತಂಡದವರು ತಮ್ಮ ಆಡುವ ಹನ್ನೊಂದರ ಬಳಗದಲ್ಲಿ ಶಕಿಬ್ ಇಲ್ಲದೆ ಮೌಂಟ್ ಮೌಂಗನುಯಿ ಬೇ ಓವಲ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿದರು ಎಂಬ ಅಂಶ ಆಟಗಾರರಿಗೆ ಹುಮ್ಮಸ್ಸು ನೀಡಲಿದೆ.

Lucknow ತಂಡದವರು ಸುಲಭವಾದ ಪಂದ್ಯವನ್ನು ಸೋತಿದ್ದು ಹೀಗೆ | Oneindia Kannada

ಶ್ರೀಲಂಕಾದ ಬಾಂಗ್ಲಾದೇಶ ಪ್ರವಾಸದ ಎರಡನೇ ಮತ್ತು ಅಂತಿಮ ಟೆಸ್ಟ್ ಸೋಮವಾರ, ಮೇ 23 ರಂದು ಢಾಕಾದ ಶೇರ್-ಎ-ಬಾಂಗ್ಲಾ ನ್ಯಾಷನಲ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ.

Story first published: Wednesday, May 11, 2022, 9:18 [IST]
Other articles published on May 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X