ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಧೋನಿ ಹೆತ್ತವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ ಕೋಚ್ ಫ್ಲೆಮಿಂಗ್

COVID-19 situation in MS Dhonis family under control, will monitor: CSK coach Fleming

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರ ಹೆತ್ತವರು ಕೊರೊನಾ ಸೋಂಕಿಗೆ ತುತ್ತಾಗಿ ರಾಂಚಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಮಾಹಿತಿಯನ್ನು ನೀಡಿದ್ದು ಧೋನಿ ಕುಟುಂಬದ್ಥರ ಆರೋಗ್ಯದ ಬಗ್ಗೆ ಚೆನ್ನೈ ಫ್ರಾಂಚೈಸಿ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಧೋನಿ ಕುಟುಂಬಸ್ಥರಿಗೆ ಕೊರೊನಾ ವೈರಸ್ ತಗುಲಿದ್ದರೂ ಆರೋಗ್ಯ ಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸ್ಟೀಫನ್ ಫ್ಲೇಮಿಂಗ್ ವಿವರಿಸಿದ್ದಾರೆ. ಮ್ಯಾನೇಜ್‌ಮೆಂಟ್ ಕಡೆಯಿಂದ ನಮಗೆಲ್ಲಾ ಧೋನಿ ಕುಟುಂಬದ ಸ್ಥಿತಿ ತಿಳಿದಿದೆ. ಎಂಎಸ್ ಧೋನಿ ಹಾಗೂ ಅವರ ಕುಟುಂಬಕ್ಕೆ ಅನುಕೂಲವಾಗುವಂತೆ ವ್ಯವಸ್ಥೆಗಳನ್ನು ಮಾಡಲಾಗಿದೆ. ಅವರ ಆರೋಗ್ಯಸ್ಥಿತಿ ಈವರೆಗೆ ನಿಯಂತ್ರಣದಲ್ಲಿದೆ. ಆದರೆ ನಾವು ಇನ್ನೂ ಕೆಲ ದಿನಗಳ ಕಾಲ ಅವರ ಬಗ್ಗೆ ಮೇಲ್ವಿಚಾರಣೆ ನಡೆಸುತ್ತೇವೆ" ಎಂದು ಫ್ಲೆಮಿಂಗ್ ಹೇಳಿಕೆಯನ್ನು ನೀಡಿದ್ದಾರೆ.

 ಐಪಿಎಲ್ 2021 : ಚೆನ್ನೈ - ಕೊಲ್ಕತ್ತಾ ಪಂದ್ಯದ ಪ್ರಮುಖ ಅಂಕಿ ಅಂಶ ಮತ್ತು ನಿರ್ಮಾಣವಾದ ದಾಖಲೆಗಳು ಐಪಿಎಲ್ 2021 : ಚೆನ್ನೈ - ಕೊಲ್ಕತ್ತಾ ಪಂದ್ಯದ ಪ್ರಮುಖ ಅಂಕಿ ಅಂಶ ಮತ್ತು ನಿರ್ಮಾಣವಾದ ದಾಖಲೆಗಳು

"ಧೋನಿ ಕುಟುಂಬಕ್ಕೆ ಈ ಸಂದರ್ಭದಲ್ಲಿ ಬೆಂಬಲವನ್ನು ನೀಡುವುದು ನಮ್ಮ ಜವಾಬ್ಧಾರಿ ಹಾಗೂ ಅವರ ಕುಟುಂಬಸ್ಥರು ಶೀಘ್ರವಾಗಿ ಗುಣಮುಖರಾಗಲು ಅಗತ್ಯವಿರುವ ವ್ಯವಸ್ಥೆಗಳನ್ನು ಕೂಗೊಳ್ಳಲಿದ್ದೇವೆ. ಶೀಘ್ರವೇ ಅವರು ಸಂಪೂರ್ಣ ಚೇತರಿಕೆ ಕಾಣಲಿದ್ದಾರೆ" ಎಂದು ಫ್ಲೆಮಿಂಗ್ ಹೇಳಿದ್ದಾರೆ.

ಮಾಜಿ ನಾಯಕ ಎಂಎಸ್ ಧೋನಿ ಅವರ ತಾಯೊ ದೇವಿಕಾ ದೇವಿ ಹಾಗೂ ತಂದೆ ಪಾನ್ ಸಿಂಗ್ ಇಬ್ಬರಿಗೂ ಕೊರೊನಾ ವೈರಸ್ ದೃಢಪಟ್ಟಿದೆ. ಇಬ್ಬರನ್ನು ಕೂಡ ರಾಂಚುಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆಯನ್ನು ನೀಡಲಾಗುತ್ತಿದೆ.

Story first published: Thursday, April 22, 2021, 18:22 [IST]
Other articles published on Apr 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X