ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸ್ಫೋಟಕ ಶತಕ ಬಾರಿಸಿ ಟಿ20 ದಾಖಲೆ ಬರೆದ ಯೂನಿವರ್ಸ್ ಬಾಸ್ ಗೇಲ್

CPL 2019: Chris Gayle’s 62-ball 116 in vain as Patriots won by 4 wkts

ಸೇಂಟ್ ಕೈಟ್ಸ್, ಸೆಪ್ಟೆಂಬರ್ 11: ಕೆರಿಬಿಯನ್ ಪ್ರೀಮಿಯರ್ ಲೀಗ್‌ (ಸಿಪಿಎಲ್‌)ನಲ್ಲಿ ವೆಸ್ಟ್ ಇಂಡೀಸ್ ಅನುಭವಿ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಸೇಂಟ್‌ ಕೈಟ್ಸ್‌ನ ಬಾಸ್ಸೆಟೆರೆಯಲ್ಲಿರುವ ವಾರ್ನರ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಸೇಂಟ್ ಕೈಟ್ಸ್‌ ಆ್ಯಂಡ್ ನೆವಿಸ್ ಪ್ಯಾಟ್ರಿಯೋಟ್ಸ್‌ ವಿರುದ್ಧದ ಪಂದ್ಯದಲ್ಲಿ ಗೇಲ್ ಅಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ.

ಡೇವಿಡ್ ವಾರ್ನರ್ ಬಗ್ಗೆ ಕುತೂಹಲದ ಸಂಗತಿ ಹೇಳಿದ ಕುಕ್!ಡೇವಿಡ್ ವಾರ್ನರ್ ಬಗ್ಗೆ ಕುತೂಹಲದ ಸಂಗತಿ ಹೇಳಿದ ಕುಕ್!

ಮಂಗಳವಾರ (ಸೆಪ್ಟೆಂಬರ್ 10) ನಡೆದ ಸಿಪಿಎಲ್ 7ನೇ ಪಂದ್ಯದಲ್ಲಿ ಜಮೈಕಾ ತಲೈವಾಸ್ ಪರ ಸ್ಫೋಟಕ ಶತಕ ಸಿಡಿಸಿದ್ದ ಕ್ರಿಸ್‌ಗೇಲ್, 10 ಸಿಕ್ಸರ್, 7 ಬೌಂಡರಿ ಕೂಡ ಬಾರಿಸಿದ್ದರು. ಆದರೆ ಗೇಲ್ ಮಾಡಿದ ಹೋರಾಟ ವ್ಯರ್ಥಗೊಂಡಿತು. ಸೇಂಟ್ ಕೈಟ್ಸ್‌ ಆ್ಯಂಡ್ ನೆವಿಸ್ ಪ್ಯಾಟ್ರಿಯೋಟ್ಸ್ ಪಂದ್ಯವನ್ನು 4 ವಿಕೆಟ್‌ಳಿಂದ ಗೆದ್ದುಕೊಂಡಿತು.

Test Ranking: ವಿರಾಟ್ ಕೊಹ್ಲಿ ಎದುರು ಭಾರೀ ಅಂತರ ಕಾಯ್ದುಕೊಂಡ ಸ್ಮಿತ್!Test Ranking: ವಿರಾಟ್ ಕೊಹ್ಲಿ ಎದುರು ಭಾರೀ ಅಂತರ ಕಾಯ್ದುಕೊಂಡ ಸ್ಮಿತ್!

ಸ್ಫೋಟಕ ಬ್ಯಾಟಿಂಗ್‌ ಮೂಲಕ ಕ್ರಿಸ್‌ಗೇಲ್ ಟಿ20 ಕ್ರಿಕೆಟ್‌ನಲ್ಲಿ ಅಪರೂಪದ ದಾಖಲೆಗೂ ಕಾರಣರಾಗಿದ್ದಾರೆ.

ಗೇಲ್ ಸ್ಫೋಟಕ ಶತಕ

ಗೇಲ್ ಸ್ಫೋಟಕ ಶತಕ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಜಮೈಕಾ ತಲೈವಾಸ್ ಪರ ಆರಂಭಿಕ ಬ್ಯಾಟ್ಸ್‌ಮನ್ ಗೇಲ್ 116 (62 ಎಸೆತ), ಚಾಡ್ವಿಕ್ ವಾಲ್ಟನ್ 73 ರನ್ ಸೇರಿಸಿದ್ದರಿಂದ ತಂಡ 20 ಓವರ್‌ಗೆ 4 ವಿಕೆಟ್ ಕಳೆದು 241 ರನ್ ಮಾಡಿತು. ಕೈಟ್ಸ್‌ನ ಫ್ಯಾಬಿಯನ್ ಅಲೆನ್, ಅಲ್ಝಾರಿ ಜೋಸೆಫ್ ತಲಾ 2 ವಿಕೆಟ್ ಪಡೆದರು.

ಥಾಮಸ್, ಲೆವಿಸ್ ಅರ್ಧ ಶತಕ

ಥಾಮಸ್, ಲೆವಿಸ್ ಅರ್ಧ ಶತಕ

ಗುರಿ ಬೆನ್ನತ್ತಿದ ಸೇಂಟ್ ಕೈಟ್ಸ್‌ ಆ್ಯಂಡ್ ನೆವಿಸ್ ಪ್ಯಾಟ್ರಿಯೋಟ್ಸ್‌ ತಂಡ, ಡೆವೊನ್ ಥಾಮಸ್ 71, ಎವಿನ್ ಲೆವಿಸ್ 53, ಲಾರಿ ಇವಾನ್ಸ್ 41, ಫ್ಯಾಬಿಯನ್ ಅಲೆನ್ 37, ಶಮರ್ ಬ್ರೂಕ್ಸ್ 27 ರನ್‌ನೊಂದಿಗೆ 18.5ನೇ ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 242 ರನ್ ಮಾಡಿತು.

ಟಿ20 ದಾಖಲೆ

ಟಿ20 ದಾಖಲೆ

ಈ ಪಂದ್ಯದ ಶತಕದೊಂದಿಗೆ ಕ್ರಿಸ್‌ ಗೇಲ್ ಟಿ20 ಕ್ರಿಕೆಟ್‌ನಲ್ಲಿ ಅತೀ ಹೆಚ್ಚಿನ ಶತಕದ ದಾಖಲೆಗೂ ಗುರುತಿಸಿಕೊಂಡಿದ್ದಾರೆ. ಗೇಲ್ ಹೆಸರಿನಲ್ಲೀಗ 22 ಟಿ20 ಶತಕಗಳಿವೆ. ಇನ್ನು ಆಸ್ಟ್ರೇಲಿಯಾದ ಮೈಕೆಲ್ ಕ್ಲಿಂಗರ್ 8 ಟಿ20 ಶತಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.

ರೋಹಿತ್‌ಗೆ 4ನೇ ಸ್ಥಾನ

ರೋಹಿತ್‌ಗೆ 4ನೇ ಸ್ಥಾನ

ಟಿ20 ಅತ್ಯಧಿಕ ಶತಕದ ದಾಖಲೆ ಸಾಲಿನಲ್ಲಿ 3ನೇ ಸ್ಥಾನದಲ್ಲಿರುವ ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್), ಆ್ಯರನ್ ಫಿಂಚ್ (ಆಸ್ಟ್ರೇಲಿಯಾ), ಲ್ಯೂಕ್ ರೈಟ್ (ಇಂಗ್ಲೆಂಡ್) 7 ಶತಕಗಳನ್ನು ಬಾರಿಸಿದ್ದಾರೆ. ಟಿ20 6 ಶತಕ ಬಾರಿಸಿರುವ ರೋಹಿತ್ ಶರ್ಮಾ, ಶೇನ್ ವಾಟ್ಸನ್ (ಆಸ್ಟ್ರೇಲಿಯಾ) 4ನೇ ಸ್ಥಾನ ಪಡೆದುಕೊಂಡಿದ್ದಾರೆ.

Story first published: Wednesday, September 11, 2019, 15:57 [IST]
Other articles published on Sep 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X