ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಪಿಎಲ್ 2020: ಹಾಲಿ ಚಾಂಪಿಯನ್ ಬಾರ್ಬಡೋಸ್‌ಗೆ ಮತ್ತೊಂದು ಸೋಲು

Cpl 2020: Barbados Tridents Title-defence Comes To End

ಕೊರೊನಾ ವೈರಸ್‌ನ ಮಧ್ಯೆ ಸಾಕಷ್ಟು ಮುಂಜಾಗರುಕತಾ ಕ್ರಮಗಳೊಂದಿಗೆ ಯಶಸ್ವಿಯಾಗಿ ನಡೆಯುತ್ತಿರುವ ಸಿಪಿಎಲ್ 2020 ಟೂರ್ನಿ ವೀಕ್ಷಕರ ಗಲನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ತಂಡವಾಗಿ ದೊಡ್ಡ ನಿರೀಕ್ಷೆಯೊಂದಿಗೆ ಕಣಕ್ಕಿಳಿದ ಬಾರ್ಬಡೋಸ್ ಟ್ರಿಡೆಂಟ್ಸ್ ತಂಡ ಹೀನಾಯ ಪ್ರದರ್ಶನದೊಂದಿಗೆ ನಿರಾಸೆಯನ್ನು ಮೂಡಿಸಿದೆ.

ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ವಿರುದ್ಧ ನಡೆದ ಬಾರ್ಬಡೋಸ್ ಟ್ರಿಡೆಂಟ್ಸ್ ತಂಡ ಟೂರ್ನಿಯ 26ನೇ ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಆದರೆ ಹಾಲಿ ಚಾಂಪಿಯನ್ ಬಾರ್ಬಡೋಸ್ ಟ್ರಿಡೆಂಟ್ಸ್ ಈ ಪಂದ್ಯವನ್ನು ಕೂಡ ಎದುರಾಳಿಗೆ 6 ವಿಕೆಟ್‌ಗಳ ಅಂತರದಿಂದ ಶರಣಾಗುವ ಮೂಲಕ ಟೂರ್ನಿಯ ಮುಂದಿನ ಹಂತಕ್ಕೇರುವ ಎಲ್ಲಾ ಅವಕಾಶವನ್ನು ಕಳೆದುಕೊಂಡಿತ್ತು.

ಐಪಿಎಲ್ 2020: ಸೆಪ್ಟೆಂಬರ್ 19ರ ಉದ್ಘಾಟನಾ ಪಂದ್ಯಕ್ಕೆ ತಂಡಗಳು ಪ್ರಕಟಐಪಿಎಲ್ 2020: ಸೆಪ್ಟೆಂಬರ್ 19ರ ಉದ್ಘಾಟನಾ ಪಂದ್ಯಕ್ಕೆ ತಂಡಗಳು ಪ್ರಕಟ

ಈ ಪಂದ್ಯದಲ್ಲೂ ಕೂಡ ಬಾರ್ಡೋಸ್ ಟ್ರಿಡೆಂಟ್ಸ್ ತಂಡ ಅತ್ಯಂತ ಕೆಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ನಿಗದಿತ 20 ಓವರ್‌ಗಳಲ್ಲಿ ಬಾರ್ಬಡೋಸ್ ತಂಡ ಗಳಿಸಿದ್ದು ಕೇವಲ 89 ರನ್. ಈ ಮೊತ್ತವನ್ನು ಗಯಾನಾ ಅಮೆಜಾನ್ ವಾರಿಯರ್ಸ್ ಯಾವುದೇ ಎಡವಟ್ಟು ಮಾಡಿಕೊಳ್ಳದೆ 4 ವಿಕೆಟ್ ಕಳೆದುಕೊಂಡು 14.2 ಓವರ್‌ಗಳಲ್ಲಿ ಸುಲಭವಾಗಿ ತಲುಪಿ ಗೆದ್ದು ಬೀಗಿತು.

ಗಯಾನಾ ತಂಡದ ಪರವಾಗಿ ಅನುಭವಿ ಸ್ಪಿನ್ನರ್ ಇಮ್ರಾನ್ ತಾಹಿರ್ ಈ ಪಂದ್ಯದಲ್ಲೂ ಭರ್ಜರಿ ಪ್ರದರ್ಶನ ನಿಡಿ ಮಿಂಚಿದರು. 4 ಓವರ್‌ಗಳಲ್ಲಿ ಇಮ್ರಾನ್ ತಾಹಿರ್ ಕೇವಲ 12 ರನ್‌ ನೀಡಿ ಎದುರಾಳಿ ಬಾರ್ಬಡೋಸ್ ಟ್ರಿಡೆಂಟ್ಸ್ ತಂಡದ 3 ವಿಕೆಟ್ ಕಬಳಿಸಿ ಭಾರೀ ಆಘಾತವನ್ನು ನಿಡಿದರು. ರೊಮ್ಯಾರಿಯೋ ಕೂಡ 3 ವಿಕೆಟ್ ಕಬಳಿಸಿ ಮಿಂಚಿದರು.

ನಾನ್ಯಾಕೆ ಕೊಹ್ಲಿ, ಶರ್ಮಾರನ್ನು ಹೊಗಳಬಾರದು? ತೀಕ್ಷ್ಣ ಪ್ರಶ್ನೆಗಳಲ್ಲಿ ಟೀಕಾಕಾರರ ತಿವಿದ ಅಖ್ತರ್!ನಾನ್ಯಾಕೆ ಕೊಹ್ಲಿ, ಶರ್ಮಾರನ್ನು ಹೊಗಳಬಾರದು? ತೀಕ್ಷ್ಣ ಪ್ರಶ್ನೆಗಳಲ್ಲಿ ಟೀಕಾಕಾರರ ತಿವಿದ ಅಖ್ತರ್!

ಈ ಗೆಲುವಿನೊಂದಿಗೆ ಗಯಾನಾ ಅಮೆಜಾನ್ ವಾರಿಯರ್ಸ್ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ಮುಂದಿವರಿದಿದೆ. 10 ಪಂದ್ಯಗಳನ್ನಾಡಿರುವ ಗಯಾನಾ 6 ಗೆಲುವು 4 ಸೋಲು ಕಂಡಿದ್ದು 12 ಅಂಕಗಳನ್ನು ಖಾತೆಗೆ ಸೇರಿಸೆಕೊಂಡಿದೆ. ಬಾರ್ಡೋಸ್ ಟ್ರಿಡೆಂಟ್ಸ್ ತಂಡ 9 ಪಂದ್ಯಗಳನ್ನಾಡಿದ್ದು ಕೇವಲ 2 ಪಂದ್ಯಗಳಲ್ಲಿ ಗೆಲುವಿನ ರುಚಿ ಕಂಡಿದ್ದು ಐದನೇ ಸ್ಥಾನದಲ್ಲಿದ್ದು ನಾಕೌಟ್ ಹಂತಕ್ಕೇರುವ ಎಲ್ಲಾ ಅವಕಾಶವನ್ನು ಕಳೆದುಕೊಂಡಿದೆ.

Story first published: Friday, September 4, 2020, 14:31 [IST]
Other articles published on Sep 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X