ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಪಿಎಲ್ 2020: ಐಪಿಎಲ್‌ಗೂ ಮುನ್ನವೇ ಕೆರಿಬಿಯನ್ ನಾಡಿನಲ್ಲಿ ಕ್ರಿಕೆಟ್ ಜಾತ್ರೆ

Cpl 2020- Caribbean Premier League Ready to Begin

ಕ್ರಿಕೆಟ್ ಲೋಕ ಇಂಡಿಯನ್ ಪ್ರೀಮಿಯರ್ ಲೀಗ್‌ನ ಆರಂಭಕ್ಕೆ ಕಾತುರದಿಂದ ಕಾಯುತ್ತಿದೆ. ಆದರೆ ಅದಕ್ಕೂ ಮುನ್ನವೇ ಮತ್ತೊಂದು ಕ್ರಿಕೆಟ್ ಜಾತ್ರೆ ಆರಂಭವಾಗಲಿದೆ. ಹೌದು, ಐಪಿಎಲ್‌ಗೂ ಮುನ್ನ ಕೆರಿಬಿಯನ್ ಪ್ರೀಮಿಯರ್ ಲೀಗ್ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುತ್ತಿದೆ.

ಕೆರಿಬಿಯನ್ ಪ್ರೀಮಿಯರ್ ಲೀಗ್ 2020ರ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಆಗಸ್ಟ್ 18ರಿಂದ ಸೆಪ್ಟೆಂಬರ್ 20ರ ವರೆಗೆ ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ನಡೆಯಲಿ ಅಂತಿಮ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಕೊರೊನಾ ವೈರಸ್‌ನಿಂದ ಕ್ರೀಡಾ ಚಟುವಟಿಕೆಗಳು ಸಂಪೂರ್ಣ ಸ್ಥಬ್ಧವಾಗಿ ಪುನಾರಂಭವಾದ ಬಳಿಕ ನಡೆಯುತ್ತಿರುವ ಮೊದಲ ಕ್ರಿಕೆಟ್ ಲೀಗ್ ಇದಾಗಿದೆ.

ಕನ್ನಡದಲ್ಲಿ ಕ್ರಿಕೆಟ್ ಕಾನೂನು: ಇಂಗ್ಲೀಷ್ ನಂತರ ಕನ್ನಡ ಭಾಷೆಗೆ ಮೊದಲ ಸ್ಥಾನದ ಗೌರವಕನ್ನಡದಲ್ಲಿ ಕ್ರಿಕೆಟ್ ಕಾನೂನು: ಇಂಗ್ಲೀಷ್ ನಂತರ ಕನ್ನಡ ಭಾಷೆಗೆ ಮೊದಲ ಸ್ಥಾನದ ಗೌರವ

ಟ್ರಿನಿಡಾಡ್, ಟೊಬಾಗೊ ತಾಣಗಳಲ್ಲಿ ಸಿಪಿಎಲ್ ನಡೆಸಲು ಅಲ್ಲಿನ ಸರ್ಕಾರ ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಸಿಪಿಎಲ್‌ ಆರಂಭ-ಅಂತ್ಯದ ದಿನಾಂಕ ಮತ್ತು ತಾಣಗಳು ಘೋಷಿಸಲ್ಪಟ್ಟಿವೆ. ಸಿಪಿಎಲ್‌ನಲ್ಲಿ ಭಾರತದ ಕ್ರಿಕೆಟರ್ ಪ್ರವೀಣ್ ತಾಂಬೆ ಆಡಲಿದ್ದಾರೆ.

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳಲಿರುವ ಎಲ್ಲಾ ಆಟಗಾರರು ಹಾಗು ಅಧಿಕಾರಿಗಳು ಹೋಟೆಲ್‌ನಲ್ಲಿದ್ದು 2 ವಾರಗಳ ಕಟ್ಟುನಿಟ್ಟಿನ ಕ್ವಾರಂಟೈನ್ ಪಾಲಿಸಲಿದ್ದಾರೆ. ವಿದೇಶದಿಂದ ಬರುವ ಪ್ರತಿಯೊಬ್ಬರೂ ಅಲ್ಲಿಂದ ಹೊರಡುವ ಮುನ್ನ ಮತ್ತು ಇಲ್ಲಿ ತಲುಪಿದ ಬಳಿಕ ಕೊರೊನಾ ಪರೀಕ್ಷೆಗೆ ಒಳಗಾಗಲಿದ್ದಾರೆ.

ಓವರ್‌ಗೆ 30 ರನ್ ಬಿಟ್ಟುಕೊಟ್ಟಿದ್ದೇ ವೃತ್ತಿ ಜೀವನದ ದೊಡ್ಡ ಪಾಠವಾಯಿತು: ಇಶಾಂತ್ ಶರ್ಮಾಓವರ್‌ಗೆ 30 ರನ್ ಬಿಟ್ಟುಕೊಟ್ಟಿದ್ದೇ ವೃತ್ತಿ ಜೀವನದ ದೊಡ್ಡ ಪಾಠವಾಯಿತು: ಇಶಾಂತ್ ಶರ್ಮಾ

ಈ ಬಾರಿಯ ಸಿಪಿಎಲ್‌ ಟೂರ್ನಿ ಕೇವಲ ಎರಡು ಕ್ರೀಡಾಂಗಣಗಳಲ್ಲಿ ಮಾತ್ರ ನಡೆಯಲಿದೆ. ಒಟ್ಟು 33 ಪಂದ್ಯಗಳಲ್ಲಿ 23 ಪಂದ್ಯಗಳು ತರೊಬಾದಲ್ಲಿರುವ ಬ್ರಿಯಾನ್‌ ಲಾರಾ ಕ್ರಿಕೆಟ್‌ ಅಕಾಡೆಮಿಯಲ್ಲಿ ನಡೆಯಲಿದೆ. ಇದರಲ್ಲಿ ಸೆಮಿ ಪೈನಲ್ ಮತ್ತು ಫೈನಲ್ ಕೂಡ ಸೇರಿದೆ. ಇನ್ನುಳಿದ 10 ಪಂದ್ಯಗಳು ಪೋರ್ಟ್ ಆಫ್ ಸ್ಪೇನ್‌ನ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಆಯೋಜನೆಯಾಗಲಿದೆ.

Story first published: Wednesday, August 5, 2020, 18:30 [IST]
Other articles published on Aug 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X