ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಪಿಎಲ್ ವಿಕೆಟ್‌ನೊಂದಿಗೆ ದಾಖಲೆ ಬರೆದ ಭಾರತದ ಕ್ರಿಕೆಟರ್ ಪ್ರವೀಣ್ ತಾಂಬೆ

CPL 2020: Indian Cricketer Pravin Tambe makes debut

ಪೋರ್ಟ್ ಆಫ್‌ ಸ್ಪೇನ್: 48ರ ಹರೆಯದ ಭಾರತದ ಅನುಭವಿ ಕ್ರಿಕೆಟರ್ ಪ್ರವೀಣ್ ತಾಂಬೆ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಕೆರಿಬಿಯನ್ ಲೀಗ್‌ನಲ್ಲಿ ಪಾಲ್ಗೊಂಡ ಮೊದಲ ಭಾರತೀಯನಾಗಿ ತಾಂಬೆ ಗುರುತಿಸಿಕೊಂಡಿದ್ದಷ್ಟೇ ಅಲ್ಲ, ಪಾದಾರ್ಪಣೆ ಪಂದ್ಯದಲ್ಲೆ ವಿಕೆಟ್ ಪಡೆದು ಗಮನ ಸೆಳೆದಿದ್ದಾರೆ. ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ತಾಂಬೆ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಆರಿಸಿತ್ತು. ಆದರೆ ಬಿಸಿಸಿಐ ಅನುಮತಿಯಿಲ್ಲದೆ ಟಿ10 ಲೀಗ್‌ನಲ್ಲಿ ಪಾಲ್ಗೊಂಡಿದ್ದಕ್ಕಾಗಿ ತಾಂಬೆ ಐಪಿಎಲ್‌ನಿಂದ ಅನರ್ಹಗೊಂಡಿದ್ದಾರೆ.

 ಹತ್ರ ಬಂದ್ರೆ ಅಲರಾಮ್: ಯುಎಇ ಐಪಿಎಲ್‌ನ ಕುತೂಹಲಕಾರಿ ಸಂಗತಿಗಳಿವು! ಹತ್ರ ಬಂದ್ರೆ ಅಲರಾಮ್: ಯುಎಇ ಐಪಿಎಲ್‌ನ ಕುತೂಹಲಕಾರಿ ಸಂಗತಿಗಳಿವು!

ಸಿಪಿಎಲ್ 13ನೇ ಪಂದ್ಯದಲ್ಲಿ ಸೇಂಟ್ ಲೂಸಿಯಾ ಝೌಕ್ಸ್ ಮತ್ತು ಟ್ರಿನ್‌ಬಾಗೋ ನೈಟ್ ರೈಡರ್ಸ್ ತಂಡಗಳು ಸೆಣಸಾಡಿದ್ದವು. ಈ ವೇಳೆ ನೈಟ್ ರೈಡರ್ಸ್ ಪ್ರತಿನಿಧಿಸಿದ್ದ ತಾಂಬೆ 15 ರನ್‌ಗೆ 1 ವಿಕೆಟ್ (ನಜೀಬುಲ್ಲ ಝದ್ರನ್, 21 ರನ್) ಪಡೆದಿದ್ದಾರೆ.

ಐಪಿಎಲ್: ವೇಳಾಪಟ್ಟಿ ವಿಳಂಬಕ್ಕೆ ಕಾರಣ ಬಹಿರಂಗ: ಮಾಸ್ಟರ್‌ಪ್ಲ್ಯಾನ್ ಮಾಡಿಕೊಂಡ ಬಿಸಿಸಿಐಐಪಿಎಲ್: ವೇಳಾಪಟ್ಟಿ ವಿಳಂಬಕ್ಕೆ ಕಾರಣ ಬಹಿರಂಗ: ಮಾಸ್ಟರ್‌ಪ್ಲ್ಯಾನ್ ಮಾಡಿಕೊಂಡ ಬಿಸಿಸಿಐ

ಪ್ರವೀಣ್ ತಾಂಬೆಯ 10.6ನೇ ಓವರ್‌ನಲ್ಲಿ ಝದ್ರನ್, ಕೀರನ್ ಪೊಲಾರ್ಡ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಒಂದೇ ಓವರ್ ಎಸೆದಿದ್ದ ಪ್ರವೀಣ್ 1 ವಿಕೆಟ್‌ ಪಡೆದಿದ್ದಾರೆ.

ಸೇಂಟ್ ಲೂಸಿಯಾ 111 ರನ್

ಸೇಂಟ್ ಲೂಸಿಯಾ 111 ರನ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡ್ಯಾರೆನ್ ಸಾಮಿ ನಾಯಕತ್ವದ ಸೇಂಟ್ ಲೂಸಿಯಾ ಝೌಕ್ಸ್ ತಂಡ, ಆಂಡ್ರೆ ಫ್ಲೆಚರ್ 10, ರಹಕೀಮ್ ಕಾರ್ನ್‌ವಾಲ್ 18, ಮಾರ್ಕ್ ಡಯಾಲ್ 16, ರೋಸ್ಟನ್ ಚೇಸ್ 7, ನಜೀಬುಲ್ಲಾ ಝದ್ರಾನ್ 21, ಮೊಹಮ್ಮದ್ ನಬಿ 30 ರನ್ ಕೊಡುಗೆಯೊಂದಿಗೆ 17.1 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 111 ರನ್ ಬಾರಿಸಿತು.

ಆಟಕ್ಕೆ ಮಳೆಯ ಕಾಟ

ಆಟಕ್ಕೆ ಮಳೆಯ ಕಾಟ

ಸೇಂಟ್ ಝೌಕ್ಸ್ ಇನ್ನಿಂಗ್ಸ್‌ನ ಕಡೇ ಕ್ಷಣದಲ್ಲಿ ಮಳೆ ಸುರಿಯಿತು. ಬಹಳ ಹೊತ್ತು ಆಟ ನಿಲ್ಲಿಸಲ್ಪಟ್ಟಿತು. ಮಳೆಯಿಂದಾಗಿ ಮೊದಲ ಇನ್ನಿಂಗ್ಸನ್ನು ಅಲ್ಲಿಗೆ ನಿಲ್ಲಿಸಿ ಟ್ರಿನ್‌ಬಾಗೊ ನೈಟ್ ರೈಡರ್ಸ್‌ಗೆ ಡಕ್ವರ್ಥ್ ಲೂಯಿಸ್ ನಿಯಮದಂತೆ 9 ಓವರ್‌ಗೆ 72 ರನ್ ಗುರಿ ನೀಡಲಾಗಿತ್ತು.

ನೈಟ್ ನೈಡರ್ಸ್‌ಗೆ ಜಯ

ನೈಟ್ ನೈಡರ್ಸ್‌ಗೆ ಜಯ

ಗುರಿ ಬೆನ್ನಟ್ಟಿದ ನೈಟ್ ರೈಡರ್ಸ್ ತಂಡ, ಕಾಲಿನ್ ಮುನ್ರೋ 17, ಡ್ಯಾರೆನ್ ಬ್ರಾವೋ ಅಜೇಯ 23, ಟಿಮ್ ಸೀಫರ್ಟ್ 15 ರನ್‌ನೊಂದಿಗೆ 8 ಓವರ್‌ಗೆ 4 ವಿಕೆಟ್ ಕಳೆದು 72 ರನ್ ಗುರಿ ತಲುಪುವ ಮೂಲಕ 6 ವಿಕೆಟ್ ಗೆಲುವನ್ನಾಚರಿಸಿತು. ಡ್ವೇನ್ ಬ್ರಾವೋ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ದಾಖಲೆ ಬರೆದ ಬ್ರಾವೋ

ದಾಖಲೆ ಬರೆದ ಬ್ರಾವೋ

ನೈಟ್‌ ರೈಡರ್ಸ್ ಪರ ಆಡುವ ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್‌ ಆಗಿ ಬ್ರಾವೋ ಗುರುತಿಸಿಕೊಂಡಿದ್ದಾರೆ. ಸೇಂಟ್ ಲೂಸಿಯಾ ವಿರುದ್ಧದ ಇದೇ ಪಂದ್ಯದಲ್ಲಿ 2 ವಿಕೆಟ್ ಪಡೆಯುವುದರೊಂದಿಗೆ ಬ್ರಾವೋ ಈ ದಾಖಲೆ ಬರೆದಿದ್ದಾರೆ.

Story first published: Friday, August 28, 2020, 10:01 [IST]
Other articles published on Aug 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X