ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆರಿಬಿಯನ್ ಪ್ರೀಮಿಯರ್ ಲೀಗ್: ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು

CPL 2020: Leading scorers of CPL, Chris Gayle tops the list

ಬೆಂಗಳೂರು: ಆಗಸ್ಟ್ 18ರಿಂದ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್ 2020) ಆರಂಭಗೊಳ್ಳಲಿದೆ. ಕೊರೊನಾವೈರಸ್ ಭೀತಿಯ ಕಾರಣ ಟೂರ್ನಿ ಕದ ಮುಚ್ಚಿದ ಸ್ಟೇಡಿಯಂನಲ್ಲಿ ನಡೆಯಲಿದೆ. ವಿಶ್ವದ ಖ್ಯಾತ ಕ್ರಿಕೆಟಿಗರು ಪಾಲ್ಗೊಳ್ಳುತ್ತಿರುವುದರಿಂದ ವೀಕ್ಷಕರಿಲ್ಲದ ಹೊರತಾಗಿಯೂ ಟೂರ್ನಿಯ ರೋಚಕತೆಯೇನೂ ಕಡಿಮೆಯೆನಿಸಲಾರದು. ಟೂರ್ನಿಯ ಎಲ್ಲಾ ಪಂದ್ಯಗಳು ಟ್ರಿನಿಡಾಡ್ ಮತ್ತು ಟೊಬಾಗೋ ಸ್ಟೇಡಿಯಂನಲ್ಲಿ ನಡೆಯಲಿದೆ.

ಸಿಪಿಎಲ್ 2020: ಟೂರ್ನಿಯಲ್ಲಿ ನಿರ್ಮಾಣವಾಗಿರುವ ಅಪರೂಪದ ದಾಖಲೆಗಳುಸಿಪಿಎಲ್ 2020: ಟೂರ್ನಿಯಲ್ಲಿ ನಿರ್ಮಾಣವಾಗಿರುವ ಅಪರೂಪದ ದಾಖಲೆಗಳು

2013ರಲ್ಲಿ ಆರಂಭಗೊಂಡು ಏಳು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಸಿಪಿಎಲ್ ಅನೇಕ ಅದ್ಭುತ ಪ್ರತಿಭೆಗಳಿಗೆ ವೇದಿಕೆ ಒದಗಿಸಿದೆ. ಸಿಪಿಎಲ್‌ನಲ್ಲಿ ಅನೇಕ ಟಿ20 ದಾಖಲೆಗಳು ಸೃಷ್ಠಿಯಾಗಿವೆ. ಇದರಲ್ಲಿ ಅತ್ಯಧಿಕ ರನ್ ಪಟ್ಟಿಯಲ್ಲಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳ ಮಾಹಿತಿ ಇಲ್ಲಿದೆ.

1. ಕ್ರಿಸ್ ಗೇಲ್

1. ಕ್ರಿಸ್ ಗೇಲ್

ಯುನಿವರ್ಸ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್, ಸಿಪಿಎಲ್ ಅತ್ಯಧಿಕ ರನ್ ಸರದಾರರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಒಟ್ಟು 76 ಪಂದ್ಯಗಳನ್ನಾಡಿರುವ ವೆಸ್ಟ್ ಇಂಡೀಸ್ ದೈತ್ಯ 39.23ರ ಸರಾಸರಿಯಂತೆ 2354 ರನ್ ಗಳಿಸಿದ್ದಾರೆ. ಗೇಲ್ ಸ್ಟ್ರೈಕ್ ರೇಟ್ 133.44 ಇದೆ. ಅಲ್ಲದೆ 4 ಶತಕ, 13 ಅರ್ಧ ಶತಕಗಳ ದಾಖಲೆ ಗೇಲ್ ಹೆಸರಿನಲ್ಲಿದೆ. ಇನ್ನು 162 ಸಿಕ್ಸರ್‌ಗಳ ದಾಖಲೆಯೂ ಗೇಲ್ ನಿರ್ಮಿಸಿದ್ದಾರೆ.

2. ಲೆಂಡ್ಲ್ ಸಿಮನ್ಸ್

2. ಲೆಂಡ್ಲ್ ಸಿಮನ್ಸ್

ಸಿಪಿಎಲ್ ಅತ್ಯಧಿಕ ರನ್ ಪಟ್ಟಿಯಲ್ಲಿ ಲೆಂಡ್ಲ್ ಸಿಮನ್ಸ್ ದ್ವಿತೀಯ ಸ್ಥಾನದಲ್ಲಿದ್ದಾರೆ. 71 ಪಂದ್ಯಗಳನ್ನಾಡಿರುವ ಸಿಮನ್ಸ್ 33.01ರ ಸರಾಸರಿಯಂತೆ 2080 ರನ್ ಗಳಿಸಿದ್ದಾರೆ. ಸಿಮನ್ಸ್ ಸ್ಟ್ರೈಕ್ ರೇಟ್ 120.09 ಇದೆ. ಬಲಗೈ ಬ್ಯಾಟ್ಸ್‌ಮನ್ ಸಿಮನ್ಸ್ ಒಟ್ಟು 16 ಅರ್ಧ ಶತಕಗಳ ದಾಖಲೆ ಹೊಂದಿದ್ದಾರೆ. ಇದು ಸಿಪಿಎಲ್ ಇತಿಹಾಸದಲ್ಲಿ ಬ್ಯಾಟ್ಸ್‌ಮನ್ ಬಾರಿಸಿರುವ ಅತ್ಯಧಿಕ ಸಂಖ್ಯೆಯ ಅರ್ಧ ಶತಕ. ಇನ್ನು 168 ಫೋರ್ಸ್, 105 ಸಿಕ್ಸರ್‌ಗಳ ದಾಖಲೆ ಸಿಮನ್ಸ್ ನಿರ್ಮಿಸಿದ್ದಾರೆ.

3. ಆ್ಯಂಡ್ರೆ ಫ್ಲೆಚರ್

3. ಆ್ಯಂಡ್ರೆ ಫ್ಲೆಚರ್

ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಆ್ಯಂಡ್ರೆ ಫ್ಲೆಚರ್ 66 ಸಿಪಿಎಲ್ ಪಂದ್ಯಗಳಲ್ಲಿ 1870 ರನ್ ಗಳಿಸಿದ್ದಾರೆ. ಫ್ಲೆಚರ್ ರನ್ ದಾಖಲೆ ಗಮನಿಸಿದರೆ 31.16 ಸರಾಸರಿ, 117.31 ಸ್ಟ್ರೈಕ್ ರೇಟ್ ಸಿಗುತ್ತದೆ. 11 ಅರ್ಧ ಶತಕ ಬಾರಿಸಿದ್ದಾರೆ. ಸೇಂಟ್ ಲೂಸಿಯಾ ಝೌಕ್ಸ್ ಪರ ಆಡುವ ಫ್ಲೆಚರ್ 148 ಬೌಂಡರಿ, 84 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

4. ಜಾನ್ಸನ್ ಚಾರ್ಲ್ಸ್

4. ಜಾನ್ಸನ್ ಚಾರ್ಲ್ಸ್

ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಆಗಿರುವ ಜಾನ್ಸನ್ ಚಾರ್ಲ್ಸ್ ಸಿಪಿಎಲ್ ಅತ್ಯಧಿಕ ರನ್ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದ್ದಾರೆ. 68 ಪಂದ್ಯಗಳಲ್ಲಿ ಚಾರ್ಲ್ಸ್ 27.90. ಸರಾಸರಿ, 130.36 ಸ್ಟ್ರೈಕ್ ರೇಟ್‌ನಂತೆ 1842 ರನ್ ಗಳಿಸಿದ್ದಾರೆ. 9 ಅರ್ಧಶತಕಗಳನ್ನು ಬಾರಿಸಿರುವ ಜಾನ್ಸನ್ 160 ಫೋರ್ಸ್, 80 ಸಿಕ್ಸರ್ ಬಾರಿಸಿದ್ದಾರೆ. ಈ ವರ್ಷ ಚಾರ್ಲ್ಸ್ ಬಾರ್ಬೊಡೋಸ್ ಟ್ರಿಡಂಟ್ಸ್ ಪರ ಆಡುತ್ತಿದ್ದಾರೆ.

5. ಚಾಡ್ವಿಕ್ ವಾಲ್ಟನ್

5. ಚಾಡ್ವಿಕ್ ವಾಲ್ಟನ್

ಜಮೈಕಾದ ಬಲಗೈ ಬ್ಯಾಟ್ಸ್‌ಮನ್ ಚಾಡ್ವಿಕ್ ವಾಲ್ಟನ್ 73 ಪಂದ್ಯಗಳಲ್ಲಿ 1779 ರನ್ ಗಳಿಸಿದ್ದಾರೆ. 9 ಅರ್ಧ ಶತಕಗಳನ್ನು ಬಾರಿಸಿರುವ ಚಾಡ್ವಿಕ್, 121.68 ಸ್ಟ್ರೈಕ್ ರೇಟ್ ಹೊಂದಿದ್ದಾರೆ. 173 ಬೌಂಡರಿ, 79 ಸಿಕ್ಸರ್‌ಗಳನ್ನು ಬಾರಿಸಿರುವ ಚಾಡ್ವಿಕ್ ಈ ಬಾರಿ ಜಮೈಕಾ ತಲೈವಾಸ್ ಪರ ಆಡುತ್ತಿದ್ದಾರೆ.

Story first published: Tuesday, August 11, 2020, 9:48 [IST]
Other articles published on Aug 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X