ಸಿಪಿಎಲ್ 2020: ಈ ಬಾರಿಯ ಸಿಪಿಎಲ್‌ನಲ್ಲಿ ಇತಿಹಾಸ ಸೃಷ್ಟಿಸಲಿರುವ ಭಾರತೀಯ

ಕೆರಿಬಿಯನ್ ಪ್ರೀಮಿಯರ್ ಲೀಗ್ ಈವರೆಗೆ 7 ಆವೃತ್ತಿಗಳನ್ನು ಪೂರೈಸಿ ಎಂಟನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಟ್ರಿನಿಡಾಡ್&ಟೊಬ್ಯಾಗೋದಲ್ಲಿ ಮುಚ್ಚಿದ ಕ್ರೀಡಾಂಗಣದಲ್ಲಿ ಆಗಸ್ಟ್ 18ರಿಂದ ಆರಂಭವಾಗಲಿರುವ ಈ ಬಾರಿಯ ಆವೃತ್ತಿ ಈ ಹಿಂದಿನ ಎಲ್ಲಾ ಆವೃತ್ತಿಗಿಂತ ಭಾರತೀಯರ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ವಿಶೇಷ. ಅದಕ್ಕೆ ಕಾರಣ ಪ್ರವೀಣ್ ತಾಂಬೆ.

ಹೌದು ಐಪಿಎಲ್‌ನಲ್ಲಿ ಆಡಿದ ಹಿರಿಯ ಕ್ರಿಕೆಟಿಗ ಎಂಬ ಖ್ಯಾತಿಯನ್ನು ಪಡೆದುಕೊಂಡ ಪ್ರವೀಣ್ ತಾಂಬೆ ಈ ಬಾರಿಯ ಸಿಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ಸಿಪಿಎಲ್‌ನಲ್ಲಿ ಪಾಲ್ಗೊಳ್ಳಲಿರುವ ಮೊದಲ ಭಾರತೀಯ ಆಟಗಾರ ಎಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ತಾಂಬೆ ಈಗಾಗಲೇ ಯುಎಇಗೆ ತಲುಪಿದ್ದು ತಂಡವನ್ನು ಸೇರಿಕೊಂಡಿದ್ದಾರೆ.

ಐಪಿಎಲ್ ಟೈಟಲ್ ಪ್ರಾಯೋಜಕತ್ವದ ಬಿಡ್ಡಿಂಗ್‌ಗೆ 'ಪತಂಜಲಿ' ಆಸಕ್ತಿ

ಐಪಿಎಲ್‌ನ ಅತಿ ಹಿರಿಯ ಆಟಗಾರ

ಐಪಿಎಲ್‌ನ ಅತಿ ಹಿರಿಯ ಆಟಗಾರ

ಪ್ರವೀಣ್ ತಾಂಬೆ ಐಪಿಎಲ್‌ನಲ್ಲಿ ಪಾಲ್ಗೊಂಡ ಅತ್ಯಂತ ಹಿರಿಯ ಆಟಗಾರ ಎಂಬ ಖ್ಯಾತಿಯನ್ನು ಹೊಂದಿದ್ದಾರೆ. ರಾಜಸ್ಥಾನ ತಂಡದ ಪ್ರಮುಖ ಸ್ಪಿನ್ ಬೌಲರ್ ಆಗಿದ್ದ ತಾಂಬೆ ಐಪಿಎಲ್‌ನ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರೆನಿಸಿದ್ದಾರೆ. ರನ್ ನಿಯಂತ್ರಿಸುವುದರಲ್ಲಿ ನಿಸ್ಸೀಮರಾಗಿರುವ ಪ್ರವೀಣದ ತಾಂಬೆ 2013ರಲ್ಲಿ ತಮ್ಮ 41ನೇ ವಯಸ್ಸಿಗೆ ಐಪಿಎಲ್‌ಗೆ ಪದಾರ್ಪಣೆ ಮಾಡಿದರು.

ಪ್ರಥಮ ದರ್ಜೆ ಪಂದ್ಯವನ್ನೂ ಆಡದ ತಾಂಬೆ

ಪ್ರಥಮ ದರ್ಜೆ ಪಂದ್ಯವನ್ನೂ ಆಡದ ತಾಂಬೆ

ಪ್ರವೀಣ್ ತಾಂಬೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲೂ ಪಾಲ್ಗೊಳ್ಳದ ಆಟಗಾರನಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಪ್ರವೀಣ್ ತಾಂಬೆ ಆಟವನ್ನು ಗಮನಿಸಿ ತಂಡಕ್ಕೆ ಸೇರ್ಪಡೆಗೊಳಿಸಲು ಉತ್ಸಾಹ ತೋರಿಸಿದ್ದರು. ಈ ಮೂಲಕ ದೇಶೀಯ ಪ್ರತಿಭೆಗಳಿಗೆ ಐಪಿಎಲ್ ವೇದಿಕೆಯಾಗಬೇಕು ಎಂಬುದನ್ನು ವ್ಯಕ್ತಪಡಿಸಿದ್ದರು. ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದ ತಾಂಬೆ ಸದ್ಯ ನಿಷ್ಕ್ರೀಯವಾಗಿರುವ 2013ರ ಚಾಂಪಿಯನ್ಸ್ ಲೀಗ್ ಅವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮಿಂಚಿದ್ದರು. 2014ರ ಆವೃತ್ತಿಯ ಐಪಿಎಲ್‌ನಲ್ಲೂ ಅದ್ಭುತ ಪ್ರದರ್ಶನವನ್ನು ನೀಡಿದ್ದರು.

ಈ ಬಾರಿಯ ಐಪಿಎಲ್‌ನಲ್ಲಿ ತಾಂಬೆ ಆಡುವಂತಿಲ್ಲ

ಈ ಬಾರಿಯ ಐಪಿಎಲ್‌ನಲ್ಲಿ ತಾಂಬೆ ಆಡುವಂತಿಲ್ಲ

48ರ ಹರೆಯದಲ್ಲೂ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿರುವ ತಾಂಬೆ ಈ ವರ್ಷದ ಆವೃತ್ತಿಗೆ ಕಳೆದ ಡಿಸೆಂಬರ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಹರಾಜಾಗಿದ್ದರು. ಈ ಮೂಲಕ ಐಪಿಎಲ್‌ನಲ್ಲಿ ಹರಾಜಾದ ಅತಿ ಹಿರಿಯ ಆಟಗಾರ ಎಂಬ ಖ್ಯಾತಿಗೆ ಒಳಗಾಗಿದ್ದರು. ಆದರೆ ಬಳಿಕ ಕೆರಿಬಿಯನ್ ಪ್ರೀಮಿಯರ್ ಜೊತೆಗೆ ಒಪ್ಪಂದವನ್ನು ಮಾಡಿಕೊಂಡ ಕಾರಣ ಪ್ರವೀಣ್ ತಾಂಬೆ ಬಿಸಿಸಿಐ ನಿಯಮದ ಪ್ರಕಾರ ಭಾರತೀಯ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಅನರ್ಹರಾಗಿದ್ದಾರೆ. ಹೀಗಾಗಿ ಈ ಬಾರಿಯ ಐಪಿಎಲ್‌ನಲ್ಲಿ ಪ್ರವೀಣ್ ತಾಂಬೆ ಕಾಣಿಸಿಕೊಳ್ಳುವುದಿಲ್ಲ.

ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ಪರ ಮಿಂಚುತ್ತಾರ ತಾಂಬೆ?

ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ಪರ ಮಿಂಚುತ್ತಾರ ತಾಂಬೆ?

ಸಿಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳುತ್ತಿರುವ ಪ್ರವೀಣ್ ತಾಂಬೆ ಈ ಬಾರಿಯ ಟೂರ್ನಿಯಲ್ಲಿ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ಪರವಾಗಿ ಆಡಲಿದ್ದಾರೆ. ಇದು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯ ಮಾಲೀಕ ಬಾಲಿವುಡ್ ನಟ ಶಾರುಖ್ ಖಾನ್ ಒಡೆತನದ ಫ್ರಾಂಚೈಸಿಯೇ ಆಗಿರುವುದು ಮತ್ತೊಂದು ವಿಶೇಷ. ಐಪಿಎಲ್‌ನಲ್ಲಿ ವಿಶೇಷವಾಗಿ ಗಮನ ಸೆಳೆದ ಪ್ರವೀಣ್ ತಾಂಬೆ ಕೆರಿಬಿಯನ್ ನಾಡಿನ ಲೀಗ್ ಟೂರ್ನಿಯಲ್ಲಿ ಮಿಂಚು ಹರಿಸುತ್ತಾರ? ಈ ಕುತೂಹಲ ತಣಿಯಲು ಹೆಚ್ಚು ದಿನ ಕಾಯುವ ಅಗತ್ಯವಿಲ್ಲ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, August 10, 2020, 20:14 [IST]
Other articles published on Aug 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X