ಪೋರ್ಟ್ ಆಫ್ ಸ್ಪೇನ್: ರಹಕೀಮ್ ಕಾರ್ನ್ವಾಲ್, ರೋಸ್ಟನ್ ಚೇಸ್, ನದೀಬುಲ್ಲ ಝದ್ರನ್ ಚತುರ ಆಟದ ನೆರವಿನಿಂದ ಜಮೈಕಾ ತಲೈವಾಸ್ ವಿರುದ್ಧ ಸೇಂಟ್ ಲೂಸಿಯಾ ಝೌಕ್ಸ್ 11 ರನ್ ಜಯ ಗಳಿಸಿದೆ. ಟ್ರಿನಿಡಾಡ್ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್ 30ನೇ ಪಂದ್ಯದಲ್ಲಿ ಝೌಕ್ಸ್ 6ನೇ ಗೆಲುವು ಕಂಡಿದೆ.
ಲೈನ್ ಜಡ್ಜ್ಗೆ ಚೆಂಡು ಹೊಡೆದು ಅನರ್ಹಗೊಂಡ ಜೊಕೋವಿಕ್: ವಿಡಿಯೋ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸೇಂಟ್ ಲೂಸಿಯಾ ಝೌಕ್ಸ್, ರಹಕೀಮ್ ಕಾರ್ನ್ವಾಲ್ 32, ರೋಸ್ಟನ್ ಚೇಸ್ 32, ನದೀಬುಲ್ಲ ಝದ್ರನ್ 35, ಮಾರ್ಕ್ ಡಯಾಲ್ 13 ರನ್ ಸೇರ್ಪಡೆಯೊಂದಿಗೆ 20 ಓವರ್ಗೆ 6 ವಿಕೆಟ್ ಕಳೆದು 145 ರನ್ ಗಳಿಸಿತು.
ಐಪಿಎಲ್ 2020: ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಪ್ರಕಟ!
ಗುರಿ ಬೆನ್ನಟ್ಟಿದ ಜಮೈಕಾ ತಲೈವಾಸ್ ನಿಂದ ಜೆರ್ಮೈನ್ ಬ್ಲ್ಯಾಕ್ವುಡ್ 25, ಗ್ಲೆನ್ ಫಿಲಿಪ್ಸ್ 49, ವಾಡ್ವಿಕ್ ವಾಲ್ಟನ್ 10, ನಿಕೋಲಸ್ ಕಿರ್ಟನ್ 25 ರನ್ ಕೊಡುಗೆ ನೀಡಿದರು. ಆದರೆ ತಲೈವಾಸ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದು 134 ರನ್ ಬಾರಿಸಿ ಶರಣಾಯಿತು.
IPL 2020: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿ
ಸೇಂಟ್ ಲೂಸಿಯಾ ಇನ್ನಿಂಗ್ಸ್ನಲ್ಲಿ ತಲೈವಾಸ್ನ ಮುಜೀಬ್ ಉರ್ ರಹ್ಮಾನ್ 2 ವಿಕೆಟ್ನಿಂದ ಗಮನ ಸೆಳೆದರೆ, ಜಮೈಕಾ ತಲೈವಾಸ್ ಇನ್ನಿಂಗ್ಸ್ನಲ್ಲಿ ಸೇಂಟ್ ಲೂಸಿಯಾದ ಕೆಸ್ರಿಕ್ ವಿಲಿಯಮ್ಸ್ 2, ಝಹೀರ್ ಖಾನ್ 3, ಜಾವೆಲ್ ಗ್ಲೆನ್ 3 ವಿಕೆಟ್ ಪಡೆದರು. ಝಹೀರ್ ಖಾನ್ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಇಲಿಯಿತು.