ಸಿಪಿಎಲ್ 2020 ತಂಡದ ವಿಮರ್ಶೆ: ಗಯಾನಾ ಅಮೆಜಾನ್ ವಾರಿಯರ್ಸ್ ಬಲ, ದೌರ್ಬಲ್ಯ, ಸ್ಕ್ವಾಡ್

ಕೆರಿಬಿಯನ್ ಪ್ರೀಮಿಯರ್ ಲೀಗ್(ಸಿಪಿಎಲ್) ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳಲ್ಲಿ ಗಯಾನಾ ಅಮೆಜಾನ್ ತಂಡ ಅತ್ಯಂತ ದುರದೃಷ್ಟಕರ ತಂಡ ಎನಿಸಿಕೊಂಡಿದೆ. ಆದರೆ ಈ ಹಣೆಪಟ್ಟಿಯನ್ನು ಈ ಬಾರಿಯ ಟೂರ್ನಿಯಲ್ಲಿ ಬದಲಾಯಿಸಿಕೊಳ್ಳಲೇಬೇಕೆಂದು ಗಯಾನಾ ಅಮೆಜಾನ್ ತಂಡ ನಿರ್ಧರಿಸಿದೆ.

2013 ರಿಂದ ಪ್ರಾರಂಭವಾಗಿರುವ ಸಿಪಿಎಲ್ ಟೂರ್ನಿಯಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ತಂಡ ಐದು ಬಾರಿ ಫೈನಲ್ ಪ್ರವೇಶ ಪಡೆದರೂ ಚಾಂಪಿಯನ್ ಪಟ್ಟಕ್ಕೆ ಒಮ್ಮೆಯೂ ಏರಲು ಸಾಧ್ಯವಾದರೆ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟಿದೆ. ಎರಡು ಬಾರಿ 3ನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಬಾರಿಯ ಆವೃತ್ತಿಯಲ್ಲಿ ಗಯಾನಾ ಅಮೆಜಾನ್ ತಂಡ ಹೇಗೆ ಪ್ರದರ್ಶನ ನೀಡಬಹುದು? ತಂಡದ ಬಲಾಬಲ ಹೇಗಿದೆ ನೋಡೋಣ

ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳುವ ತಂಡಗಳು ಮತ್ತು ಆಟಗಾರರ ಸಂಪೂರ್ಣ ಪಟ್ಟಿ

1. ಸಾಮರ್ಥ್ಯ

ಅನುಭವಿ ಹಾಗೂ ಯುವ ತಂಡವನ್ನು ಹೊಂದಿರುವುದು ತಂಡದ ದೊಡ್ಡ ಸಾಮರ್ಥ್ಯವಾಗಿದೆ. ಇಮ್ರಾನ್ ತಾಹಿರ್ಮ ರಾಸ್ ಟೇಲರ್ ಅವರಂತಾ ಅನುಭವಿಗಳ ಜೊತೆಗೆ ಶಿಮ್ರಾ್ ಹೇಟ್ಮೇರ್, ಬ್ರಾಂಡನ್ ಕಿಂಗ್, ನಿಕೋಲಸ್ ಪೂರನ್ ಶೆರ್ಫೇನ್ ರುದರ್ಫೋರ್ಡ್ ಮುಂತಾದ ಯುವ ಆಟಗಾರರು ತಂಡಕ್ಕೆ ಬಲ ಹೆಚ್ಚಿಸಿದ್ದಾರೆ. ಸಿಪಿಎಲ್ 2019 ರಲ್ಲಿ 9 ಪಂದ್ಯಗಳಿಂದ 16 ವಿಕೆಟ್ ಗಳಿಸಿದ ತಾಹೀರ್ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ಮಿಂಚಿದ್ದರು. ಅದರಲ್ಲೂ 5.62 ಎಕಾನಮಿಯನ್ನು ಸಾಧಿಸಿದ್ದು ಗಮನಾರ್ಹ. ಮತ್ತೊಂದೆಡೆ ಬ್ಯಾಟಿಂಗ್‌ನಲ್ಲಿ ಕಳೆದ ಆವೃತ್ತಿಯಲ್ಲಿ ಬ್ರಾಂಡನ್ ಕಿಂಗ್ 12 ಪಂದ್ಯಗಳಿಂದ 496 ರನ್ ಗಳಿಸಿ 55.11 ಸರಾಸರಿಯಲ್ಲಿ ಒಮದು ಶತಕ ಹಾಗೂ ಮೂರು ಅರ್ಧಶತಕಗಳೊಂದಿಗೆ ಅಗ್ರ ಸ್ಕೋರರ್ ಆಗಿದ್ದರು. ಈ ಆಟಗಾರರು ಉತ್ತಮ ಪ್ರದರ್ಶನ ನೀಡಿದರೆ ಈ ಬಾರಿಯ ಚಾಂಪಿಯನ್ ಎನಿಸುವುದು ಕಠಿಣವಲ್ಲ

2. ದೌರ್ಬಲ್ಯ

ಅನುಭವಿ ಆಟಗಾರನಾಗಿರುವ ತಾಹಿರ್ 40 ವರ್ಷದವರಾಗಿದ್ದಾರೆ. ಮತ್ತೊಂದೆಡೆ ರಾಸ್ ಟೇಯ್ಲರ್ ಕೂಡ ಇದೇ ಆಸುಪಾಸಿನಲ್ಲಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರು ವಯಸ್ಸಿನ ಮಿತಿಯನ್ನು ನೀರಿದ ಪ್ರದರ್ಶನವನ್ನು ನಿಡಲೇಬೇಕಾದ ಒತ್ತಡವಿದೆ. ಜೊತೆಗೆ ಸ್ಥಳೀಯ ಆಟಗಾರರ ಹಾಗೂ ಯುವಕರ ಮೇಲೆಯೇ ಹೆಚ್ಚು ಅವಲಂಬಿತವಾಗಿದ್ದು ಒತ್ತಡವನ್ನು ಯಾವ ರೀತಿ ನಿಭಾಯಿಸುತ್ತಾರೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಸಿಪಿಎಲ್ 2020: ಐಪಿಎಲ್‌ಗೂ ಮುನ್ನವೇ ಕೆರಿಬಿಯನ್ ನಾಡಿನಲ್ಲಿ ಕ್ರಿಕೆಟ್ ಜಾತ್ರೆ

ಸಂಪೂರ್ಣ ತಂಡ ಹೀಗಿದೆ:

ಇಮ್ರಾನ್ ತಾಹಿರ್, ನಿಕೋಲಸ್ ಪೂರನ್, ಬ್ರಾಂಡನ್ ಕಿಂಗ್, ರಾಸ್ ಟೇಲರ್, ಶಿಮ್ರಾನ್ ಹೆಟ್ಮಿಯರ್, ಕ್ರಿಸ್ ಗ್ರೀನ್, ಕೈಸ್ ಅಹ್ಮದ್, ಕೀಮೋ ಪಾಲ್, ಶೆರ್ಫೇನ್ ರುದರ್ಫೋರ್ಡ್, ರೊಮಾರಿಯೋ ಶೆಫರ್ಡ್, ನವೀನ್ ಉಲ್ ಹಕ್, ಚಂದ್ರಪಾಲ್ ಹೆಮರಾಜ್, ಕೆವಿನ್ ಸಿಂಕ್ಲೇರ್, ಅಶ್ಮೀಡ್ ನೆಡ್, ಓಡಿಯನ್ ಸ್ಮಿತ್ , ಜಸ್ದೀಪ್ ಸಿಂಗ್.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, August 6, 2020, 12:08 [IST]
Other articles published on Aug 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X