ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಪಿಎಲ್ 2020: ಟ್ರಿನ್‌ಬಾಗೊ ನೈಟ್ ರೈಡರ್ಸ್ ವಿರುದ್ಧ ತಂಡಗಳು ಗರಂ

CPL 2020: Teams unhappy with Trinbago Knight Riders

ಟ್ರಿನಿಡಾಡ್ ಆ್ಯಂಡ್ ಟೊಬಾಗೊ, ಆಗಸ್ಟ್ 12: ಆಕರ್ಷಣೀಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಶುರುವಾಗಲು ಇನ್ನು ಕೇವಲ 1 ವಾರವಷ್ಟೆ ಬಾಕಿ ಉಳಿದಿದೆ. ಆಗಸ್ಟ್ 18ರಿಂದ ಸಿಪಿಎಲ್ ಆರಂಭವಾಗಲಿದೆ. ಆದರೆ ಟೂರ್ನಿ ಸಮೀಪಿಸುತ್ತಿರುವಾಗಲೇ ಫ್ರಾಂಚೈಸಿಗಳ ಮಧ್ಯೆ ಅಸಮಾಧಾನ ಬೆಳೆಯಲಾರಂಭಿಸಿದೆ.

ಮುಂಬೈ ಇಂಡಿಯನ್ಸ್ ಪರ ಹೆಚ್ಚು ರನ್ ಬಾರಿಸಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳುಮುಂಬೈ ಇಂಡಿಯನ್ಸ್ ಪರ ಹೆಚ್ಚು ರನ್ ಬಾರಿಸಿರುವ ಟಾಪ್ 5 ಬ್ಯಾಟ್ಸ್‌ಮನ್‌ಗಳು

ಕೊರೊನಾವೈರಸ್ ಭೀತಿಯ ಕಾರಣ ಸಿಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳು ಬಯೋ ಸೆಕ್ಯೂರ್ ಬಬಲ್ (ಜೈವಿಕ ಸುರಕ್ಷಾ ಪರದೆ) ಒಳಗೆ ಇರಲು ಮಾರ್ಗ ಸೂಚಿ ನೀಡಲಾಗಿತ್ತು. ಅದರಂತೆ ಕಳೆದ ಒಂದು ವಾರದಿಂದಲೂ ಬಹುತೇಕ ತಂಡಗಳು ಜೈವಿಕ ಸುರಕ್ಷಾ ತಾಣದಲ್ಲಿದ್ದು ಅಲ್ಲೇ ಅಭ್ಯಾಸ ನಡೆಸುತ್ತಿದೆ.

ಆದರೆ ಟೂರ್ನಿಯ 6 ತಂಡಗಳಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡ ಬಯೋ ಸೆಕ್ಯೂರ್ ಬಬಲ್ ಒಳಗೆ ಇನ್ನೂ ಪ್ರವೇಶಿಸಿಲ್ಲ. ಬದಲಿಗೆ ಬಯೋ ಸೆಕ್ಯೂರ್ ಬಬಲ್‌ನಿಂದ ಹೊರಗಿದ್ದು ಅಭ್ಯಾಸ ನಡೆಸುತ್ತಿದೆ. ಇದು ಉಳಿದ ತಂಡಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಐಪಿಎಲ್ 2020: ಶ್ರೇಷ್ಠ ಐಪಿಎಲ್ XI ತಂಡವನ್ನು ಪ್ರಕಟಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ಐಪಿಎಲ್ 2020: ಶ್ರೇಷ್ಠ ಐಪಿಎಲ್ XI ತಂಡವನ್ನು ಪ್ರಕಟಿಸಿದ ಗ್ಲೆನ್ ಮ್ಯಾಕ್ಸ್‌ವೆಲ್

ನೈಟ್ ರೈಡರ್ಸ್ ತಂಡದಲ್ಲಿ ಕೀರನ್ ಪೊಲಾರ್ಡ್, ಡ್ವೇನ್ ಬ್ರಾವೋ, ಡ್ಯಾರೆನ್ ಬ್ರಾವೋ, ಸುನಿಲ್ ನರೇನ್, ಲೆಂಡ್ಲ್ ಸಿಮನ್ಸ್‌ ಅವರಂತ ಅಂತಾರಾಷ್ಟ್ರೀಯ ಆಟಗಾರರಲ್ಲದೆ ಜೇಡನ್ ಸೀಲ್ಸ್‌ನಂತ ಪ್ರತಿಭಾನ್ವಿತ ಆಟಗಾರರಿದ್ದಾರೆ. ಇಂಥ ತಂಡವೇ ಸುರಕ್ಷಾ ಮಾರ್ಗಸೂಚಿ ಮೀರಿರುವುದು ಇತರ ತಂಡಗಳನ್ನು ಕೆಣಕಿದೆ.

ತಂಡದಲ್ಲಿನ ತಾರತಮ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸೇಂಟ್ ಲೂಸಿಯಾ ಝೌಕ್ಸ್ ತಂಡದ ನಾಯಕ ಡ್ಯಾರೆನ್ ಸಾಮಿ, 'ಎಲ್ಲರೂ ಬಯೋ ಸೆಕ್ಯೂರ್ ಬಬಲ್‌ನಲ್ಲಿರುವಾಗ ಕೆಲವರಷ್ಟೇ ಕೊರೊನಾ ಸೋಂಕಿತರ ಪ್ರದೇಶದಲ್ಲಿ ಅಭ್ಯಾಸ ಮಾಡಿ, ಬಳಿಕ ಸೆಲ್ಫ್ ಐಸೊಲೇಶನ್ ಇಲ್ಲದೆ ಬಬಲ್‌ನೊಳಗೆ ಪ್ರವೇಶಿಸುತ್ತಾರೆಂದರೆ ಏನರ್ಥ?,' ಎಂದು ಪ್ರಶ್ನಿಸಿದ್ದಾರೆ.

Story first published: Thursday, August 13, 2020, 10:00 [IST]
Other articles published on Aug 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X