ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಪಿಎಲ್ 2020: ಅಧಿಕಾರಯುತವಾಗಿ ಫೈನಲ್‌ಗೇರಿದ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್

Cpl 2020: Trinbago Knight Riders Thrash Jamaica Tallawahs By Nine Wickets To Enter Final

ಸಿಪಿಎಲ್ 8ನೇ ಆವೃತ್ತಿಯ ಮೊದಲ ಫೈನಲ್ ಸ್ಪರ್ಧಿಯಾಗಿ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡ ಅಧಿಕಾರಯುತವಾಗಿಯೇ ತಲುಪಿದೆ. ಟೂರ್ನಿಯುದ್ದಕ್ಕೂ ಪ್ರಚಂಡ ಆಟವನ್ನು ಪ್ರದರ್ಶಿಸಿದ ನೈಟ್ ರೈಡರ್ಸ್ ಒಂದೇ ಒಂದು ಸೋಲಿನ ರುಚಿ ಕಾಣದೇ ಫೈನಲ್ ಪ್ರವೇಶ್ ಪಡೆದುಕೊಂಡಿದೆ. ಮಂಗಳವಾರ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲೂ ಎದುರಾಳಿ ಜಮೈಕಾ ತಲ್ಲವಾಸ್ ತಂಡವನ್ನು ನಿರಾಯಾಸವಾಗಿ ಸದೆ ಬಡಿದು ಫೈನಲ್ ಟಿಕೆಟ್ ಅರ್ಹವಾಗಿಯೇ ಗಿಟ್ಟಿಸಿಕೊಂಡಿದೆ.

ಟಾಸ್ ಗೆದ್ದ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡ ಎದುರಾಳಿ ಜಮೈಕಾ ತಲ್ಲವಾಸ್‌ಗೆ ಬ್ಯಾಟಿಂಗ್ ನಡೆಸಲು ಆಹ್ವಾನ ನೀಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ಗೆ ಇಳಿದ ತಲ್ಲವಾಸ್ ಆರಂಭದಿಂದಲೇ ಎಡವಿತ್ತು. ಸೊನ್ನೆ ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡ ತಲ್ಲವಾಸ್ 2 ರನ್ ಗಳಿಸುವಷ್ಟರಲ್ಲಿ 2ನೇ ವಿಕೆಟ್ ಕಳೆದುಕೊಂಡಿತು. 10 ರನ್ ಆಗುಷ್ಟರಲ್ಲಿ ಮತ್ತೊಂದು ವಿಕೆಟ್ ಕಳೆದುಕೊಂಡರೆ 25 ರನ್‌ಗೆ 4 ವಿಕೆಟ್ ಬಿದ್ದಿತ್ತು.

ಪಂದ್ಯದ ಸಂಪೂರ್ಣ ಸ್ಕೋರ್ ಪಟ್ಟಿ ಹೀಗಿದೆ:

1
9936-nonopta-8305

ಬೋನ್ನರ್ ಹಾಗೂ ನಾಯಕ ಪೋವೆಲ್ ಜಮೈಕಾ ತಂಡಕ್ಕೆ ಸ್ವಲ್ಪ ಚೇತರಿಕೆಯನ್ನು ನೀಡಿದರಾದರೂ ರನ್ ವೇಗಿ ತೀವ್ರ ಕುಸಿತ ಕಂಡಿತ್ತು. ಅಂತಿಮವಾಗಿ ಜಮೈಕಾ ತಲ್ಲವಾಸ್ 107 ರನ್ ಗಳಿಸಲಷ್ಟೇ ಶಕ್ತವಾಯಿತು. ನೈಟ್ ರೈಡರ್ಸ್ ಪರವಾಗಿ ಅಕೀಲ್ ಹುಸೇನ್ 3 ವಿಕೆಟ್ ಕಿತ್ತು ಮಿಂಚಿದರೆ ಖಾರಿ ಫಿರ್ರೆ ಎರಡು ವಿಕೆಟ್ ಕಬಳಿಸಿದರು.

ಮತ್ತೆ ಕ್ರಿಕೆಟ್ ಅಂಗಳಕ್ಕೆ ಸಿಕ್ಸರ್ ಕಿಂಗ್ ಯುವಿ! : ಬಿಗ್‌ಬ್ಯಾಷ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಮತ್ತೆ ಕ್ರಿಕೆಟ್ ಅಂಗಳಕ್ಕೆ ಸಿಕ್ಸರ್ ಕಿಂಗ್ ಯುವಿ! : ಬಿಗ್‌ಬ್ಯಾಷ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ

ಜಮೈಕಾ ತಲ್ಲವಾಸ್ ನೀಡಿದ ಸುಲಭ ಸವಾಲನ್ನು ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ಯಾವುದೇ ಆತಂಕವಿಲ್ಲದೆ ಗುರಿ ತಲುಪುವಲ್ಲಿ ಯಶಸ್ವಿಯಾಯಿತು. ಸುನಿಲ್ ನರೈನ್ ವಿಕೆಟ್ ಬೇಗನೆ ಕಬಳಿಸುವಲ್ಲಿ ಜಮೈಕಾ ತಲ್ಲವಾಸ್ ಯಶಸ್ವಿಯಾದರೂ ಮುಂದೆ ಯಾವುದೇ ವಿಕೆಟ್ ಪಡೆಯಲೂ ಸಫಲವಾಗಲಿಲ್ಲ. ಲೆಂಡ್ಲ್ ಸಿಮನ್ಸ್ 54 ರನ್ ಗಳಿಸಿದರೆ ಟಿಯೋನ್ ವೆಬ್‌ಸ್ಟೆರ್ 44 ರನ್ ಗಳಿಸಿ ಅಜೇಯವಾಗುಳಿದರು.

ಈ ಮೂಲಕ ಭರ್ಜರಿ ಗೆಲುವಿನೊಂದಿಗೆ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡ ಫೈನಲ್ ಪ್ರವೇಶ ಪಡೆದುಕೊಂಡಿದೆ. ಈ ಟೂರ್ನಿಯಲ್ಲಿ ಟ್ರಿನ್‌ಬ್ಯಾಗೋ ನೈಟ್ ರೈಡರ್ಸ್ ತಂಡ 11 ಪಂದ್ಯಗಳನ್ನಾಡಿದ್ದು ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭರ್ಜರಯಾಗಿ ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

Story first published: Wednesday, September 9, 2020, 9:43 [IST]
Other articles published on Sep 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X