CPL 2021: ಸಿಪಿಎಲ್ ಎಲ್ಲಾ ತಂಡಗಳ ವಿವರ, ವೇಳಾಪಟ್ಟಿ ಮತ್ತು ನೇರ ಪ್ರಸಾರದ ಮಾಹಿತಿ

ವೇಳಾಪಟ್ಟಿ, ಕ್ರೀಡಾಂಗಣಗಳು ಮತ್ತು ಟೂರ್ನಿಯಲ್ಲಿ ಭಾಗವಹಿಸಲಿರುವ ಆಟಗಾರರ ವಿಚಾರದಲ್ಲಿ ಉಂಟಾಗಿದ್ದ ಸಾಕಷ್ಟು ಗೊಂದಲಗಳು ಬಗೆಹರಿದಿದ್ದು ಇದೀಗ ಒಂಬತ್ತನೇ ಆವೃತ್ತಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಶುಭಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.

ಈಗಾಗಲೇ 8 ಕೆರಿಬಿಯನ್ ಪ್ರೀಮಿಯರ್ ಲೀಗ್ ಆವೃತ್ತಿಗಳು ಯಶಸ್ವಿಯಾಗಿದ್ದು ಈ ಬಾರಿ ನಡೆಯಲಿರುವ ಒಂಭತ್ತನೇ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತು ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮತ್ತು ಕುತೂಹಲಗಳು ಹುಟ್ಟಿಕೊಂಡಿವೆ. ಹೀಗೆ ನಿರೀಕ್ಷೆಯನ್ನು ಹುಟ್ಟುಹಾಕಿರುವ ಒಂಬತ್ತನೇ ಆವೃತ್ತಿಯ ಕೆರಿಬಿಯನ್ ಪ್ರೀಮಿಯರ್ ಲೀಗ್ ಆಗಸ್ಟ್ 26ರ ಗುರುವಾರದಂದು ಆರಂಭವಾಗುತ್ತಿದ್ದು ಮೊದಲನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಟ್ರಿನ್‌ಬ್ಯಾಗೊ ನೈಟ್ ರೈಡರ್ಸ್ ಮತ್ತು ಗಯಾನ ಅಮೆಜಾನ್ ವಾರಿಯರ್ಸ್ ತಂಡಗಳು ವಾರ್ನರ್ ಪಾರ್ಕ್ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸಲಿವೆ.

ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್: ತಾನು ಮಾಡಿದ ತಪ್ಪಿನ ಕುರಿತು ಮಾತನಾಡಿದ ರಿಷಭ್ ಪಂತ್ಭಾರತ vs ಇಂಗ್ಲೆಂಡ್ ತೃತೀಯ ಟೆಸ್ಟ್: ತಾನು ಮಾಡಿದ ತಪ್ಪಿನ ಕುರಿತು ಮಾತನಾಡಿದ ರಿಷಭ್ ಪಂತ್

ಕೊರೊನಾ ವೈರಸ್ ಸೋಂಕಿನ ಕಾರಣ ಇಡೀ ಟೂರ್ನಿಯನ್ನು ಒಂದೇ ಕ್ರೀಡಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ, ಕಳೆದ ವರ್ಷದ ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಸಹ ಟ್ರಿನಿಡಾಡ್ ಮತ್ತು ಟೊಬಾಗೊನ ಎರಡು ಕ್ರೀಡಾಂಗಣಗಳಲ್ಲಿ ಮಾತ್ರ ನಡೆಸಲಾಗಿತ್ತು.

ಎಂದಿನಂತೆ ಈ ಬಾರಿಯೂ ಕೂಡ 6 ತಂಡಗಳು ಸೆಣಸಾಟ ನಡೆಸಲಿದ್ದು ಲೀಗ್ ಹಂತದಲ್ಲಿ ಎಲ್ಲಾ ತಂಡಗಳೂ ಪರಸ್ಪರ 2 ಪಂದ್ಯಗಳಲ್ಲಿ ಸೆಣಸಾಡಲಿವೆ. ಲೀಗ್ ಹಂತದಲ್ಲಿ ಟಾಪ್ 4 ಸ್ಥಾನ ಪಡೆದುಕೊಳ್ಳಲಿರುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಹಾಗೂ ಫೈನಲ್ ಪಂದ್ಯ ಸೆಪ್ಟೆಂಬರ್ 15ರಂದು ನಡೆಯಲಿದೆ.

ಹೀಗೆ ಕೊರೊನಾ ವೈರಸ್ ಸಮಸ್ಯೆಯ ನಡುವೆಯೂ ವೆಸ್ಟ್ ಇಂಡೀಸ್‌ನ ಸೇಂಟ್ ಕಿಟ್ಸ್ ನಗರದ ವಾರ್ನರ್ ಪಾರ್ಕ್ ಕ್ರೀಡಾಂಗಣದಲ್ಲಿ ಒಂಬತ್ತನೇ ಆವೃತ್ತಿಯ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ್ನು ಆಯೋಜಿಸಲಾಗಿದ್ದು, ಇದರಲ್ಲಿ ಭಾಗವಹಿಸಲಿರುವ 6 ತಂಡಗಳ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ..

ಟ್ರಿನ್‌ಬಾಗೊ ನೈಟ್ ರೈಡರ್ಸ್:

ಕೀರನ್ ಪೊಲಾರ್ಡ್ (ನಾಯಕ), ಲೆಂಡ್ಲ್ ಸಿಮನ್ಸ್, ಡ್ಯಾರೆನ್ ಬ್ರಾವೊ, ಟಿಮ್ ಸೀಫರ್ಟ್ (ವಿಕೆಟ್ ಕೀಪರ್‌), ಜೇಡೆನ್ ಸೀಲ್ಸ್, ಅಲಿ ಖಾನ್, ರವಿ ರಾಂಪಾಲ್, ಖಾರಿ ಪಿಯರೆ, ಸುನಿಲ್ ನರೈನ್, ಕಾಲಿನ್ ಮುನ್ರೋ, ಆಂಡರ್ಸನ್ ಫಿಲಿಪ್, ಟಿಯಾನ್ ವೆಬ್‌ಸ್ಟರ್, ಅಕೆಲ್ ಹೊಸೈನ್, ಇಸುರು ಉದಾನ, ಲಿಯೊನಾರ್ಡೊ ಜೂಲಿಯನ್ , ಯಾಸಿರ್ ಶಾ, ದಿನೇಶ್ ರಾಮ್ದಿನ್

https://kannada.mykhel.com/cricket/ind-vs-eng-rishabh-pant-reveals-why-the-umpires-told-him-to-change-his-standing-position-in-3rd-test-019678.html

ಗಯಾನ ಅಮೆಜಾನ್ ವಾರಿಯರ್ಸ್:

ನಿಕೋಲಸ್ ಪೂರನ್ (ನಾಯಕ), ಶೋಯೆಬ್ ಮಲಿಕ್, ಬ್ರಾಂಡನ್ ಕಿಂಗ್, ಚಂದ್ರಪಾಲ್ ಹೇಮರಾಜ್, ಶಿಮ್ರಾನ್ ಹೆಟ್ಮಯರ್, ಮೊಹಮ್ಮದ್ ಹಫೀಜ್, ಆಂಟನಿ ಬ್ರಾಂಬಲ್, ಕೆವಿನ್ ಸಿಂಕ್ಲೇರ್, ಇಮ್ರಾನ್ ತಾಹಿರ್, ವಕಾರ್ ಸಲಾಮ್‌ಖೇಲ್, ರೊಮಾರಿಯೊ ಶೆಫರ್ಡ್, ಒಡಿಯನ್ ಸ್ಮಿತ್, ಅಶ್ಮೇದ್ ನೆಡ್-ನೆಡೆಲ್, ಎನ್ ಉಲ್ -ಹಾಕ್, ಗುಡಕೇಶ್ ಮೋತಿ

ಸೇಂಟ್ ಲೂಸಿಯಾ ಕಿಂಗ್ಸ್:

ಫಾಫ್ ಡು ಪ್ಲೆಸಿಸ್ (ನಾಯಕ), ಆಂಡ್ರೆ ಫ್ಲೆಚರ್ (ವಿಕೆಟ್ ಕೀಪರ್‌), ಕೆಸ್ರಿಕ್ ವಿಲಿಯಮ್ಸ್, ಕದೀಮ್ ಅಲ್ಲೀನ್, ಸಮಿತ್ ಪಟೇಲ್, ಟಿಮ್ ಡೇವಿಡ್, ಕೀಮೋ ಪಾಲ್, ಉಸ್ಮಾನ್ ಖಾದಿರ್, ವಹಾಬ್ ರಿಯಾಜ್, ಜೀವರ್ ರಾಯಲ್, ಕೆರಾನ್ ಕೊಟ್ಟೊಯ್, ರಹಕೀಮ್ ಕಾರ್ನ್‌ವಾಲ್, ಓಬೇದ್ ಮೆಕ್ಕಾಯ್, ಮಾರ್ಕ್ ಡಯಾಲ್, ರೋಸ್ಟನ್ ಚೇಸ್, ಜಾವೆಲ್ಲೆ ಗ್ಲೆನ್, ಅಲ್ಜಾರಿ ಜೋಸೆಫ್

ಜಮೈಕಾ ತಲ್ಲವಾಹ್ಸ್:

ರೋವ್ಮನ್ ಪೊವೆಲ್ (ನಾಯಕ), ಚಾಡ್ವಿಕ್ ವಾಲ್ಟನ್ (ವಿಕೆಟ್ ಕೀಪರ್), ಕೆನ್ನಾರ್ ಲೂಯಿಸ್, ಆಂಡ್ರೆ ರಸೆಲ್, ಕಾರ್ಲೋಸ್ ಬ್ರಾಥ್‌ವೈಟ್, ಜೇಸನ್ ಮೊಹಮ್ಮದ್, ರಯಾನ್ ಪರ್ಸೌಡ್, ಹೈದರ್ ಅಲಿ, ಕ್ರಿಸ್ ಗ್ರೀನ್, ಶಮಾರ್ ಬ್ರೂಕ್ಸ್, ಕೈಸ್ ಅಹ್ಮದ್, ಅಭಿಜೈ ಮಾನ್ಸಿಂಗ್, ಜೋಶುವಾ ಜೇಮ್ಸ್, ಫಿಡೆಲ್ ಎಡ್ವರ್ಡ್ಸ್ , ಮೈಗೆಲ್ ಪ್ರಿಟೋರಿಯಸ್, ಕಿರ್ಕ್ ಮೆಕೆಂಜಿ

ಬಾರ್ಬಡೋಸ್ ರಾಯಲ್ಸ್

ಜೇಸನ್ ಹೋಲ್ಡರ್ (ನಾಯಕ), ಶಾಯ್ ಹೋಪ್ (ವಿಕೆಟ್ ಕೀಪರ್‌), ಆಶ್ಲೇ ನರ್ಸ್, ಸ್ಮಿತ್ ಪಟೇಲ್, ನಯೀಮ್ ಯಂಗ್, ಜೋಶುವಾ ಬಿಷಪ್, ಜಾನ್ಸನ್ ಚಾರ್ಲ್ಸ್, ಗ್ಲೆನ್ ಫಿಲಿಪ್ಸ್, ಹೇಡನ್ ವಾಲ್ಷ್ ಜೂನಿಯರ್, ರೇಮನ್ ರೀಫರ್, ಜಸ್ಟಿನ್ ಗ್ರೀವ್ಸ್, ಮೊಹಮ್ಮದ್ ಅಮೀರ್, ತಿಸಾರ ಪೆರೆರಾ, ಅಜಂ ಖಾನ್, ಕೈಲ್ ಮೇಯರ್ಸ್, ಓಶಾನೆ ಥಾಮಸ್, ಜೇಕ್ ಲಿಂಟಾಟ್

ಸೇಂಟ್ ಕಿಟ್ಸ್ ಮತ್ತು ನೆವಿಸ್ ದೇಶಪ್ರೇಮಿಗಳು

Rishab Pant ಅವರಿಗೆ umpire ತಮ್ಮ ಶೈಲಿ ಬದಲಿಸಲು ಹೇಳಿದ್ದೇಕೆ | Oneindia Kannada

ರಾಯದ್ ಎಮಿಟ್ (ನಾಯಕ), ಕ್ರಿಸ್ ಗೇಲ್, ಎವಿನ್ ಲೂಯಿಸ್, ಡ್ವೇನ್ ಬ್ರಾವೊ, ಶೆಲ್ಡನ್ ಕಾಟ್ರೆಲ್, ಫ್ಯಾಬಿಯನ್ ಅಲೆನ್, ಜಾನ್-ರುಸ್ ಜಗ್ಗೇಸರ್, ಡೊಮಿನಿಕ್ ಡ್ರೇಕ್ಸ್, ಡೆವೊನ್ ಥಾಮಸ್, ಕಾಲಿನ್ ಆರ್ಕಿಬಾಲ್ಡ್, ಮೈಕೆಲ್ ಲೂಯಿಸ್, ಆಸಿಫ್ ಅಲಿ, ರವಿ ಬೋಪಾರ, ಫವಾದ್ ಅಹ್ಮದ್, ಪಾಲ್ ವ್ಯಾನ್ ಮೀಕೆರೆನ್ , ಜೋಶ್ವಾ ಡಾ ಸಿಲ್ವಾ, ಶೆರ್ಫೇನ್ ರುದರ್‌ಫೋರ್ಡ್, ನಸೀಮ್ ಶಾ

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 9 - October 21 2021, 03:30 PM
ಬಾಂಗ್ಲಾದೇಶ್
ಪಪುವಾ ನ್ಯೂ ಗಿನಿವಾ
Predict Now

For Quick Alerts
ALLOW NOTIFICATIONS
For Daily Alerts
Story first published: Thursday, August 26, 2021, 16:51 [IST]
Other articles published on Aug 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X