ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆರಿಬಿಯನ್ ಪ್ರೀಮಿಯರ್ ಲೀಗ: 3ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದ ಜಮೈಕಾ ತಲ್ಲವಾಸ್

CPL 2022: Jamaica Tallawahs won Final match against Barbados Royals lift CPL Title 3rd time

ವಿಶ್ವದ ಜನಪ್ರಿಯ ಲೀಗ್ ಕ್ರಿಕೆಟ್‌ನಲ್ಲಿ ಒಂದಾಗಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಆಯೋಜಿಸುವ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ 10ನೇ ಆವೃತ್ತಿ ಮುಕ್ತಾಯ ಕಂಡಿದೆ. ಜಮೈಕಾ ತಲ್ಲವಾಸ್ ಹಾಗೂ ಬಾರ್ಬಡೋಸ್ ರಾಯಲ್ಸ್ ವಿರುದ್ಧದ ನಡೆದ ಫೈನಲ್ ಪಂದ್ಯದಲ್ಲಿ ರಾವ್ಮನ್ ಪೋವೆಲ್ ನಾಯಕತ್ವದ ಜಮೈಕಾ ತಲ್ಲವಾಸ್ ತಂಡ ಭರ್ಜರಿ ಗೆಲುವು ಸಾಧಿಸಿದ್ದು ಈ ಟೂರ್ನಿಯಲ್ಲಿ ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದಂತಾಗಿದೆ.

ಲೀಗ್ ಹಂತದಲ್ಲಿ ಜಮೈಕಾ ತಲ್ಲವಾಸ್ ತಂಡದಿಂದ ಹೇಳಿಕೊಳ್ಳಯುವಂತಾ ಪ್ರದರ್ಶನ ಬಾರದಿದ್ದರೂ ನಂತರ ತಿರುಗಿಬಿದ್ದ ರೀತಿ ನಿಜಕ್ಕೂ ಅಮೋಘ. ಲೀಗ್ ಹಂತದಲ್ಲಿ ಆಡಿದ 10 ಪಂದ್ಯಗಳ ಪೈಕಿ ಕೇವಲ 4 ಗೆಲುವು ಮಾತ್ರವೇ ಸಾಧಿಸಿದ್ದ ಜಮೈಕಾ ತಲ್ಲವಾಸ್ ತಂಡ 4ನೇ ಸ್ಥಾನಿಯಾಗಿ ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದುಕೊಂಡಿತ್ತು. ಈ ಹಂತದಲ್ಲಿ ಎರಡು ಪಂದ್ಯಗಳನ್ನು ಗೆದ್ದು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದ ಜಮೈಕಾ ತಲ್ಲವಾಸ್ ಫೈನಲ್‌ ಪಂದ್ಯದಲ್ಲಿಯೂ ಅಮೋಘ ಪ್ರದರ್ಶನ ನೀಡುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿದೆ.

ಭಾರತ ತಮ್ಮ ಹೊಸ ಜಹೀರ್ ಖಾನ್ ಅನ್ನು ಕಂಡುಕೊಂಡಿದೆ; ಈ ಬೌಲರ್ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗಭಾರತ ತಮ್ಮ ಹೊಸ ಜಹೀರ್ ಖಾನ್ ಅನ್ನು ಕಂಡುಕೊಂಡಿದೆ; ಈ ಬೌಲರ್ ಬಗ್ಗೆ ಪಾಕ್ ಮಾಜಿ ಕ್ರಿಕೆಟಿಗ

162 ರನ್‌ಗಳ ಗುರಿ ನೀಡಿದ ಬಾರ್ಬಡೋಸ್

ಲೀಗ್ ಹಂತದಲ್ಲಿ ಅಬ್ಬರದ ಪ್ರದರ್ಶನ ನೀಡಿದ್ದ ಬಾರ್ಬಡೋಸ್ ರಾಯಲ್ಸ್ ತಂಡ 8 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅಗ್ರಸ್ಥಾನಿಯಾಗಿ ಲೀಗ್ ಹಂತವನ್ನು ಮುಗಿಸಿತ್ತು. ಆದರೆ ಈ ಫೈನಲ್ ಪಂದ್ಯದಲ್ಲಿ ಬಾರ್ಬಡೋಸ್ ತಂಡದ ಪ್ರದರ್ಶನ ಹೇಳಿಕೊಳ್ಳುವಂತಿರಲಿಲ್ಲ. ಮೊದಲಿಗೆ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ವಿಫಲವಾದ ಕೈಲ್ ಮೇಯರ್ಸ್ ತಂಡದ ಪರವಾಗಿ ಅಜಂ ಖಾನ್ ಮಾತ್ರ ಅರ್ಥ ಶತಕ ಸಿಡಿಸಿ ಮಿಂಚಿದರು. ಇದರ ಪರಿಣಾಮವಾಗಿ ನಿಗದಿತ 20 ಓವರ್‌ಗಳಲ್ಲಿ ಬಾರ್ಬಡೋಸ್ ತಂಡ 7 ವಿಕೆಟ್‌ಗಳನ್ನು ಕಳೆದುಕೊಂಡು 161 ರನ್‌ಗಳನ್ನು ಗಳಿಸಿತು.

ಭರ್ಜರಿಯಾಗಿ ರನ್‌ಬೆನ್ನಟ್ಟಿದ ತಲ್ಲವಾಸ್

ಭರ್ಜರಿಯಾಗಿ ರನ್‌ಬೆನ್ನಟ್ಟಿದ ತಲ್ಲವಾಸ್

ಬಾರ್ಬಡೋಸ್ ತಂಡ ನೀಡಿದ 162 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಜಮೈಕಾ ತಲ್ಲವಾಸ್ ತಂಡ ಆರಂಭದಲ್ಲಿ ಆಘಾರ ಅನುಭವಿಸಿದತು. ಕೆನ್ನರ್ ಲೂಯೀಸ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರಾದರೂ ಬ್ರೆಂಡನ್ ಕಿಂಗ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಅಂತಿಮ ಹಂತದವರೆಗೂ ವಿಕೆಟ್ ಕಳೆದುಕೊಳ್ಳದೆ ಬ್ಯಾಟಿಂಗ್ ಮಾಡಿದ ಬ್ರೆಂಡನ್ ಕಿಂಗ್‌ಗೆ ಶಮರ್ ಬ್ಯೂಕ್ಸ್ ಉತ್ತಮ ಸಾಥ್ ನೀಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ 10.2 ಓವರ್‌ಗಳಲ್ಲಿ 86 ರನ್‌ಗಳ ಜೊತೆಯಾಟ ನೀಡಿ ಬೇರ್ಪಟ್ಟಿತು.

8 ವಿಕೆಟ್‌ಗಳ ಜಯ ಸಾಧಿಸಿದ ಜಮೈಕಾ ತಲ್ಲವಾಸ್

ಬ್ರೂಕ್ಸ್ 47 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರವೂ ನಾಯಕ ಪೋವೆಲ್ ಅವರೊಂದಿಗೆ ಕಿಂಗ್ ಅಬ್ಬರ ಮುಂದುವರಿದಿತ್ತು. ಅಂತಿಮವಾಗಿ 16.1 ಓವರ್‌ಗಳಲ್ಲಿ ಬಾರ್ಬಡೋಸ್ ರಾಯಲ್ಸ್ ನೀಡಿದ್ದ ಗುರಿ ಮುಟ್ಟುವಲ್ಲಿ ತಲ್ಲವಾಸ್ ಯಶಸ್ವಿಯಾಗಿದ್ದು ಭರ್ಜರಿ 8 ವಿಕೆಟ್‌ಗಳ ಅಂತರದ ಗೆಲುವು ಸಾಧಿಸಿದೆ. ಈ ಗೆಲುವಿನಿಂದಿಗೆ ರಾವ್ಮನ್ ಪೋವೆಲ್ ನೇತೃತ್ವದ ಜಮೈಕಾ ತಲ್ಲವಾಸ್ ತಂಡ ಚಾಂಪಿಯನ್ ಪಟ್ಟಕ್ಕೇರುವಲ್ಲಿ ಯಶಸ್ವಿಯಾಗಿದೆ. ಜಮೈಕಾ ಮೂಲದ ಫ್ರಾಂಚೈಸಿ ಈ ಮೂಲಕ ಮೂರನೇ ಬಾರಿಗೆ ಈ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದು ಅತ್ಯಂತ ಯಶಸ್ವೀ ತಂಡ ಎನಿಸಿಕೊಂಡಿದೆ.

ಇತ್ತಂಡಗಳ ಆಡುವ ಬಳಗ

ಬಾರ್ಬಡೋಸ್ ರಾಯಲ್ಸ್: ರಹಕೀಮ್ ಕಾರ್ನ್‌ವಾಲ್, ಕೈಲ್ ಮೇಯರ್ಸ್ (ನಾಯಕ), ಅಜಮ್ ಖಾನ್, ನಜಿಬುಲ್ಲಾ ಜದ್ರಾನ್, ಜೇಸನ್ ಹೋಲ್ಡರ್, ಡೆವೋನ್ ಥಾಮಸ್ (ವಿಕೆಟ್ ಕೀಪರ್), ಮುಜೀಬ್ ಉರ್ ರೆಹಮಾನ್, ಓಬೇಡ್ ಮೆಕಾಯ್, ಕಾರ್ಬಿನ್ ಬಾಷ್, ರಾಮನ್ ಸಿಮಂಡ್ಸ್, ಜೋಶುವಾ ಬಿಷಪ್
ಬೆಂಚ್: ಹ್ಯಾರಿ ಟೆಕ್ಟರ್, ಹೇಡನ್ ವಾಲ್ಷ್, ನೈಮ್ ಯಂಗ್, ಓಶೇನ್ ಥಾಮಸ್, ಜಸ್ಟಿನ್ ಗ್ರೀವ್ಸ್, ಟೆಡ್ಡಿ ಬಿಷಪ್

ಜಮೈಕಾ ತಲ್ಲವಾಸ್: ಬ್ರಾಂಡನ್ ಕಿಂಗ್, ಕೆನ್ನಾರ್ ಲೆವಿಸ್ (ವಿಕೆಟ್ ಕೀಪರ್), ಶಮರ್ ಬ್ರೂಕ್ಸ್, ರೋವ್ಮನ್ ಪೊವೆಲ್ (ನಾಯಕ), ರೇಮನ್ ರೈಫರ್, ಮೊಹಮ್ಮದ್ ನಬಿ, ಫ್ಯಾಬಿಯನ್ ಅಲೆನ್, ಇಮಾದ್ ವಾಸಿಮ್, ಕ್ರಿಸ್ ಗ್ರೀನ್, ಮಿಗೇಲ್ ಪ್ರಿಟೋರಿಯಸ್, ನಿಕೋಲ್ಸನ್ ಗಾರ್ಡನ್
ಬೆಂಚ್: ಮೊಹಮ್ಮದ್ ಅಮೀರ್, ಸಂದೀಪ್ ಲಮಿಚಾನೆ, ಶಮರ್ ಸ್ಪ್ರಿಂಗರ್, ಅಮೀರ್ ಜಾಂಗೂ, ಜೋಶುವಾ ಜೇಮ್ಸ್, ಕಿರ್ಕ್ ಮೆಕೆಂಜಿ, ಜೇಮೀ ಮರ್ಚೆಂಟ್

Story first published: Saturday, October 1, 2022, 13:44 [IST]
Other articles published on Oct 1, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X