ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಆಸ್ಟ್ರೇಲಿಯಾ ಮುಖ್ಯಸ್ಥ ಕೆವಿನ್ ರೋಬರ್ಟ್ಸ್ ರಾಜೀನಾಮೆ

Cricket Australia chief Kevin Roberts steps down

ಸಿಡ್ನಿ, ಜೂನ್ 16: ಕ್ರಿಕೆಟ್ ಆಸ್ಟ್ರೇಲಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆವಿನ್ ರೋಬರ್ಟ್ಸ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೊರೊನಾವೈರಸ್ ವೇಳೆ ತನ್ನ ನಾಯಕತ್ವದ ಬಗ್ಗೆ ಟೀಕೆಗಳು ಕೇಳಿಬಂದ ಹಿನ್ನಲೆಯಲ್ಲಿ ರೋಬರ್ಟ್ಸ್‌ ತನ್ನ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಬಾಬರ್ ಅಝಾಮ್ ವಿರಾಟ್ ಕೊಹ್ಲಿಯನ್ನು ಮೀರಿಸಿದ್ದಾರೆ: ಸಕ್ಲೇನ್ ಮುಷ್ತಾಕ್ಬಾಬರ್ ಅಝಾಮ್ ವಿರಾಟ್ ಕೊಹ್ಲಿಯನ್ನು ಮೀರಿಸಿದ್ದಾರೆ: ಸಕ್ಲೇನ್ ಮುಷ್ತಾಕ್

ಕೆವಿನ್ ರೋಬರ್ಟ್ಸ್ ಅವರ ರಾಜೀನಾಮೆ ಈ ಕೂಡಲೇ ಪರಿಣಾಮ ಬೀರಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಅಧ್ಯಕ್ಷ ಅರ್ಲ್ ಎಡ್ಡಿಂಗ್ಸ್ ತಿಳಿಸಿದ್ದಾರೆ. ತೆರವಾದ ಸ್ಥಾನಕ್ಕೆ ಮಧ್ಯಂತರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲೆ ಆಯ್ಕೆಯಾಗಿದ್ದಾರೆ. ನಿಕ್ ಅವರು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮುಖ್ಯ ನಿರ್ವಹಣಾಧಿಕಾರಿಯಾಗಿದ್ದಾರೆ.

'ಭಾರತ ಗೆಲ್ಲಲು ಇದ್ದ ದಾರಿ ಅದೊಂದೇ': 2003ರ ವಿಶ್ವಕಪ್ ಕ್ಷಣ ನೆನೆದ ಶ್ರೀನಾಥ್'ಭಾರತ ಗೆಲ್ಲಲು ಇದ್ದ ದಾರಿ ಅದೊಂದೇ': 2003ರ ವಿಶ್ವಕಪ್ ಕ್ಷಣ ನೆನೆದ ಶ್ರೀನಾಥ್

'ಕ್ರಿಕೆಟ್ ಆಸ್ಟ್ರೇಲಿಯಾದ ಸಿಇಒ ಆಗಿ ನಾನು ಪ್ರೀತಿಸುವ ಕ್ರೀಡೆಯನ್ನು ಮುನ್ನಡೆಸಲು ಮತ್ತು ಸೇವೆ ಸಲ್ಲಿಸಲು ಅವಕಾಶ ಲಭಿಸಿದ್ದು ನನ್ನ ಭಾಗ್ಯ. ನಮ್ಮ ಸಿಬ್ಬಂದಿ ಮತ್ತು ಆಟಗಾರರ ತಂಡವು ಆಟಕ್ಕೆ ಹೆಚ್ಚಿನ ಕೊಡುಗೆ ನೀಡುವ ಮಹೋನ್ನತ ವ್ಯಕ್ತಿಗಳು. ನಾವು ಒಟ್ಟಿಗೆ ಸಾಧಿಸಿದ್ದಕ್ಕೆ ಹೆಮ್ಮೆಪಡುತ್ತೇನೆ,' ಎಂದು ತನ್ನ ಅಧಿಕೃತ ಹೇಳಿಕೆ ಮೂಲಕ ರೋಬರ್ಟ್ಸ್ ತಿಳಿಸಿದ್ದಾರೆ.

ಹಾಗ್ ಪ್ರಕಟಿಸಿದ 'ಈಗಿನ ಏಕದಿನ ತಂಡ'ದಲ್ಲಿ ಭಾರತದ ಪ್ರಮುಖ ಆಟಗಾರನಿಲ್ಲ!ಹಾಗ್ ಪ್ರಕಟಿಸಿದ 'ಈಗಿನ ಏಕದಿನ ತಂಡ'ದಲ್ಲಿ ಭಾರತದ ಪ್ರಮುಖ ಆಟಗಾರನಿಲ್ಲ!

'ನಮ್ಮ ಕ್ರೀಡೆಯ ಜೀವನಾಡಿಯಾಗಿರುವ ದೇಶದಾದ್ಯಂತದ ಸಮುದಾಯಗಳಲ್ಲಿನ ಸ್ವಯಂಸೇವಕರ ಸೈನ್ಯಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ, ಕ್ರಿಕೆಟ್ ಸಮುದಾಯದ ಆಜೀವ ಮತ್ತು ಭಾವೋದ್ರಿಕ್ತ ಸದಸ್ಯನಾಗಿ, ಆಟವು ಭವಿಷ್ಯದಲ್ಲಿ ಅಭಿವೃದ್ಧಿ ಹೊಂದುವುದನ್ನು ನಾನು ಎದುರು ನೋಡುತ್ತಿದ್ದೇನೆ,' ಎಂದು ಕೆವಿನ್ ಸೇರಿಸಿದ್ದಾರೆ.

Story first published: Tuesday, June 16, 2020, 12:26 [IST]
Other articles published on Jun 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X