ಮಹಿಳಾ ತಂಡವನ್ನು ನಿಷೇಧಿಸಿದರೆ ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ರದ್ದು: ಕ್ರಿಕೆಟ್ ಆಸ್ಟ್ರೇಲಿಯಾ

ಬೆಂಗಳೂರು, ಸೆಪ್ಟೆಂಬರ್ 9: ಟೆಸ್ಟ್ ಕ್ರಿಕೆಟ್‌ನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಲು ಸಿದ್ಧವಾಗಿದ್ದ ಪುರುಷರ ಅಪ್ಘಾನಿಸ್ತಾನ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯ ಈಗ ರದ್ದಾಗುವ ಹಂತದಲ್ಲಿದೆ. ಅಪ್ಘಾನಿಸ್ತಾನದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ತಾಲಿಬಾನ್ ಸರ್ಕಾರ ಅಲ್ಲಿನ ಮಹಿಳಾ ಕ್ರಿಕೆಟ್ ತಂಡಕ್ಕೆ ನಿಷೇಧ ಹೇರಲು ಸಜ್ಜಾಗಿದೆ ಎಂಬ ವರದಿಗಳು ಬರುತ್ತಿದೆ. ಇಂತಾ ಕ್ರಮಕ್ಕೆ ತಾಲಿಬಾನ್ ಸರ್ಕಾರ ಮುಂದಾದರೆ ಪುರುಷರ ತಂಡದೊಂದಿಗೆ ಆಯೋಜನೆಯಾಗಿರುವ ಟೆಸ್ಟ್ ಕ್ರಿಕೆಟ್ ಸರಣಿಯನ್ನು ರದ್ದುಪಡಿಸಲಾಗುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಘೋಷಿಸಿದೆ.

ಗುರುವಾರ ಈ ವಿಚಾರವಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಮಾಧ್ಯಮ ಪ್ರಕಟನೆಯನ್ನು ಹೊರಡಿಸಿದೆ. ಈ ಪ್ರಕಟಣೆಯಲ್ಲಿ ಈಗ ಬರುತ್ತಿರುವ ವರದಿಯ ಪ್ರಕಾರ ತಾಲಿಬಾನ್ ಸರ್ಕಾರ ಅಪ್ಘಾನಿಸ್ತಾನದ ಮಹಿಳಾ ಕ್ರಿಕೆಟ್ ತಂಡವನ್ನು ನಿಷೇಧಿಸುವ ಕ್ರಮವನ್ನು ಕೈಗೊಂಡಲ್ಲಿ ನವೆಂಬರ್‌ನಲ್ಲಿ ಹೋಬರ್ಟ್‌ನಲ್ಲಿ ಆಯೋಜನೆ ಮಾಡಲು ಸಿದ್ಧವಾಗಿರುವ ಟೆಸ್ಟ್ ಪಂದ್ಯವನ್ನು ಮುಂದುವರಿಸಲು ಇಚ್ಛಿಸುವುದಿಲ್ಲ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಸ್ಪಷ್ಟವಾಗಿ ತಿಳಿಸಿದೆ. "ಜಾಗತಿಕ ಮಟ್ಟದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಉತ್ತೇಜನ ನೀಡುವುದು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಬಹಳಷ್ಟು ಪ್ರಮುಖ ಸಂಗತಿಯಾಗಿದೆ" ಎಂದು ಈ ಪ್ರಕಟಣೆಯಲ್ಕಲ್ಲಿ ಕ್ರಿಕೆಟ್ ಆಸ್ಟ್ರೇಲಿಯತಾ ವಿವರಿಸಿದೆ. "ಕ್ರಿಕೆಟ್ ಎಲ್ಲಿರಿಗೂ ಎಂದೇ ಎಂಬುದು ನಮ್ಮ ದೃಷ್ಟಿಕೋನವಾಗಿದೆ. ನಾವು ಪ್ರತಿ ಹಂತದಲ್ಲಿಯೂ ಮಹಿಳಾ ಕ್ರಿಕೆಟ್‌ಗೆ ಬೆಂಬಲವನ್ನು ನೀಡಲು ಬದ್ಧವಾಗಿರುತ್ತೇವೆ" ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

ತಾಲಿಬಾನ್ ಸರ್ಕಾರದ ಸಾಂಸ್ಕೃತಿಕ ಆಯೋಗದ ವಕ್ತಾರ ಅಹ್ಮದುಲ್ಲಾ ವಾಸಿಕ್ ಆಸ್ಟ್ರೇಲಿಯಾದ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು ಇಸ್ಲಾಮಿಕ್ ಕಾನೂನು ಪ್ರಕಾರ ಮಹಿಳಾ ಕ್ರಿಕೆಟ್‌ಗೆ ಅನುಮತಿಯಿಲ್ಲ ಎಂದು ತಿಳಿಸಿದ್ದಾರೆ. "ಇಸ್ಲಾಂ ಮತ್ತು ಇಸ್ಲಾಮಿಕ್ ಎಮಿರೇಟ್ ಮಹಿಳೆಯರಿಗೆ ಕ್ರಿಕೆಟ್ ಆಡಲು ಅಥವಾ ಇನ್ಯಾವುದೇ ಕ್ರೀಡೆಯಲ್ಲಿ ಭಾಗವಹಿಸಲು ಅನುಮತಿಯನ್ನು ನೀಡುವುದಿಲ್ಲ" ಎಂದು ಪ್ರತಿಕ್ರಿಯೆ ನೀಡಿರುವುದನ್ನು ಆಸ್ಟ್ರೇಲಿಯಾದ ಮಾಧ್ಯಮ ಎಸ್‌ಬಿಎಸ್ ಟಿವಿ ಉಲ್ಲೇಖ ಮಾಡಿದೆ.

ಟಿ20 ವಿಶ್ವಕಪ್‌: ಟೀಮ್ ಇಂಡಿಯಾದಲ್ಲಿಲ್ಲ ಈ ಪ್ರಮುಖ ಆಟಗಾರರಿಗೆ ಸ್ಥಾನಟಿ20 ವಿಶ್ವಕಪ್‌: ಟೀಮ್ ಇಂಡಿಯಾದಲ್ಲಿಲ್ಲ ಈ ಪ್ರಮುಖ ಆಟಗಾರರಿಗೆ ಸ್ಥಾನ

"ಕ್ರಿಕೆಟ್‌ನಲ್ಲಿ ಮಹಿಳಾ ಆಟಗಾರ್ತಿಯರ ಮುಖ ಅಥವಾ ದೇಹ ಮುಚ್ಚಿಕೊಳ್ಳದೆ ಇರಬಹುದಾದ ಸಂದರ್ಭಗಳು ಬರಬಹುದು. ಇಸ್ಲಾಂ ಮಹಿಳೆಯರನ್ನು ಈ ರೀತಿಯಾಗಿರಲು ಅನುಮತಿ ನೀಡುವುದಿಲ್ಲ. ಇದು ಮಾಧ್ಯಮಗಳ ಕಾಲ. ಈಗ ಫೋಟೋಗಳು ಹಾಗೂ ವಿಡಿಯೋಗಳು ಚಿತ್ರೀಕರಿಸುತ್ತವೆ. ಬಳಿಕ ಜನರು ಇದನ್ನು ನೊಡುತ್ತಾರೆ. ಇಸ್ಲಾಂ ಮತ್ತು ಇಸ್ಲಾಮಿಕ್ ಎಮಿರೇಟ್ಸ್ ಮಹಿಳೆಯರು ಕ್ರಿಕೆಟ್ ಅಥವಾ ತಮ್ಮನ್ನು ತಾವು ಬಹಿರಂಗಪಡಿಸುವ ಇನ್ಯಾವುದೇ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ನಿರಾಕರಿಸುತ್ತದೆ" ಎಂಬ ತಾಲಿಬಾನ್ ವಕ್ತಾರನ ಹೇಳಿಕೆಯನ್ನು ಉಲ್ಲೇಖಿಸಿ ಎಸ್‌ಬಿಎಸ್ ಟಿವಿ ವರದಿ ಮಾಡಿದೆ.

ಇನ್ನು ಈ ಹೇಳಿಕೆ ನಂತರ ಆಸ್ಟ್ರೇಲಿಯಾದ ಫಡರಲ್ ಕ್ರೀಡಾ ಸಚಿವ ಸೆನೆಟರ್ ರಿಚರ್ಡ್ ಕೋಲ್‌ಬೆಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ತಾಲಿಬಾನ್‌ನ ಈ ನಿಲುವಿನ ಕಾರಣಕ್ಕಾಗಿ ಅಪ್ಘಾನಿಸ್ತಾನದ ಪೂರ್ಣ ಪ್ರಮಾಣದ ಸದಸ್ಯತ್ವದ ವಿಚಾರವಾಗಿ ನಿರ್ಧಾರವನ್ನು ಕೂಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Ashwin ತಂಡಕ್ಕೆ ವಾಪಸ್ ಆಗಲು ಅಸಲಿ ಕಾರಣ ಏನು | Oneindia Kannada

ಇನ್ನು ಅಪ್ಘಾನಿಸ್ತಾನದಲ್ಲಿ ಹೊಸದಾಗಿ ರಚನೆಯಾಗಿರುವ ತಾಲಿಬಾನ್ ಸರ್ಕಾರ ಈ ನಿಲುವಿನ ಬಗ್ಗೆ ಬುಧವಾರ ರಾತ್ರಿ ಐಸಿಸಿ ಕೂಡ ಪ್ರತಿಕ್ರಿಯೆ ನೀಡಿದೆ. ಅಪ್ಘಾನಿಸ್ತಾನ ಕ್ರಿಕೆಟ್‌ನಲ್ಲಿ ಆಗುತ್ತಿರುವ ಬೆಳವಣಿಗೆಯ ಬಗ್ಗೆ ಐಸಿಸಿ ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಈ ಬಗ್ಗೆ ಮುಂದಿನ ತನ್ನ ನಿರ್ಧಾರಗಳನ್ನು ಟಿ20 ವಿಶ್ವಕಪ್‌ನ ಬಳಿಕ ನವೆಂಬರ್‌ನಲ್ಲಿ ನಡೆಯಲಿರುವ ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಐಸಿಸಿ ತಿಳಿಸಿದೆ. ಹೀಗಾಗಿ ಟಿ20 ವಿಶ್ವಕಪ್‌ನಲ್ಲಿ ಅಪ್ಘಾನಿಸ್ತಾನ ಪುರುಷರ ತಂಡ ಭಾಗಿಯಾಗುವುದು ಸ್ಪಷ್ಟವಾಗಿದೆ. ಆದರೆ ಪೂರ್ಣ ಸದಸ್ಯತ್ವ ನೀಡುವ ಬಗ್ಗೆ ತನ್ನ ನಿರ್ಧಾರವನ್ನು ಕಾಯ್ದಿರಿಸಿದೆ. "ಅಪ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬದಲಾವಣೆ ಹಾಗೂ ಬೆಳವಣಿಗೆಗಳ ಬಗ್ಗೆ ಐಸಿಸಿ ಗಮನವಿರಿಸಿದೆ. ಮಹಿಳಾ ಕ್ರಿಕೆಟ್‌ನ ದೀರ್ಘಾವಧಿಯ ಬೆಳವಣಿಗೆಗೆ ಐಸಿಸಿ ಬದ್ಧವಾಗಿದೆ" ಎಂದು ಹೇಳಿಕೊಂಡಿದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 4 - October 18 2021, 07:30 PM
ಶ್ರೀಲಂಕಾ
Namibia
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 9, 2021, 12:11 [IST]
Other articles published on Sep 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X