ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್‌ ಇಂಡಿಯಾದ ವೆಸ್ಟ್‌ ಇಂಡೀಸ್‌ ಪ್ರವಾಸದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

Cricket: Full schedule of Indias tour of West Indies

ಹೊಸದಿಲ್ಲಿ, ಜುಲೈ 12: ಓಲ್ಡ್‌ ಟ್ರಾಫರ್ಡ್‌ ಅಂಗಣದಲ್ಲಿ ಕಳೆದ ಬುಧವಾರ ನಡೆದ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಟೀಮ್‌ ಇಂಡಿಯಾ ನಿರಾಶಾದಾಯಕ ಪ್ರದರ್ಶನ ನೀಡಿದ ನ್ಯೂಜಿಲೆಂಡ್‌ ಎದುರು 18 ರನ್‌ಗಳ ಅಚ್ಚರಿಯ ಸೋಲುಂಡು ಸ್ಪರ್ಧೆಯಿಂದ ಹೊರಬಿದ್ದಿತು.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಇದೀಗ ವಿಶ್ವಕಪ್‌ ಅಭಿಯಾನದ ಬಳಿಕ ಅಲ್ಪ ವಿರಾಮ ತೆಗೆದುಕೊಳ್ಳಲಿರುವ ಭಾರತ ಕ್ರಿಕೆಟ್‌ ತಂಡ ಬಳಿಕ ಕೆರಿಬಿಯನ್‌ ನಾಡಿಗೆ ಪ್ರಯಾಣ ಬೆಳೆಸಲಿದೆ. ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧ ತಲಾ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಗಳಲ್ಲಿ ಆಡಲಿರುವ ಭಾರತ, ಟೆಸ್ಟ್‌ ಚಾಂಪಿಯನ್‌ಷಿಪ್‌ನ ಭಾಗವಾಗಿ 2 ಪಂದ್ಯಗಳನ್ನು ಆಡಲಿದೆ.

ಇನ್ನು ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ನಡೆಯಲಿರುವ ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಜಸ್‌ಪ್ರೀತ್‌ ಬುಮ್ರಾ ಅವರನ್ನೊಳಗೊಂಡಂತೆ ಕೆಲ ಪ್ರಮುಖ ಆಟಗಾರರು ವಿಶ್ರಾಂತಿ ಪಡೆಯಲಿದ್ದಾರೆ. ಆದರೆ, ಟೆಸ್ಟ್‌ ಸರಣಿ ಹೊತ್ತಿಗೆ ಈ ಆಟಗಾರರು ತಂಡ ಸೇರಿಕೊಳ್ಳಲಿದ್ದಾರೆ.

ವಿಶ್ವಕಪ್‌ ಫೈನಲ್‌ಗೆ ಆನ್‌ಫೀಲ್ಡ್‌ ಅಂಪೈರ್‌ಗಳನ್ನು ಪ್ರಕಟಿಸಿದ ಐಸಿಸಿವಿಶ್ವಕಪ್‌ ಫೈನಲ್‌ಗೆ ಆನ್‌ಫೀಲ್ಡ್‌ ಅಂಪೈರ್‌ಗಳನ್ನು ಪ್ರಕಟಿಸಿದ ಐಸಿಸಿ

ಮೊದಲಿಗೆ ಟಿ20 ಸರಣಿ ಆರಂಭವಾಗಲಿದ್ದು ಎರಡು ಪಂದ್ಯಗಳು ಫ್ಲೋರಿಡಾದ ಲೌಡರ್‌ ಹಿಲ್‌ನ ಸೆಂಟ್ರಲ್‌ ಬ್ರೊವರ್ಡ್‌ ರೀಜನಲ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯಲಿವೆ. ಮೂರನೇ ಹಾಗೂ ಅಂತಿಮ ಟಿ20-ಐ ಪಂದ್ಯವು ಗಯಾನದ ಪ್ರಾವಿಡೆನ್ಸ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇನ್ನು ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಭಾಗವಾಗಿ ನಡೆಯಲಿರುವ ಎರಡು ಟೆಸ್ಟ್‌ ಪಂದ್ಯಗಳು ಆಂಟಿಗುವಾ ಮತ್ತು ಜಮೈಕಾದಲ್ಲಿ ನಡೆಯಲಿವೆ. ಭಾರತ ತಂಡದ ವೆಸ್ಟ್‌ ವೆಸ್ಟ್‌ ಇಂಡೀಸ್‌ ಪ್ರವಾಸದ ಸಂಪೂರ್ಣ ವೇಳಾಪಟ್ಟಿ ಇಂತಿದೆ.

ವಿಶ್ವಕಪ್‌ ಕೂಡ ಐಪಿಎಲ್‌ ರೀತಿ ಆಗಬೇಕು ಎಂದ ವಿರಾಟ್‌ ಕೊಹ್ಲಿ!ವಿಶ್ವಕಪ್‌ ಕೂಡ ಐಪಿಎಲ್‌ ರೀತಿ ಆಗಬೇಕು ಎಂದ ವಿರಾಟ್‌ ಕೊಹ್ಲಿ!

ವೇಳಾಪಟ್ಟಿ:

ಮೊದಲ ಟಿ20-ಐ: ಆಗಸ್ಟ್‌ 3ರಂದು, ಪ್ಲೋರಿಡಾದ ಸಿಬಿಆರ್‌ಪಿ ಕ್ರೀಡಾಂಗಣ
ಎರಡನೇ ಟಿ20-ಐ: ಆಗಸ್ಟ್‌ 3ರಂದು, ಪ್ಲೋರಿಡಾದ ಸಿಬಿಆರ್‌ಪಿ ಕ್ರೀಡಾಂಗಣ
ಮೂರನೇ ಟಿ20-ಐ: ಆಗಸ್ಟ್‌ 6ರಂದು, ಗಯಾನಾದ ಪ್ರಾವಿಡೆನ್ಸ್‌ ಕ್ರೀಡಾಂಗಣ

ಮೊದಲ ODI: ಆಗಸ್ಟ್‌ 8ರಂದು, ಗಯಾನಾದ ಪ್ರಾವಿಡೆನ್ಸ್‌ ಕ್ರೀಡಾಂಗಣ
ಎರಡನೇ ODI: ಆಗಸ್ಟ್‌ 11ರಂದು, ಟ್ರಿನಿಡಾಡ್‌ನ ಕ್ವೀನ್ಸ್‌ ಪಾರ್ಕ್‌ ಕ್ರೀಡಾಂಗಣ
ಮೂರನೇ ODI: ಆಗಸ್ಟ್‌ 14ರಂದು, ಟ್ರಿನಿಡಾಡ್‌ನ ಕ್ವೀನ್ಸ್‌ ಪಾರ್ಕ್‌ ಕ್ರೀಡಾಂಗಣ

ಮೊದಲ ಟೆಸ್ಟ್‌: ಆಗಸ್ಟ್‌ 22-26, ಆಂಟಿಗುವಾದ ಸರ್‌ ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣ
ಎರಡನೇ ಟೆಸ್ಟ್‌: ಆಗಸ್ಟ್‌ 30-ಸೆ.03: ಜಮೈಕಾದ ಸಬಿನಾ ಪಾರ್ಕ್‌ ಕ್ರೀಡಾಂಗಣ

Story first published: Friday, July 12, 2019, 23:19 [IST]
Other articles published on Jul 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X