ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವರ್ಣಬೇಧದ ವಿರುದ್ಧ ಹೋರಾಟ: 90 ನಿಮಿಷದ ವಿಡಿಯೋದಲ್ಲಿ ನಿಲುವು ಹೇಳಿದ ಐಸಿಸಿ

Cricket Is Nothing Without Diversity, Says Icc

ಅಮೆರಿಕಾದಲ್ಲಿ ಕಪ್ಪುವರ್ಣೀಯ ವ್ಯಕ್ತಿ ಜಾರ್ಜ್ ಫ್ಲಾಯ್ಡ್ ಹತ್ಯೆಯ ನಂತರ ವರ್ಣಬೇಧದ ವಿರುದ್ಧ ದೊಡ್ಡ ಮಟ್ಟದ ಹೋರಾಟಕ್ಕೆ ನಾಂದಿಯಾಗಿದೆ. ಕ್ರೀಡಾಪಟುಗಳು ತಾವು ಅನುಭವಿಸುತ್ತಿರುವ ಸ್ಥಿತಿಗಳನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ. ಕ್ರಿಕೆಟ್‌ನಲ್ಲೂ ಈ ವರ್ಣಬೇಧ ಧೋರಣೆಯನ್ನು ಅನುಭವಿಸಿರುವುದಾಗಿ ಇಬ್ಬರು ಕ್ರಿಕೆಟಿಗರು ಬಹಿರಂಗವಾಗಿ ಹೇಳಿಕೊಂಡಿದ್ದರು.

ಜಾತಿ ನಿಂದನೆ ವಿವಾದ: ಭಾವನಾತ್ಮಕ ಸಂದೇಶದ ಮೂಲಕ ಯುವಿ ಸ್ಪಷ್ಟನೆಜಾತಿ ನಿಂದನೆ ವಿವಾದ: ಭಾವನಾತ್ಮಕ ಸಂದೇಶದ ಮೂಲಕ ಯುವಿ ಸ್ಪಷ್ಟನೆ

ಈ ಬೆಳವಣಿಗೆಯ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಈ ಬಗ್ಗೆ ಒಂದು ವಿಡಿಯೋ ಪೋಸ್ಟ್ ಮಾಡಿದೆ. 90 ನಿಮಿಷಗಳ ಈ ವಿಡಿಯೋದಲ್ಲಿ ತನ್ನ ನಿಲುವನ್ನು ಸ್ಪಷ್ಟವಾಗಿ ಐಸಿಸಿ ಹೇಳಿಕೊಂಡಿದೆ. ಕ್ರಿಕೆಟ್ ಅಂದರೆ ವೈವಿಧ್ಯತೆ, ವೈವಿಧ್ಯತೆಯಿಲ್ಲದೆ ಸಂಪೂರ್ಣ ಚಿತ್ರಣ ದೊರೆಯಲಾರದು ಎಂದು ಬರೆದುಕೊಂಡಿದೆ.

ವಿಶ್ವಕಪ್ ಸೂಪರ್ ಓವರ್ ವಿಡಿಯೋ

ಐಸಿಸಿ ಪೋಸ್ಟ್ ಮಾಡಿದ ಈ ವಿಡಿಯೋ ಕಳೆದ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದ್ದಾಗಿದೆ. ಫೈನಲ್ ಪಂದ್ಯದ ಸೂಪರ್ ಓವರ್‌ನ ಅಂತಿಮ ಎಸೆತದ ವಿಡಿಯೋದಲ್ಲಿ ಕ್ರಿಕೆಟ್‌ನಲ್ಲಿನ ವೈವಿಧ್ಯತೆ ಮತ್ತು ಆ ವೈವಿಧ್ಯತೆಗೆ ದಕ್ಕಿದ ಗೆಲುವನ್ನು ಭಾವನಾತ್ಮಕವಾಗಿ ತೋರಿಸುವ ಪ್ರಯತ್ನ ಮಾಡಿದೆ.

ವೈವಿಧ್ಯತೆಯ ವಿಶ್ವಕಪ್ ವಿಜೇತ ತಂಡ

ವೈವಿಧ್ಯತೆಯ ವಿಶ್ವಕಪ್ ವಿಜೇತ ತಂಡ

ಕಳೆದ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡದ ವೈವಿಧ್ಯತೆಯೇ ಈ ವಿಡಿಯೋದ ವಿಶೇಷತೆಯಾಗಿದೆ. ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಐರ್ಲೆಂಡ್ ಮೂಲದ ಆಟಗಾರ. ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಬೆನ್ ಸ್ಟ್ರೋಕ್ಸ್ ನ್ಯೂಜಿಲೆಂಡ್ ಮೂಲದ ಕ್ರಿಕೆಟಿಗ. ತಂಡದ ಇಬ್ಬರು ಸ್ಪಿನ್ನರ್‌ಗಳಾಗ ಆದಿಲ್ ರಶೀದ್ ಮತ್ತು ಮೊಯಿನ್ ಅಲಿ ಪಾಕಿಸ್ತಾನ ಮೂಲದವರು. ಆರಂಭಿಕ ಆಟಗಾರ ಜೇಸನ್ ರಾಯ್ ದಕ್ಷಿಣ ಆಫ್ರಿಕಾ ಮೂಲದವರಾಗಿದ್ದಾರೆ.

ವಿಭಿನ್ನ-ದೇಶ- ಹಿನ್ನೆಲೆ-ಸಂಸ್ಕೃತಿ

ವಿಭಿನ್ನ-ದೇಶ- ಹಿನ್ನೆಲೆ-ಸಂಸ್ಕೃತಿ

ವಿಶ್ವಕಪ್ ಗೆದ್ದ ಇಂಗ್ಲೆಂಡ್‌ ತಂಡದಲ್ಲಿದ್ದ ಈ ವೈವಿಧ್ಯತೆಯ ಬಗ್ಗೆ ಅಂದು ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಕೂಡ ಹೇಳಿಕೆಯನ್ನು ನೀಡಿದ್ದರು. ಇದು ನಿಜವಾಗಿಯೂ ನಮ್ಮ ತಂಡವನ್ನು ನಿರೂಪಿಸುತ್ತದೆ. ಸಾಕಷ್ಟು ವೈವಿಧ್ಯಮಯ ಹಿನ್ನೆಲೆಗಳು ಮತ್ತು ಸಂಸ್ಕೃತಿಗಳು ಮತ್ತು ವ್ಯಕ್ತಿಗಳು ವಿಭಿನ್ನ ದೇಶಗಳಲ್ಲಿ ಬೆಳೆದ ಆಟಗಾರರಿದ್ದಾರೆ ಎಂದಿದ್ದರು.

ಕ್ರಿಕೆಟ್‌ಲ್ಲೂ ವರ್ಣಬೇಧವಿದೆಯೆಂದ ಆಟಗಾರರು

ಕ್ರಿಕೆಟ್‌ಲ್ಲೂ ವರ್ಣಬೇಧವಿದೆಯೆಂದ ಆಟಗಾರರು

ಈ ವಿಡಿಯೋ ಅಂತ್ಯದಲ್ಲಿ ಐಸಿಸಿ ವರ್ಣಬೇಧದ ವಿರುದ್ಧ ನಿಲುವನ್ನು ಹೊಂದಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಇತ್ತೀಚೆಗೆ ವೆಸ್ಟ್ ಇಂಡೀಸ್ ಆಟಗಾರರಾದ ಕ್ರಿಸ್ ಗೇಲ್ ಮತ್ತು ಡ್ಯಾರನ್ ಸಮಿ ಕ್ರಿಕೆಟ್‌ನಲ್ಲೂ ತಾವು ವರ್ಣಬೇಧ ಧೋರಣೆಯನ್ನು ಅನುಭವಿಸಿದ್ದಾಗಿ ಹೇಳಿದ್ದರು.

Story first published: Friday, June 5, 2020, 22:22 [IST]
Other articles published on Jun 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X