ಏಷ್ಯನ್ ಗೇಮ್ಸ್‌ಗೆ ಮರಳಿದ ಕ್ರಿಕೆಟ್, 2022ರ ಗೇಮ್ಸ್‌ನಲ್ಲಿ ಕ್ರಿಕೆಟ್ ರಸದೌತಣ

Cricket set for Asian Games return in 2022, IOA welcomes move

ನವದೆಹಲಿ, ಮಾರ್ಚ್ 4: ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಕ್ರಿಕೆಟನ್ನು ಮರಳಿ ಸೇರ್ಪಡಿಸಲಾಗಿದೆ. ಭಾನುವಾರ (ಮಾರ್ಚ್ 3) ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಕ್ರಿಕೆಟ್‌ ಆಟವನ್ನು 2022ರಲ್ಲಿ ಚೀನಾದ ಹ್ಯಾಂಗ್ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಸೇರಿಸಿಕೊಂಡಿದೆ.

ಪಾಕಿಸ್ತಾನ ಜತೆ ನಂಟು ಬೇಡ ಬಿಸಿಸಿಐ ಮನವಿ ತಿರಸ್ಕರಿಸಿದ ಐಸಿಸಿ

ಬ್ಯಾಂಕಾಕ್ ನಲ್ಲಿ ನಡೆದ ಒಸಿಎಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಒಸಿಎ ಗೌರವ ಉಪಾಧ್ಯಕ್ಷ ರಣಧೀರ್ ಸಿಂಗ್ ಅವರು ಪಿಟಿಐ ಜೊತೆ ಪ್ರತಿಕ್ರಿಯಿಸಿ, 'ಹೌದು. 2022ರ ಹ್ಯಾಂಗ್ಝೌ ಏಷ್ಯನ್ ಕ್ರೀಡಾಕೂಟಕ್ಕೆ ಕ್ರಿಕೆಟನ್ನು ಸೇರಿಸಲಾಗಿದೆ' ಎಂದು ತಿಳಿಸಿದರು.

2010 ಮತ್ತು 2014ರ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಆಟಗಳಲ್ಲಿ ಒಂದಾಗಿ ಆಡಲಾಗಿದ್ದ ಕ್ರಿಕೆಟನ್ನು 2018ರ ಏಷ್ಯನ್ ಗೇಮ್ಸ್‌ನಿಂದ ತೆಗೆದುಹಾಕಲಾಗಿತ್ತು. ಇದೀಗ ಜನಪ್ರಿಯ ಕ್ರಿಕೆಟ್ ಆಟವನ್ನು ಮತ್ತೆ ಕ್ರೀಡಾಕೂಟದಲ್ಲಿ ಸೇರಿಸಿಕೊಳ್ಳಲಾಗಿದೆ. ಒಸಿಎಯ ಈ ನಿರ್ಧಾರವನ್ನು ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ (ಒಸಿಎ) ಸ್ವಾಗತಿಸಿದೆ.

ಲೋಕಸಭೆ ಚುನಾವಣೆ ಸಮರಕ್ಕೆ ಎಂಟ್ರಿ ಕೊಟ್ಟ ಸ್ಟಾರ್ ಕ್ರಿಕೆಟರ್ ಪತ್ನಿ

2022ರ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಮತ್ತು ಮಹಿಳೆಯರ ಟಿ20 ಮಾದರಿಯ ಕ್ರಿಕೆಟನ್ನು ಸೇರಿಸಿಕೊಳ್ಳಲಾಗಿದೆ ಎಂದು ಒಸಿಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಮಾಹಿತಿ ನೀಡಿದ್ದಾರೆ. ಈ ಕುರಿತು ಬಿಸಿಸಿಐಗೆ ಒಸಿಎ ಪತ್ರ ಬರೆಯಲಿರುವುದಾಗಿ ಅವರು ತಿಳಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Monday, March 4, 2019, 11:54 [IST]
Other articles published on Mar 4, 2019
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more