ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಮತ್ತೆ ಎಬಿ ಡಿ ವಿಲಿಯರ್ಸ್ ನಾಯಕ?!

Cricket South Africa asks AB de Villiers to lead the team

ಕೇಪ್‌ಟೌನ್, ಏಪ್ರಿಲ್ 29: ತಂಡದ ನಾಯಕತ್ವ ವಹಿಸುವಂತೆ ಕ್ರಿಕೆಟ್‌ ದಕ್ಷಿಣ ಆಫ್ರಿಕಾವು ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಅವರಲ್ಲಿ ಕೇಳಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಉತ್ತಮ ಫಾರ್ಮ್‌ಗೆ ಮರಳಿದ ಬಳಿಕವಷ್ಟೇ ತಾನು ರಾಷ್ಟ್ರೀಯ ತಂಡಕ್ಕೆ ಮರಳುವುದಾಗಿ ಎಬಿ ಡಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

'ಆತ ಕೊರೊನಾಗಿಂತ ಕೆಟ್ಟವ': ರಾಮ್‌ನರೇಶ್‌ ಮೇಲೆ ಕ್ರಿಸ್ ಗೇಲ್ ಕಿಡಿ!'ಆತ ಕೊರೊನಾಗಿಂತ ಕೆಟ್ಟವ': ರಾಮ್‌ನರೇಶ್‌ ಮೇಲೆ ಕ್ರಿಸ್ ಗೇಲ್ ಕಿಡಿ!

ಸ್ಫೋಟಕ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್ಸ್ 2018ರ ಮೇನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದರು. ಅದಾಗಿ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಲು ಮನಸ್ಸಿದೆ. ದಕ್ಷಿಣ ಆಫ್ರಿಕಾ ತಂಡಕ್ಕಾಗಿ ಇನ್ನೊಂದಿಷ್ಟು ಕಾಲ ಕ್ರಿಕೆಟ್‌ನಲ್ಲಿರಲು ಬಯಸಿದ್ದೇನೆ ಎಂದು ಎಬಿಡಿ ಹೇಳಿಕೊಂಡಿದ್ದರು.

ಸಚಿನ್ ನಾಟೌಟ್ ತೀರ್ಪು ಈಗಲೂ ನನ್ನನ್ನು ಡಿಸ್ಟರ್ಬ್ ಮಾಡುತ್ತಿದೆ: ಅಜ್ಮಲ್ಸಚಿನ್ ನಾಟೌಟ್ ತೀರ್ಪು ಈಗಲೂ ನನ್ನನ್ನು ಡಿಸ್ಟರ್ಬ್ ಮಾಡುತ್ತಿದೆ: ಅಜ್ಮಲ್

'ದಕ್ಷಿಣ ಆಫ್ರಿಕಾ ತಂಡಕ್ಕೆ ಆಡಲು ನನಗೂ ಆಸೆಯಿತ್ತು. ಅಲ್ಲದೆ ಕ್ರಿಕೆಟ್‌ ಸೌತ್‌ ಆಫ್ರಿಕಾ ಕೂಡ ಮತ್ತೆ ತಂಡವನ್ನು ಮುನ್ನಡೆಸುವಂತೆ ನನ್ನಲ್ಲಿ ಕೇಳಿಕೊಂಡಿದೆ,' ಎಂದು ಸ್ಟಾರ್‌ ಸ್ಪೋರ್ಟ್ಸ್ ಶೋನಲ್ಲಿ 36ರ ಹರೆಯದ ಎಬಿಡಿ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ಪರ ಡಿ ವಿಲಿಯರ್ಸ್ 114 ಟೆಸ್ಟ್, 228 ಏಕದಿನ ಪಂದ್ಯಗಳು, 78 ಟಿ20ಐ ಪಂದ್ಯಗಳನ್ನಾಡಿದ್ದಾರೆ.

ಯುಎಸ್‌ಎ ಕ್ರಿಕೆಟ್‌ ಟೀಮ್‌ನ ಮುಖ್ಯ ಕೋಚ್‌ ಆಗಿ ಕನ್ನಡಿಗ ನೇಮಕಯುಎಸ್‌ಎ ಕ್ರಿಕೆಟ್‌ ಟೀಮ್‌ನ ಮುಖ್ಯ ಕೋಚ್‌ ಆಗಿ ಕನ್ನಡಿಗ ನೇಮಕ

'ನನ್ನ ಪಾಲಿಗೆ ತುಂಬಾ ಪ್ರಮುಖ ಸಂಗತಿಯೆಂದರೆ ನಾನು ಮತ್ತೆ ಟಾಪ್ ಫಾರ್ಮ್‌ಗೆ ಮರಳಬೇಕು. ಉಳಿದೆಲ್ಲ ಆಟಗಾರರಿಗಿಂತ ಉತ್ತಮ ಅನ್ನಿಸಿಕೊಳ್ಳಬೇಕು. ತಂಡಕ್ಕೆ ಮರಳಲು ಸರಿಯಾದ ಸಮಯ ಅನ್ನಿಸಿದರೆ ಆಗ ನಾನು ಪ್ಲೇಯಿಂಗ್‌ XIನಲ್ಲೂ ಬರಬಲ್ಲೆ ಎಂದು ಭಾವಿಸಲು ಸಾಧ್ಯವಾಗುತ್ತದೆ,' ಎಂದು ಎಬಿಡಿ ನುಡಿದಿದ್ದಾರೆ.

Story first published: Wednesday, April 29, 2020, 15:10 [IST]
Other articles published on Apr 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X