ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ದಕ್ಷಿಣ ಆಫ್ರಿಕಾದಲ್ಲಿ 7 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆ

Cricket South Africa reports seven positive coronavirus cases

ಕೇಪ್‌ಟೌನ್, ಜೂನ್ 22: ಕ್ರಿಕೆಟ್ ದಕ್ಷಿಣ ಆಫ್ರಿಕಾದಲ್ಲಿ ಒಟ್ಟು ಏಳು ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ. ಕ್ರಿಕೆಟ್ ಸಂಸ್ಥೆ ಈ ವಿಚಾರವನ್ನು ಸೋಮವಾರ (ಜೂನ್ 22) ಬಹಿರಂಗಪಡಿಸಿದೆ. ಕ್ರಿಕೆಟ್ ದಕ್ಷಿಣ ಆಫ್ರಿಕಾವು (ಸಿಎಸ್‌ಎ) ದೇಶದಾದ್ಯಂತ ಸುಮಾರು 100 ಮಂದಿ ಉದ್ಯೋಗಿಗಳಿಗೆ ಕೊರೊನಾವೈರಸ್ ಪರೀಕ್ಷೆ ನಡೆಸಿತ್ತು. ಇದರಲ್ಲಿ ಅಧಿಕಾರಿಗಳು ಮತ್ತು ಒಪ್ಪಂದದ ವೃತ್ತಿಪರ ಅಟಗಾರರು ಸೇರಿದ್ದರು.

ಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲೇ ಸೌರವ್ ಗಂಗೂಲಿ ಶತಕ ಬಾರಿಸಿದ್ದ ದಿನವಿದುಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲೇ ಸೌರವ್ ಗಂಗೂಲಿ ಶತಕ ಬಾರಿಸಿದ್ದ ದಿನವಿದು

'ನಾವು ಖಂಡಿತವಾಗಿಯೂ ಜನರನ್ನು ಪರೀಕ್ಷಿಸಿದ್ದೇವೆ. ಅದರಲ್ಲಿ ಕೆಲವರ ಫಲಿತಾಂಶ ಪಾಸಿಟಿವ್ ಬಂದಿದೆ. 100ಕ್ಕೂ ಹೆಚ್ಚು ಪರೀಕ್ಷೆಗಳನ್ನು ನಡೆಸಿದ ನಂತರ, ಏಳು ಪ್ರಕರಣಗಳು ಪತ್ತೆಯಾಗಿದ್ದು ವಾಸ್ತವವಾಗಿ ಕಡಿಮೆಯೆ,' ಎಂದು ಸಿಎಸ್‌ಎ ಪ್ರಭಾರ ಸಿಇಒ ಜಾಕ್ವೆಸ್ ಫೌಲ್ ಸ್ಪೋರ್ಟ್ಸ್‌ 24 ಜೊತೆ ಹೇಳಿಕೊಂಡಿದ್ದಾರೆ.

ನಾನು ಬಹುತೇಕ ಎಲ್ಲವನ್ನೂ ದ್ರಾವಿಡ್ ಅವರಿಂದ ಕಲಿತಿದ್ದೇನೆ: ಸ್ಯಾಮ್ಸನ್ನಾನು ಬಹುತೇಕ ಎಲ್ಲವನ್ನೂ ದ್ರಾವಿಡ್ ಅವರಿಂದ ಕಲಿತಿದ್ದೇನೆ: ಸ್ಯಾಮ್ಸನ್

ಕೊರೊನಾ ಪರೀಕ್ಷೆ ಪಾಸಿಟಿವ್ ಬಂದಿದ್ದರಲ್ಲಿ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ತಂಡದ ಆಟಗಾರರಿದ್ದಾರೆಯೆ ಎಂಬುದನ್ನು ಫೌಲ್ ತಿಳಿಸಿಲ್ಲ. 'ನಮ್ಮ ವೈದ್ಯಕೀಯ ನೈತಿಕ ಪ್ರೋಟೋಕಾಲ್ ಪ್ರಕಾರ ಪಾಸಿಟಿವ್ ಫಲಿತಾಂಶ ಬಂದ ಜನರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲು ನಮಗೆ ಅನುಮತಿಯಿರುವುದಿಲ್ಲ,' ಎಂದು ಫೌಲ್ ಹೇಳಿದ್ದಾರೆ.

WWEಗೆ ನಿವೃತ್ತಿ ಘೋಷಿಸಿದ ರಸ್ಲಿಂಗ್ ಸೂಪರ್ ಸ್ಟಾರ್ ಅಂಡರ್‌ಟೇಕರ್!WWEಗೆ ನಿವೃತ್ತಿ ಘೋಷಿಸಿದ ರಸ್ಲಿಂಗ್ ಸೂಪರ್ ಸ್ಟಾರ್ ಅಂಡರ್‌ಟೇಕರ್!

ವಿಶ್ವದಾದ್ಯಂತ ಸುಮಾರು 90 ಲಕ್ಷ ಜನರು ಮಾರಕ ಕೊರೊನಾ ವೈರಸ್‌ಗೆ ತುತ್ತಾಗಿದ್ದಾರೆ. ಕ್ರಿಕೆಟ್‌ ರಂಗದಲ್ಲಿ ಕೋವಿಡ್-19ಗೆ ತುತ್ತಾದ ಪ್ರಮುಖರೆಂದರೆ ಬಾಂಗ್ಲಾದೇಶದ ಮಶ್ರಾಫೆ ಮೊರ್ತಾಝಾ, ಪಾಕಿಸ್ತಾನ ಮಾಜಿ ನಾಯಕ ಶಾಹಿದ್ ಅಫ್ರಿದಿ, ದಕ್ಷಿಣ ಆಫ್ರಿಕಾದ ಪ್ರಥಮದರ್ಜೆ ಕ್ರಿಕೆಟರ್ ಸೋಲೊ ಎನ್‌ಕ್ವೈನಿ.

Story first published: Tuesday, June 23, 2020, 9:52 [IST]
Other articles published on Jun 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X