ಈ ಬಾರಿಯ ಐಪಿಎಲ್ ಟೂರ್ನಿಯನ್ನು ಈ ದೇಶದಲ್ಲಿ ನಡೆಸಲು ಬಂತು ಪ್ರಸ್ತಾಪ

ಕಳೆದೆರಡು ವರ್ಷಗಳಿಂದ ಕ್ರಿಕೆಟ್ ಟೂರ್ನಿಗಳು ಸೇರಿದಂತೆ ಹಲವಾರು ಕ್ರೀಡಾ ಚಟುವಟಿಕೆಗಳಿಗೆ ಕೊರೋನಾ ವೈರಸ್ ಅಡ್ಡಿ ಮಾಡುತ್ತಲೇ ಬರುತ್ತಿದೆ. 2020ರಲ್ಲಿ ಜರುಗಬೇಕಿದ್ದ ಹಲವಾರು ಕ್ರೀಡಾ ಟೂರ್ನಿಗಳನ್ನು ಕೊರೋನಾವೈರಸ್ ಕಾರಣದಿಂದಾಗಿ ಮುಂದೂಡಲ್ಪಟ್ಟು ಕಳೆದ ವರ್ಷ ನಡೆಸಲಾಯಿತು. ಇನ್ನು ಅತಿ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಎಂದೇ ಖ್ಯಾತಿಯನ್ನು ಪಡೆದಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 2020ರ ಆವೃತ್ತಿ ಕೂಡ ಕೊರೋನಾ ವೈರಸ್ ಹೊಡೆತಕ್ಕೆ ಒಳಗಾಗಿತ್ತು. ಆಗ ತಾನೆ ದೇಶದಾದ್ಯಂತ ವ್ಯಾಪಿಸುತ್ತಿದ್ದ ಕೊರೋನಾ ವೈರಸ್ ಸೋಂಕಿಗೆ ಹೆದರಿದ ಬಿಸಿಸಿಐ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿ ಸಂಪೂರ್ಣ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಿತ್ತು. ಹಾಗೂ ವಿಶ್ವದಾದ್ಯಂತ ಆ ವರ್ಷ ಕೊರೋನಾ ವೈರಸ್ ಹಾವಳಿ ಹೆಚ್ಚಿದ್ದರೂ ಸಹ ಯಾವುದೇ ರೀತಿಯ ಅಡಚಣೆಗಳು ಆಗದ ರೀತಿ ಟೂರ್ನಿಯನ್ನು ಯುಎಇಯಲ್ಲಿ ಸಂಪೂರ್ಣವಾಗಿ ಹಾಗೂ ಅಚ್ಚುಕಟ್ಟಾಗಿ ನಡೆಸಲಾಯಿತು.

ಈತ ಬೇಕೆಂದು ಪ್ರತೀ ತಂಡವೂ ಬಯಸುತ್ತದೆ: ತಂಡದಿಂದ ಹೊರಬಿದ್ದ ಆಟಗಾರನನ್ನು ಕೊಂಡಾಡಿದ ರಾಹುಲ್ಈತ ಬೇಕೆಂದು ಪ್ರತೀ ತಂಡವೂ ಬಯಸುತ್ತದೆ: ತಂಡದಿಂದ ಹೊರಬಿದ್ದ ಆಟಗಾರನನ್ನು ಕೊಂಡಾಡಿದ ರಾಹುಲ್

ಇದೇ ರೀತಿ ಕಳೆದ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಕೂಡ ಕೊರೋನಾ ವೈರಸ್ ಅಡ್ಡಿಯನ್ನುಂಟು ಮಾಡಿತ್ತು. ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಇಲ್ಲ ಎಂದು ಬಿಸಿಸಿಐ ಭಾರತದ ನೆಲದಲ್ಲಿಯೇ ಟೂರ್ನಿಯನ್ನು ಆರಂಭಿಸಿತ್ತು. ಆದರೆ ಲೀಗ್ ಹಂತದ 29 ಪಂದ್ಯಗಳು ಮುಗಿದ ನಂತರ ವಿವಿಧ ತಂಡಗಳ ಕೆಲ ಆಟಗಾರರಲ್ಲಿ ಕೊರೊನ ಸೋಂಕು ಕಾಣಿಸಿಕೊಂಡಿತು. ಹೀಗೆ ಕಠಿಣ ಬಯೋ ಬಬಲ್ ವ್ಯವಸ್ಥೆಯನ್ನು ಮಾಡಿದ್ದರೂ ಕೂಡ ಸೋಂಕು ಆಟಗಾರರಲ್ಲಿ ಕಾಣಿಸಿಕೊಂಡಿದ್ದರಿಂದ ಟೂರ್ನಿಯನ್ನು ತಾತ್ಕಾಲಿಕವಾಗಿ ಮುಂದೂಡಿ, ನಂತರದ ದಿನಗಳಲ್ಲಿ ಯುಎಇಯಲ್ಲಿ ಮುಂದುವರಿಸಲಾಯಿತು.

ಹೀಗೆ ಕಳೆದೆರಡು ವರ್ಷಗಳಿಂದ ಭಾರತದಲ್ಲಿ ಸಂಪೂರ್ಣವಾಗಿ ನಡೆಯದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ 2 ವರ್ಷವೂ ಸಹ ಯುಎಇಯಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿತು. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಬಿಸಿಸಿಐ ಭಾರತದಲ್ಲಿಯೇ ನಡೆಸುವ ಯೋಜನೆಯಲ್ಲಿದ್ದು, ಸದ್ಯ ದೇಶವ್ಯಾಪಿ ಹರಡುತ್ತಿರುವ ಒಮೈಕ್ರಾನ್ ಸೋಂಕು ಬಿಸಿಸಿಐನ ಈ ಯೋಜನೆಗೆ ಅಡ್ಡಿಯುಂಟು ಮಾಡುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಕೂಡ ಭಾರತದಿಂದಾಚೆಗೆ ಏರ್ಪಡಿಸುವ ಸಾಧ್ಯತೆಗಳು ಹೆಚ್ಚಿದ್ದು ಇತ್ತೀಚೆಗಷ್ಟೇ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆತಿಥ್ಯವನ್ನು ವಹಿಸಿಕೊಳ್ಳಲು ಸಿದ್ಧ ಎಂದು ಮುಂದೆ ಬಂದಿತ್ತು.

ಲೆಜೆಂಡ್ಸ್ ಲೀಗ್: 28 ಎಸೆತಕ್ಕೆ 69 ರನ್ ಚಚ್ಚಿದ ಅಫ್ಗನ್; ಮಹತ್ವದ ಪಂದ್ಯದಲ್ಲಿ ಸೋತ ಇಂಡಿಯಾ ಮಹಾರಾಜಸ್ಲೆಜೆಂಡ್ಸ್ ಲೀಗ್: 28 ಎಸೆತಕ್ಕೆ 69 ರನ್ ಚಚ್ಚಿದ ಅಫ್ಗನ್; ಮಹತ್ವದ ಪಂದ್ಯದಲ್ಲಿ ಸೋತ ಇಂಡಿಯಾ ಮಹಾರಾಜಸ್

Virat Kohli ಈಗಲೂ ಎಷ್ಟು ವರ್ಷ ಕ್ರಿಕೆಟ್ ಆಡಬಹುದು | Oneindia Kannada

ಇದೀಗ ಅದೇ ರೀತಿ ದಕ್ಷಿಣ ಆಫ್ರಿಕಾ ಕೂಡ ತಮ್ಮ ದೇಶದಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಆಯೋಜಿಸುವಂತೆ ಬಿಸಿಸಿಐಗೆ ಪ್ರಸ್ತಾಪವೊಂದನ್ನು ಸಲ್ಲಿಸಿದೆ ಎಂದು ವರದಿಯೊಂದು ಮಾಹಿತಿಯನ್ನು ನೀಡಿದೆ. ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಇತ್ತೀಚೆಗಷ್ಟೇ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ 3 ಪಂದ್ಯಗಳ ಟೆಸ್ಟ್ ಹಾಗೂ 3 ಪಂದ್ಯಗಳ ಏಕದಿನ ಸರಣಿ ಸುಮಾರು ಒಂದೂವರೆ ತಿಂಗಳಿಗೂ ಹೆಚ್ಚು ಕಾಲ ಯಾವುದೇ ಅಡಚಣೆಯಿಲ್ಲದೆ ಯಶಸ್ವಿಯಾಗಿ ನಡೆಯಿತು. ಹೀಗಾಗಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಬಹುದಾಗಿದ್ದು, ಆತಿಥ್ಯವನ್ನು ವಹಿಸಿಕೊಳ್ಳಲು ಸಿದ್ಧ ಎಂದು ಸೌತ್ಆಫ್ರಿಕಾ ಕ್ರಿಕೆಟ್ ಬೋರ್ಡ್ ಬಿಸಿಸಿಐಗೆ ತಿಳಿಸಿದೆ ಎನ್ನಲಾಗುತ್ತಿದೆ. ಸದ್ಯ ಬಿಸಿಸಿಐ ಮುಂದೆ ಭಾರತ, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ಈ 3 ದೇಶಗಳಲ್ಲಿ ಈ ಬಾರಿಯ ಐಪಿಎಲ್ ಟೂರ್ನಿ ನಡೆಸಬಹುದಾದ ಆಯ್ಕೆಯಿದ್ದು, ಬಿಸಿಸಿಐ ಯಾವ ದೇಶವನ್ನು ಆಯ್ಕೆ ಮಾಡಿಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

For Quick Alerts
ALLOW NOTIFICATIONS
For Daily Alerts
Story first published: Tuesday, January 25, 2022, 19:49 [IST]
Other articles published on Jan 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X