ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ಫೀಲ್ಡಿಂಗ್‌ಗಾಗಿ ವಿಶಿಷ್ಠ ದಾಖಲೆ ಬರೆದ ರವೀಂದ್ರ ಜಡೇಜಾ

Cricket World Cup 2019: Ravindra Jadeja creates unique fielding record

ಮ್ಯಾಂಚೆಸ್ಟರ್, ಜುಲೈ 10: ಟೀಮ್ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ ಅದ್ಭುತ ಫೀಲ್ಡಿಂಗ್‌ಗಾಗಿ ಹೆಸರಾದವರು. ಜಡೇಜಾ ಬ್ಯಾಟ್ ಮತ್ತು ಬಾಲ್‌ ಜೊತೆಗೆ ಫೀಲ್ಡಿಂಗ್‌ನಲ್ಲೂ ತಂಡಕ್ಕೆ ವಿಶೇಷ ಕೊಡುಗೆಯಿತ್ತಿದ್ದಾರೆ. ಬುಧವಾರ (ಜುಲೈ 10) ಜಡೇಜಾ ಅದ್ಭುತ ಫೀಲ್ಡಿಂಗ್‌ಗಾಗಿ ಮತ್ತೆ ಗಮನ ಸೆಳೆದಿದ್ದಾರೆ.

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಮಂಗಳವಾರ (ಜುಲೈ 9) ಆರಂಭಗೊಂಡಿದ್ದ ಭಾರತ-ನ್ಯೂಜಿಲೆಂಡ್ ನಡುವಿನ ವಿಶ್ವಕಪ್‌ ಪಂದ್ಯ ಮಳೆಯಿಂದ ನಿಲುಗಡೆಯಾಗಿದ್ದು, ಬುಧವಾರ ಮುಂದುವರೆದಿತ್ತು. ಈ ವೇಳೆ ಜಡೇಜಾ ಅದ್ಭುತ ಫೀಲ್ಡಿಂಗ್, ಕಿವೀಸ್ ಸ್ಫೋಟಕ ಬ್ಯಾಟ್ಸ್ಮನ್ ರಾಸ್ ಟೇಲರ್ ರನ್ ಔಟ್‌ಗೆ ಕಾರಣವಾಗಿತ್ತು.

ಭಾರತ vs ನ್ಯೂಜಿಲೆಂಡ್, ಸೆ.ಫೈನಲ್, ದಿನ 2, ಬುಧವಾರ (ಜುಲೈ 10), Live ಸ್ಕೋರ್‌ಕಾರ್ಡ್

1
43689

ಕೀವೀಸ್ ಇನ್ನಿಂಗ್ಸ್‌ನ 48ನೇ ಓವರ್‌ನಲ್ಲಿ ಸ್ಟ್ರೈಕ್‌ನಲ್ಲಿದ್ದ ರಾಸ್ ಟೇಲರ್ ಬ್ಯಾಟ್ ಬೀಸಿ, ಕದಿಯಲು ಯತ್ನಿಸಿದರು. ಆಗ ಚೆಂಡು ಕೈಗೆತ್ತಿಕೊಂಡ ಜಡೇಜಾ ಮಿಂಚಿನ ವೇಗದಲ್ಲಿ ಸ್ಟ್ರೈಕರ್ ಇದ್ದ ವಿಕೆಟ್‌ನತ್ತ ಚೆಂಡು ಎಸೆದರು. ಚೆಂಡು ನೇರವಾಗಿ ವಿಕೆಟ್‌ಗೆ ತಾಗಿತು. ಟೇಲರ್ 74 ರನ್ನಿಗೆ ಪೆವಿಲಿಯನ್‌ನತ್ತ ನಡೆದರು.

ರಾಯುಡು ಮುಂದಿರಿಸಿ ಧೋನಿಗೆ ಜರಿದ ಯುವರಾಜ್‌ ಸಿಂಗ್‌ ತಂದೆರಾಯುಡು ಮುಂದಿರಿಸಿ ಧೋನಿಗೆ ಜರಿದ ಯುವರಾಜ್‌ ಸಿಂಗ್‌ ತಂದೆ

ಅದಾಗಿ ಮುಂದಿನ ಓವರ್‌ ಅಂದರೆ ಸರಿಯಾಗಿ 48.1ನೇ ಓವರ್‌ನಲ್ಲಿ ಭುವನೇಶ್ವರ್ ಎಸೆತಕ್ಕೆ ನ್ಯೂಜಿಲೆಂಡ್ ಬ್ಯಾಟ್ಸ್ಮನ್ ಟಾಮ್ ಲ್ಯಾಥಮ್ ಬ್ಯಾಟ್ ತಾಗಿದ ಚೆಂಡು ಜಡೇಜಾ ಇದ್ದೆಡೆ ಚಿಮ್ಮಿತು. ಮಿಡ್ ಆನ್‌ನಲ್ಲಿ ನಿಂತಿದ್ದ ಜಡೇಜಾ ಮಿಂಚಿನ ವೇಗದಲ್ಲಿ ಜಿಗಿದು ಕ್ಯಾಚ್ ಮಾಡಿದ್ದರು. ಲ್ಯಾಥಮ್ ಕೂಡ ಕೇವಲ 10 ರನ್‌ಗೆ ನಿರ್ಗಮಿಸಬೇಕಾಯ್ತು.

ಈ ಫೀಲ್ಡಿಂಗ್ ಸಾಧನೆ ಮೂಲಕ ಜಡೇಜಾ 2 ಪಂದ್ಯಗಳಲ್ಲಿ ಒಟ್ಟು 41 ರನ್ ಉಳಿಸಿದ ಅಪರೂಪದ ದಾಖಲೆ ಕಾರಣರಾಗಿದ್ದಾರೆ. ಆಲ್ ರೌಂಡರ್ ಜಡೇಜಾ ಇನ್ನರ್ ರಿಂಗ್‌ನಲ್ಲಿ 24, ಔಟ್‌ಫೀಲ್ಡ್‌ನಲ್ಲಿ 17 ರನ್ ಉಳಿಸಿದಂತಾಗಿದೆ. ಈ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ 9 ಪಂದ್ಯಗಳಲ್ಲಿ 34 ರನ್ ಉಳಿಸಿದ ದಾಖಲೆ ಹೊಂದಿದ್ದಾರೆ.

ಜಡೇಜಾ ಸೂಪರ್ ಫೀಲ್ಡಿಂಗ್ ನೆರವಿನಿಂದ ಭಾರತ ಬುಧವಾರ ನ್ಯೂಜಿಲೆಂಡ್ ಅನ್ನು 239 ರನ್‌ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. 50 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ ಕಿವೀಸ್ ಇನ್ನಿಂಗ್ಸ್ ಮುಗಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭುವನೇಶ್ವರ್ ಕುಮಾರ್ 43 ರನ್‌ಗೆ 3 ವಿಕೆಟ್ ಪಡೆದು ಮಿಂಚಿದ್ದರು.

Story first published: Wednesday, July 10, 2019, 17:18 [IST]
Other articles published on Jul 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X