ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ವಿಶ್ವಕಪ್‌ನಲ್ಲಿ ಸರಣಿಶ್ರೇಷ್ಠ ಯಾರೆಂದು ಊಹಿಸಿದ ಯುವರಾಜ್ ಸಿಂಗ್

ICC World Cup 2019 : ಈ ವಿಶ್ವಕಪ್ ನ ಸರಣಿ ಶ್ರೇಷ್ಠ ಇವನೇ..? | Rohit Sharma | Oneindia Kannada
Cricket World Cup: Yuvraj Singh predicts man of the series of ongoing World Cup

ಲಂಡನ್, ಜುಲೈ 3: ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ 2019ರಲ್ಲಿ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಸರಣಿಶ್ರೇಷ್ಠ ಎನಿಸಲಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಹೇಳಿದ್ದಾರೆ. ಎಜ್‌ಬಾಸ್ಟನ್‌ನಲ್ಲಿ ರೋಹಿತ್ ಶತಕ ಬಾರಿಸಿದ ಬಳಿಕ ಯುವಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಮಂಗಳವಾರ (ಜುಲೈ 3) ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಭಾರತ vs ಬಾಂಗ್ಲಾದೇಶ ವಿಶ್ವಕಪ್ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ 92 ಎಸೆತಗಳಿಗೆ 104 ರನ್ ಬಾರಿಸಿದ್ದರು. ಇದು ಶರ್ಮಾ ಟೂರ್ನಿಯಲ್ಲಿ ಭಾರಿಸಿದ 4ನೇ ಶತಕ ಮತ್ತು ಒಟ್ಟಾರೆ ಏಕದಿನದಲ್ಲಿ ಬಾರಿಸಿದ 26ನೇ ಶತಕ.

ದಾಖಲೆಗಳ ಮೇಲೆ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!ದಾಖಲೆಗಳ ಮೇಲೆ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ!

ಈ ಬಾರಿ ಸರಣಿಶ್ರೇಷ್ಠರೆನಿಸಲು ಶರ್ಮಾಗೆ ಯಾಕೆ ಅವಕಾಶವಿದೆ? ಶರ್ಮಾ ಸ್ಪೆಷಾಲಿಟಿ ಕುರಿತು ಇಲ್ಲೊಂದಿಷ್ಟು ಮಾಹಿತಿಯಿದೆ.

2011ರ ಸರಣಿಶ್ರೇಷ್ಠ ಯುವಿ

2011ರ ಸರಣಿಶ್ರೇಷ್ಠ ಯುವಿ

2011ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಟ್ರೋಫಿ ಗೆದ್ದಾಗ ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿ ಜಯಿಸಿದ್ದ ಸಿಕ್ಸರ್ ಕಿಂಗ್, ಆಲ್ ರೌಂಡರ್ ಯುವಿ ಕಳೆದ ತಿಂಗಳೇ ರೋಹಿತ್ ಈ ಬಾರಿ ಸರಣಿಶ್ರೇಷ್ಠರೆನಿಸಲಿದ್ದಾರೆ ಎಂದಿದ್ದರು. ಅದೇ ಮಾತನ್ನು ಯುವಿ ಮತ್ತೀಗ ಪುನರುಚ್ಛರಿಸಿದ್ದಾರೆ. ಯುವರಾಜ್ ಸಿಂಗ್ ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಈ ಬಾರಿ ಐಪಿಎಲ್‌ನಲ್ಲಿ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಎರಡು ಪಂದ್ಯಗಳಲ್ಲಿ ಯುವರಾಜ್ ಆಡಿದ್ದರು.

ಚಾಂಪಿಯನ್‌ಗೆ ಅಭಿನಂದನೆಗಳು

ಚಾಂಪಿಯನ್‌ಗೆ ಅಭಿನಂದನೆಗಳು

ರೋಹಿತ್ ಶತಕ ಬಾರಿಸುತ್ತಲೇ ಟ್ವಿಟರ್‌ನಲ್ಲಿ ಯುವಿ, 'ರೋಹಿತ್ ಶರ್ಮಾ ಅವರು ಅತೀ ಹೆಚ್ಚಿನ ಸಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಜಯಿಸಿದ ಸರಣಿ ಶ್ರೇಷ್ಠ ಪ್ರಶಸ್ತಿಗೆ ಸಮೀಪಿಸುತ್ತಿದ್ದಾರೆ. ನಾಲ್ಕು ಶತಕಗಳನ್ನು ಬಾರಿಸಿದ ಚಾಂಪಿಯನ್ ಹಿಟ್ ಮ್ಯಾನ್‌ಗೆ ಅಭಿನಂದನೆಗಳು' ಎಂದು ಬರೆದುಕೊಂಡಿದ್ದಾರೆ. ರೋಹಿತ್ ಶರ್ಮಾ ಅವರು ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ ವಿರುದ್ಧ ಪಂದ್ಯಶ್ರೇಷ್ಠರೆನಿಸಿದ್ದರು.

500+ ರನ್ ಸಾಧಕ

500+ ರನ್ ಸಾಧಕ

ಸಚಿನ್ ತೆಂಡೂಲ್ಕರ್ ಬಳಿಕ ವಿಶ್ವಕಪ್‌ ಒಂದೇ ಆವೃತ್ತಿಯಲ್ಲಿ 500+ ರನ್ ಗಳಿಸಿದ ಎರಡನೇ ಭಾರತೀಯ ಹೆಗ್ಗಳಿಕೆಗೂ ಶರ್ಮಾ ಪಾತ್ರರಾಗಿದ್ದಾರೆ. ಸಚಿನ್ 2003ರಲ್ಲಿ 673 ರನ್ ಮತ್ತು 1996ರಲ್ಲಿ 523 ರನ್ ಗಳಿಸಿದ್ದರು. ರೋಹಿತ್ ಶರ್ಮಾ ಒಟ್ಟು 7 ಇನ್ನಿಂಗ್ಸ್‌ಗಳಲ್ಲಿ 544 ರನ್ ಕಲೆ ಹಾಕಿದ್ದಾರೆ. ಭಾರತಕ್ಕೆ ಶ್ರೀಲಂಕಾ ವಿರುದ್ಧ ಇನ್ನೊಂದು ಪಂದ್ಯ ಬಾಕಿಯಿದೆ.

ದಾಖಲೆ ಮೇಲೆ ದಾಖಲೆ

ದಾಖಲೆ ಮೇಲೆ ದಾಖಲೆ

ಬಾಂಗ್ಲಾ-ಭಾರತ ಪಂದ್ಯದಲ್ಲಿ ರೋಹಿತ್ ಶರ್ಮಾ ಅನೇಕ ದಾಖಲೆಗಳಿಗೆ ಕಾರಣರಾಗಿದ್ದರು. ಟೂರ್ನಿಯಲ್ಲಿ ಅತ್ಯಧಿಕ ರನ್‌ಗಾಗಿ ಇದೇ ಪಂದ್ಯದಲ್ಲಿ ರೋಹಿತ್, ಆಸೀಸ್ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಅವರನ್ನು ಸರಿಗಟ್ಟಿ ನಂ.1 ಸ್ಥಾನಕ್ಕೇರಿದ್ದರು. ಒಂದೇ ವಿಶ್ವಕಪ್‌ನಲ್ಲಿ 4 ಶತಕ ಬಾರಿಸಿದ ಮೊದಲ ಭಾರತೀಯ, 2019ರಲ್ಲಿ ಏಕದಿನದಲ್ಲಿ 1000 ರನ್ ಇತ್ಯಾದಿ ಮೈಲಿಗಲ್ಲುಗಳನ್ನು ರೋಹಿತ್ ಸಾಧಿಸಿದ್ದಾರೆ. ರಾಹುಲ್ ಮತ್ತು ರೋಹಿತ್ ಅವರ 180 ರನ್ ಜೊತೆಯಾಟವೂ ದಾಖಲೆ ನಿರ್ಮಿಸಿತ್ತು. ಅಂದ್ಹಾಗೆ ಈ ಪಂದ್ಯವನ್ನು ಭಾರತ 28 ರನ್‌ಗಳಿಂದ ಗೆದ್ದುಕೊಂಡಿತು.

Story first published: Wednesday, July 3, 2019, 13:38 [IST]
Other articles published on Jul 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X