ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯಶ್ ಅಭಿನಯದ KGF 2 ಡೈಲಾಗ್ ಹೇಳಿದ ಡೇವಿಡ್ ವಾರ್ನರ್: ವೀಡಿಯೋ ವೈರಲ್

David warner

ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಸಾಕಷ್ಟು ಸಕ್ರಿಯವಾಗಿರುತ್ತಾರೆ. ಅದ್ರಲ್ಲೂ ಇನ್‌ಸ್ಟಾಗ್ರಾಮ್‌ನಲ್ಲಿ ಸಖತ್ ರೀಲ್ಸ್ ಮಾಡುವ ವಾರ್ನರ್, ಮೈದಾನದಲ್ಲಷ್ಟೇ ಅಲ್ಲದೆ, ರೀಲ್ಸ್ ಮೂಲಕವೂ ಅಭಿಮಾನಿಗಳನ್ನ ರಂಜಿಸುವ ಹವ್ಯಾಸ ಹೊಂದಿದ್ದಾರೆ.

ತೆಲುಗು ಚಿತ್ರಗಳ ಸಾಕಷ್ಟು ಚಿತ್ರದ ಡೈಲಾಗ್ ಮತ್ತು ಹಾಡಿಗೆ ರೀಲ್ಸ್‌ ಮಾಡುವ ಮೂಲಕ ಗಮನ ಸೆಳೆದಿರುವ ಡೇವಿಡ್ ವಾರ್ನರ್ ಇದೀಗ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸ್ಯಾಂಡಲ್‌ವುಡ್ ನಟ ಯಶ್ ಅಭಿನಯದ ಕನ್ನಡ ಚಿತ್ರ ಕೆಜಿಎಫ್ 2 ಡೈಲಾಗ್ ಹೇಳುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.

ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಕೆಜಿಎಫ್ 2 ಖ್ಯಾತ ಡೈಲಾಗ್‌ ವೈಲೆನ್ಸ್ ವೈಲೆನ್ಸ್ ಡೈಲಾಗ್‌ಗೆ ನಟನೆ ಮಾಡುವ ರೀಲ್ಸ್ ಮಾಡಿದ್ದು, ಭಾರೀ ಪ್ರಚಾರ ಗಿಟ್ಟಿಸಿದ್ದಾರೆ. ಈಗಾಗಲೇ 6 ಲಕ್ಷಕ್ಕೂ ಅಧಿಕ ಲೈಕ್ಸ್ ಹಾಗೂ ಹತ್ತಾರು ಸಾವಿರ ಕಾಮೆಂಟ್ಸ್‌ಗಳನ್ನ ಅಭಿಮಾನಿಗಳು ಮಾಡಿದ್ದಾರೆ.

ಡೇವಿಡ್‌ ವಾರ್ನರ್‌ರ ಕೆಜಿಎಫ್ 2 ಡೈಲಾಗ್ ಸಖತ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ವಾರ್ನರ್ ನಟನೆ ಕಂಡು ಭೇಷ್ ಎಂದಿದ್ದಾರೆ. ಇನ್ನೂ ಕೆಲ ಅಭಿಮಾನಿಗಳು ಕೆಜಿಎಫ್ ಭಾಗ 3ಕ್ಕೆ ವಾರ್ನರ್ ಹೀರೋ ಆಗ್ಬೇಕು ಎಂದು ಕಾಲೆಳೆದಿದ್ದಾರೆ.

ಪ್ರಸಕ್ತ ಐಪಿಎಲ್‌ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯುವ ವಾರ್ನರ್, ಈ ಮೊದಲು ತಮ್ಮ ಪುತ್ರಿ 'ಇಂಡಿ' ಜೊತೆಗೆ ಸೇರಿಕೊಂಡು ಅಲ್ಲು ಅರ್ಜುನ್‌ರ ಪುಷ್ಪ ಸಿನಿಮಾದ ಖ್ಯಾತ ಡೈಲಾಗ್ ''ಪುಷ್ಪ ಅಂದ್ರೆ ಫ್ಲವರ್ ಅಲ್ಲ, ಫೈರ್'' ಎಂಬ ಮಾಸ್ ಡೈಲಾಗ್ ಹೇಳಿದ್ದ ವೀಡಿಯೋ ವೈರಲ್ ಆಗಿತ್ತು.

Story first published: Saturday, April 16, 2022, 14:52 [IST]
Other articles published on Apr 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X