ಅವಳಿ ಮಕ್ಕಳಿಗೆ ಜನ್ಮ ನೀಡಿದ ಸ್ಕ್ವಾಶ್ ತಾರೆ ದೀಪಿಕಾ ಪಲ್ಲಿಕಲ್: ಸಂತಸ ಹಂಚಿಕೊಂಡ ಪತಿ ದಿನೇಶ್ ಕಾರ್ತಿಕ್

ಭಾರತದ ಸ್ಟಾರ್ ಕ್ರೀಡಾ ದಂಪತಿ ದೀಪಿಕಾ ಪಲ್ಲಿಕಲ್ ಹಾಗೂ ದಿನೇಶ್ ಕಾರ್ತಿಕ್ ಜೋಡಿ ಅವಳಿ ಮಕ್ಕಳ ಹೆತ್ತವರಾದ ಸಂಭ್ರಮದಲ್ಲಿದ್ದಾರೆ. ಭಾರತದ ಹಿರಿಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. ಪತ್ನಿ ದೀಪಿಕಾ ಪಲ್ಲಿಕಲ್ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ದಿನೇಶ್ ಕಾರ್ತಿಕ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ದಿನೇಶ್ ಕಾರ್ತಿಕ್ ಟಿ20 ವಿಶ್ವಕಪ್‌ನಲ್ಲಿ ವೀಕ್ಷಕ ವಿವರಣೆಕಾರನಾಗಿ ಯುಎಇಗೆ ತೆರಳಿದ್ದರು. ಇದೀಗ ಮಾಡಿರುವ ಟ್ವಿಟ್ಟರ್ ಪೋಸ್ಟ್‌ನ ಮೂಲಕ ದಿನೇಶ್ ಕಾರ್ತಿಕ್ ತವರಿಗೆ ಮರಳಿರುವುದು ಸ್ಪಷ್ಟವಾಗಿದೆ. "ನಾವು ಮೂವರು ಈಗ ಐವರಾಗಿದ್ದೇವೆ. ದೀಪಿಕಾ ಹಾಗೂ ನಾನು ಇಬ್ಬರು ಸುಂದರ ಗಂಡು ಮಕ್ಕಳಿಗೆ ಹೆತ್ತವರಾಗಿದ್ದೇವೆ. ಕಬೀರ್ ಪಲ್ಲಿಕಲ್ ಕಾರ್ತಿಕ್ ಹಾಗೂ ಜಿಯಾನ್ ಪಲ್ಲಿಕಲ್ ಕಾರ್ತಿಕ್. ನಾವು ಇದಕ್ಕಿಂತ ಸಂತೋಷವಾಗಿರಲು ಸಾಧ್ಯವಿಲ್ಲ" ಎಂದು ಟ್ವೀಟ್‌ನಲ್ಲಿ ದಿನೇಶ್ ಕಾರ್ತಿಕ್ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

'ವಿಷಯ ತಿಳಿಯದೇ ಮಾತನಾಡಬೇಡಿ'; ಮಂಡಿಯೂರಲು ನಿರಾಕರಿಸಿದ್ದರ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ಡಿ ಕಾಕ್'ವಿಷಯ ತಿಳಿಯದೇ ಮಾತನಾಡಬೇಡಿ'; ಮಂಡಿಯೂರಲು ನಿರಾಕರಿಸಿದ್ದರ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ಡಿ ಕಾಕ್

ದೀಪಿಕಾ ಪಲ್ಲಿಕಲ್ ಹಾಗೂ ದಿನೇಶ್ ಕಾರ್ತಿಕ್ 2013ರಲ್ಲಿ ಮದುವೆಯಾಗಿದ್ದರು. ದೇಶದ ಪ್ರಮುಖ ಸ್ಕ್ವಾಶ್ ಆಟಗಾರ್ತಿಯಾಗಿರುವ ದೀಪಿಕಾ ಪಲ್ಲಿಕಲ್ ಕ್ರೀಡಾ ಲೋಕದಲ್ಲಿ ಹಲವು ಸಾಧನೆ ಮಾಡಿ ಮಿಂಚುತ್ತಿದ್ದಾರೆ. 2006ರಲ್ಲಿ ವೃತ್ತಿಪರ ಸ್ಕ್ವಾಶ್ ಆಟಗಾರ್ತಿಯಾಗಿ ಪದಾರ್ಪಣೆ ಮಾಡಿದ ದೀಪಿಕಾ ಪ್ರೊಫೆಶನಲ್ ಸ್ಕ್ವಾಶ್ ಅಸೋಸಿಯೇಶನ್‌(ಪಿಎಸ್‌ಎ)ನಲ್ಲಿ ಟಾಪ್ 10ನಲ್ಲಿ ಸ್ಥಾನ ಪಡೆದ ಮೊದಲ ಭಾರತೀಯ ಮಹಿಳಾ ಸಕ್ವಾಶ್ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ದಿನೇಶ್ ಕಾರ್ತಿಕ್ ಇತ್ತೀಚೆಗಷ್ಟೇ ಅಂತ್ಯವಾದ ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಫೈನಲ್ ಪಂದ್ಯದಲ್ಲಿ ಕೊನೆಯದಾಗಿ ಆಡಿದ್ದರು. ಇನ್ನು ದಿನೇಶ್ ಕಾರ್ತಿಕ್ ಇತ್ತೀಚೆಗೆ ಕಾಮೆಂಟೇಟರ್ ಆಗಿಯೂ ಖ್ಯಾತರಾಗಿದ್ದಾರೆ.

ದಿನೇಶ್ ಕಾರ್ತಿಕ್ 2019ರ ನಂತರ ಭಾರತ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದಾರೆ. ಈಗ ಐಪಿಎಲ್‌ನಲ್ಲಿ ಸಕ್ರಿಯವಾಗಿರುವ ದಿನೇಶ್ ಕಾರ್ತಿಕ್ ಕಾಮೆಂಟೇಟರ್ ಆಗಿಯೂ ಗಮನ ಸೆಳೆದಿದ್ದಾರೆ. ಕಳೆದ ಜೂನ್ ತಿಂಗಳಿನಲ್ಲಿ ಯುಕೆ ಪ್ರವಾಸದಲ್ಲಿ ಭಾರತ ಭಾಗವಹಿಸಿದ್ದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಹಾಗೂ ದಿ ಹಂಡ್ರೆಡ್ ಟೂರ್ನಿಯಲ್ಲಿ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿಯೂ ಕ್ರಿಕೆಟ್ ವಿಶ್ಲೇಷಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಇದೀಗ ತವರಿಗೆ ಮರಳಿರುವ ದಿನೇಶ್ ಕಾರ್ತಿಕ್ ಮಡದಿ ಹಾಗೂ ಅವಳಿ ಮಕ್ಕಳೊಂದಿಗೆ ಉತ್ತಮ ಕಾಲ ಕಳೆಯಲಿದ್ದಾರೆ.

ಕನ್ನಡಿಗ KL ರಾಹುಲ್ ಗೆ ಬಿಗ್ ಶಾಕ್ ಕೊಟ್ಟ ಪಂಜಾಬ್ ಟೀಂನ ಮಾಲೀಕ | Oneindia Kannada

ಇನ್ನು ದೀಪಿಕಾ ಪಲ್ಲಿಕಲ್ ಮುಂದಿನ ವರ್ಷ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಸಾಧ್ಯತೆಯಿದೆ.

For Quick Alerts
ALLOW NOTIFICATIONS
For Daily Alerts
Story first published: Thursday, October 28, 2021, 21:23 [IST]
Other articles published on Oct 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X