ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊರೊನಾ: ಪ್ರಧಾನಿ ಮೋದಿ ನಡೆಯ ಪರ್ಫೆಕ್ಟ್ ಭವಿಷ್ಯ ನುಡಿಯುತ್ತಿರುವ ಕ್ರಿಕೆಟ್ ಆಟಗಾರ

ಮಾರಣಾಂತಿಕ ಕೊರೊನಾ ವೈರಸ್ ವಿಶ್ವವನ್ನೇ ದಂಗು ಬಡಿಸುತ್ತಾ ಸಾಗುತ್ತಿದೆ. ಐಪಿಎಲ್ ಸೇರಿದಂತೆ ಜಗತ್ತಿನ ಎಲ್ಲಾ ಕ್ರೀಡೆಗಳು ಈಗಾಗಲೇ ಮುಂದಕ್ಕೆ ಹೋಗಿವೆ.

ಈ ವೈರಸ್ ಇನ್ನೆಷ್ಟು ದಿನ ವಿಶ್ವವನ್ನು ಕಾಡಲಿದೆ ಎನ್ನುವ ವಿಚಾರದಲ್ಲಿ ಹಲವು ಜ್ಯೋತಿಷಿಗಳು, ತರಹೇವಾರಿ ಭವಿಷ್ಯವನ್ನು ನುಡಿದಿದ್ದಾರೆ. ಕೆಲವರು ಏಪ್ರಿಲ್ ಅಂತ್ಯದಲ್ಲಿ, ಇನ್ನು ಕೆಲವರು ಮೇ ಅಂತ್ಯದಲ್ಲಿ ಇದರಿಂದ ಮುಕ್ತಿ ಸಿಗಲಿದೆ ಎಂದು ಹೇಳಿದ್ದಾರೆ.

ಐಪಿಎಲ್ 2020ರ ಆವೃತ್ತಿಯಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಆಡಲ್ಲ!ಐಪಿಎಲ್ 2020ರ ಆವೃತ್ತಿಯಲ್ಲಿ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಆಡಲ್ಲ!

ಈ ನಡುವೆ, ಇಂಗ್ಲೆಂಡ್ ಕ್ರಿಕೆಟ್ ಆಟಗಾರನೊಬ್ಬ ಹಲವು ವರ್ಷಗಳ ಹಿಂದೆ ಮಾಡಿರುವ ಟ್ವೀಟ್ ಭಾರೀ ಸಂಚಲನ ಮೂಡಿಸುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ, ಪ್ರಕಟಿಸಿದ ಲಾಕ್ ಡೌನ್ ಬಗ್ಗೆ ಈ ಕ್ರಿಕೆಟಿಗ ಹಿಂದೆನೇ ಅದೇ ಅರ್ಥ ಬರುವ ರೀತಿಯಲ್ಲಿ ಟ್ವೀಟ್ ಮಾಡಿದ್ದ.

ಕೊರೊನಾ ವಿಚಾರದಲ್ಲೂ ಈ ಬ್ರಿಟಿಷ್ ಆಟಗಾರ ಹಲವು ವರ್ಷಗಳ ಹಿಂದೆ ಟ್ವೀಟ್ ಮೂಲಕ ತಿಳಿಸಿದ್ದ. ಬರುವ ಭಾನುವಾರ (ಏ 5) ದೀಪ ಹಚ್ಚಿ ಎಂದು ಮೋದಿ ಕರೆ ನೀಡಿದ ನಂತರ, ಈ ಆಟಗಾರನ ಹಿಂದಿನ ಟ್ವೀಟ್ ಮತ್ತೆ ಚರ್ಚೆಗೆ ಕಾರಣವಾಗಿದೆ. ಯಾರೀ ಆಟಗಾರ?

ವಾಸಿಮ್ ಜಾಫರ್ ವಿಶ್ವಶ್ರೇಷ್ಠ ಏಕದಿನ ತಂಡದಲ್ಲಿ ನಾಲ್ವರು ಭಾರತೀಯರುವಾಸಿಮ್ ಜಾಫರ್ ವಿಶ್ವಶ್ರೇಷ್ಠ ಏಕದಿನ ತಂಡದಲ್ಲಿ ನಾಲ್ವರು ಭಾರತೀಯರು

ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಜೋಫ್ರಾ ಆರ್ಚರ್

ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಜೋಫ್ರಾ ಆರ್ಚರ್

1995ರಲ್ಲಿ ಬ್ರಿಡ್ಜ್ ಟೌನ್, ಬಾರ್ಬಡೋಸ್ ನಲ್ಲಿ ಜನಿಸಿ, ಇಂಗ್ಲೆಂಡ್ ಪರವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ಆಡುತ್ತಿರುವ ಜೋಫ್ರಾ ಆರ್ಚರ್, ಇಂಗ್ಲೆಂಡ್ ಕೌಂಟಿಯಲ್ಲಿ ಸಸೆಕ್ಸ್ ತಂಡದ ಪರವಾಗಿ ಆಡುತ್ತಿದ್ದಾನೆ. ಇನ್ನು ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರವಾಗಿ ಆಡಬೇಕಾಗಿತ್ತು. ಆದರೆ, ಆತ ಗಾಯಗೊಂಡಿರುವುದರಿಂದ ಆರ್ಚರ್ ಐಪಿಎಲ್ ಆಡುತ್ತಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಹೇಳಿತ್ತು.

ಮೂರು ವಾರ ಮನೆಯಲ್ಲಿರುವುದು ಸಾಲುವುದಿಲ್ಲವೇ

ಮೂರು ವಾರ ಮನೆಯಲ್ಲಿರುವುದು ಸಾಲುವುದಿಲ್ಲವೇ

ಪ್ರಧಾನಿ ಮೋದಿ ಮಾರ್ಚ್ 23ರಂದು ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ, ದೇಶಾದ್ಯಂತ ಮೂರು ವಾರಗಳ ಲಾಕ್ ಡೌನ್ ಅನ್ನು ಘೋಷಿಸಿದ್ದರು. ಅಕ್ಟೋಬರ್ 23, 2017ರಂದು ಟ್ವೀಟ್ ಮಾಡಿದ್ದ ಜೋಫ್ರಾ ಆರ್ಚರ್, "ಮೂರು ವಾರ ಮನೆಯಲ್ಲಿರುವುದು ಸಾಲುವುದಿಲ್ಲವೇ" ಎಂದು ಟ್ವೀಟ್ ಮಾಡಿದ್ದ.

ಮುಂದೊಂದು ದಿನ ಎದುರಾಗಲಿದೆ

ಮುಂದೊಂದು ದಿನ ಎದುರಾಗಲಿದೆ

ಎಲ್ಲಾ ಕ್ರೀಡಾಪಟುಗಳು ಮನೆಯಲ್ಲೆ ಕಾಲ ಕಳೆಯಬೇಕಾಗುತ್ತದೆ ಎನ್ನುವ ಅರ್ಥ ಬರುವ ರೀತಿಯಲ್ಲಿ ಆಗಸ್ಟ್ 20, 2014ಕ್ಕೆ ಟ್ವೀಟ್ ಮಾಡಿದ ಜೋಫ್ರಾ ಆರ್ಚರ್, "ಯಾರಿಗೂ ಯಾವ ಜಾಗಕ್ಕೂ ಓಡಲಾಗದಂತಹ ಪರಿಸ್ಥಿತಿ ಮುಂದೊಂದು ದಿನ ಎದುರಾಗಲಿದೆ" ಎಂದು ಟ್ವೀಟ್ ಮಾಡಿದ್ದ.

ಲೈಟ್ ಆನ್ ಮಾಡಿ, 9 ರಿಂದ 9

ಲೈಟ್ ಆನ್ ಮಾಡಿ, 9 ರಿಂದ 9

ಇದಾದ ನಂತರ, ಮಾರ್ಚ್ 2014ರ ವಿವಿಧ ದಿನಾಂಕಗಳಲ್ಲಿ ಟ್ವೀಟ್ ಮಾಡಿರುವ ಜೋಫ್ರಾ ಆರ್ಚರ್, "ಲೈಟ್ ಆನ್ ಮಾಡಿ, 9 ರಿಂದ 9, ಫ್ಲ್ಯಾಶ್ ಲೈಟ್ ನಲ್ಲಿ ಅವಳಿಗಾಗಿ ಕಾಯುತ್ತಿರುತ್ತೇನೆ" ಎನ್ನುವ ಟ್ವೀಟ್ ಅನ್ನು ಜೋಫ್ರಾ ಆರ್ಚರ್ ಮಾಡಿದ್ದಾನೆ. ಇದು, ಮೋದಿಯವರ ಭಾನುವಾರದ ಕರೆಗೆ ಹೋಲಿಕೆ ಮಾಡಲಾಗುತ್ತಿದೆ.

Story first published: Saturday, April 4, 2020, 17:18 [IST]
Other articles published on Apr 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X