ಗೆಳತಿಗೆ ಸ್ಪೆಷಲ್ ವಿಶ್
ನವೆಂಬರ್ 5ರಂದು ನಟಿ ಅತಿಯಾ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮ. ಗೆಳತಿ, ರೂಮರ್ಸ್ ಗರ್ಲ್ ಫ್ರೆಂಡ್ ಅತಿಯಾ ಹುಟ್ಟುಹಬ್ಬಕ್ಕೆ ರಾಹುಲ್ ವಿಶೇಷವಾಗಿ ಶುಭಕೋರಿ ಮತ್ತೆ ಸುದ್ದಿಯಾಗಿದ್ದಾರೆ. ಕೇವಲ ವಿಶ್ ಮಾಡಿದ್ದು ಮಾತ್ರವಲ್ಲದೆ, ಇಬ್ಬರ ರೋಮ್ಯಾಂಟಿಕ್ ಫೋಟೋವನ್ನು ಶೇರ್ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿ ಕೋತಿಯ ಇಮೋಜಿ ಹಾಕಿದ್ದಾರೆ.
ಇಬ್ಬರೂ ಜೊತೆಗಿರುವ ಫೋಟೋ
ಈ ಫೋಟೋ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಒಂದು ಕೆಫೆಯೊಂದರಲ್ಲಿ ಕುಳಿತಿರುವ ಫೋಟೋ ಇದಾಗಿದ್ದು, ಇಬ್ಬರು ಒಬ್ಬರಿಗೊಬ್ಬರು ನೋಡಿಕೊಂಡು ನಾಚಿಕೊಳ್ಳುತ್ತಿರುವ ಪೋಸ್ ಇದೆ. ಈ ಫೋಟೋ ಶೇರ್ ಮಾಡಿರುವ ಉದ್ದೇಶ ಇಬ್ಬರ ಲವ್ ರಿಲೇಶನ್ ಶಿಫ್ ಬಹಿರಂಗಗೊಳಿಸುವುದಕ್ಕಾಗಿಯೆ ಈ ರೋಮ್ಯಾಂಟಿಕ್ ಫೋಟೋ ಶೇರ್ ಮಾಡಿದ್ದಾರಾ ಎನ್ನುವ ಚರ್ಚೆ ಜೋರಾಗಿ ನಡೆಯುತ್ತಿದೆ.
ಗಾಳಿ ಸುದ್ದಿಗೆ ರೆಕ್ಕೆ ಪುಕ್ಕ
ಇಬ್ಬರು ಡೆಟಿಂಗ್ ನಲ್ಲಿ ಇದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದರು ಬಹಿರಂಗವಾಗಿ ಎಲ್ಲಿಯೂ ಫೋಟೋವನ್ನು ಶೇರ್ ಮಾಡಿದ್ದಾಗಲಿ, ಅಥವಾ ಒಬ್ಬರ ಬಗ್ಗೆ ಮತ್ತೊಬ್ಬರು ಮಾತನಾಡಿದ್ದಾಗಲಿ ಇರಲಿಲ್ಲ. ಆದರಿವತ್ತು ರೋಮ್ಯಾಂಟಿಕ್ ಫೋಟೋ ಹಂಚಿಕೊಳ್ಳುವ ಮೂಲಕ ಹರಿದಾಡುತ್ತಿದ್ದ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದಾಗೆ ಆಗಿದೆ.
ಬಾಲಿವುಡ್ ಮಿಂಚು ಅತಿಯಾ
ಅತಿಯಾ ಹೀರೋ ಚಿತ್ರದ ಮೂಲಕ 2015ರಲ್ಲಿ ಬಾಲಿವುಡ್ ಗೆ ಪ್ರವೇಶ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಹೆಚ್ಚು ಮಿಂಚದಿದ್ದರು ಅತಿಯಾ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಅತಿಯಾ ಅಭಿನಯದ ಮೋತಿಚೂರ್ ಚಕ್ನಾಚೂರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಕೆಎಲ್ ರಾಹುಲ್, ಸದ್ಯ ನಡೆಯುತ್ತಿರುವ ಬಾಂಗ್ಲಾ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿದ್ದಾರೆ.