ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟರ್ ಮನೋಜ್ ತಿವಾರಿಗೆ ಒಲಿಂಪಿಕ್ಸ್‌ ಶೂಟರ್ ಆಗುವಾಸೆ!

Cricketer Manoj Tiwary wants to shoot for India at Olympics

ಮುಂಬೈ, ಏಪ್ರಿಲ್ 30: ರಣಜಿಯಲ್ಲಿ ಬೆಂಗಾಲ್‌ ಪರ ಆಡುವ, ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್ ಮನೋಜ್ ತಿವಾರಿಗೆ ಒಲಿಂಪಿಕ್ಸ್‌ನಲ್ಲಿ ಶೂಟಿಂಗ್‌ನಲ್ಲಿ ಸ್ಪರ್ಧಿಸಿ ಪದಕ ಗೆಲ್ಲುವಾಸೆಯಿದೆ. ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ತಾನು ಶೂಟಿಂಗ್‌ನಲ್ಲಿ ಮುಂದುವರೆಯಲು ಬಯಸಿರುವುದಾಗಿ ತಿವಾರಿ ಹೇಳಿಕೊಂಡಿದ್ದಾರೆ.

ಕೈ ಬೆರಳು ಕಳೆದುಕೊಂಡ ಭಾವುಕ ಕ್ಷಣ ಸ್ಮರಿಸಿದ ಪಾರ್ಥಿವ್ ಪಟೇಲ್!ಕೈ ಬೆರಳು ಕಳೆದುಕೊಂಡ ಭಾವುಕ ಕ್ಷಣ ಸ್ಮರಿಸಿದ ಪಾರ್ಥಿವ್ ಪಟೇಲ್!

ಕೌ ಕಾರ್ನರ್ ಕ್ರಾನಿಕಲ್ಸ್‌ ಜೊತೆ ಮಾಡಿರುವ ಮನೋಜ್ ತಿವಾರಿ, ಕ್ರಿಕೆಟ್ ಬಿಟ್ಟ ಬಳಿಕ ತನಗೆ 10 ಮೀಟರ್ ಏರ್ ರೈಫಲ್‌ನಲ್ಲಿ ಮುಂದುವರೆಯಲು ಬಯಕೆಯಿದೆ ಎಂದಿದ್ದಾರೆ. 34ರ ಹರೆಯದ ತಿವಾರಿ 2004-05ರಿಂದಲೂ ಬೆಂಗಾಲ್ ಪ್ರತಿನಿಧಿಸುತ್ತಿದ್ದಾರೆ. ಅಲ್ಲದೆ, 12 ಏಕದಿನ ಪಂದ್ಯಗಳಲ್ಲಿ, 3 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತ ಪ್ರತಿನಿಧಿಸಿದ್ದಾರೆ.

ಸಚಿನ್ ನಾಟೌಟ್ ತೀರ್ಪು ಈಗಲೂ ನನ್ನನ್ನು ಡಿಸ್ಟರ್ಬ್ ಮಾಡುತ್ತಿದೆ: ಅಜ್ಮಲ್ಸಚಿನ್ ನಾಟೌಟ್ ತೀರ್ಪು ಈಗಲೂ ನನ್ನನ್ನು ಡಿಸ್ಟರ್ಬ್ ಮಾಡುತ್ತಿದೆ: ಅಜ್ಮಲ್

'ಮುಂದೊಂದು ದಿನ ನೀವು ನನ್ನನ್ನು 10 ಮೀಟರ್ ಏರ್ ರೈಫಲ್ ಶೂಟಿಂಗ್‌ನಲ್ಲಿ ನೋಡಬಹುದು. ಶೂಟಿಂಗ್‌ನಲ್ಲಿ ನಾನು ಒಲಿಂಪಿಕ್ಸ್‌ಗೂ ಹೋಗಬಹುದು. ನಾನೇನಾದರೂ ಮಾಡಬೇಕು. ಆದರೆ ಒಬ್ಬ ವ್ಯಕ್ತಿಗೆ ವೈಯಕ್ತಿಕ ಜವಾಬ್ದಾರಿಗಳಿರುತ್ತವೆ. ಆದರೆ ನನ್ನ ಬ್ಯುಸಿ ದಿನಚರಿಯ ಮಧ್ಯೆ 10 ಮೀ. ಏರ್ ರೈಫಲ್‌ ಶೂಟಿಂಗ್‌ಗೆ ಸಮಯ ಹೊಂದಿಸಲು ಪ್ರಯತ್ನಿಸುತ್ತೇನೆ,' ಎಂದು ತಿವಾರಿ ಹೇಳಿಕೊಂಡಿದ್ದಾರೆ.

'ಆತ ಕೊರೊನಾಗಿಂತ ಕೆಟ್ಟವ': ರಾಮ್‌ನರೇಶ್‌ ಮೇಲೆ ಕ್ರಿಸ್ ಗೇಲ್ ಕಿಡಿ!'ಆತ ಕೊರೊನಾಗಿಂತ ಕೆಟ್ಟವ': ರಾಮ್‌ನರೇಶ್‌ ಮೇಲೆ ಕ್ರಿಸ್ ಗೇಲ್ ಕಿಡಿ!

'ನನ್ನಷ್ಟಕ್ಕೆ ನಾನು ಬೇರೆ ಕ್ರೀಡೆಗಳನ್ನೂ ಆಡಲು ಬಯಸಿದ್ದೇನೆ. ನನಗೆ ನನ್ನ 100 ಶೇ. ದೈಹಿಕ ಫಿಟ್ನೆಸ್ ಬಳಸಬೇಕಾದ ಅಗತ್ಯ ಬಾರದ ಕ್ರೀಡೆಯತ್ತ ನಾನು ಗಮನ ಹರಿಸುತ್ತಿದ್ದೇನೆ,' ಎಂದು ತಿವಾರಿ ಹೇಳಿದ್ದಾರೆ. ಕಳೆದ ರಣಜಿ ಸೀಸನ್‌ನಲ್ಲಿ ತಿವಾರಿ, ಬೆಂಗಾಲ್ ಪ್ರತಿನಿಧಿಸಿ ಹೈದರಾಬಾದ್ ವಿರುದ್ಧ ಅಜೇಯ 303 ರನ್ ಬಾರಿಸಿ ಗಮನ ಸೆಳೆದಿದ್ದರು.

Story first published: Thursday, April 30, 2020, 20:26 [IST]
Other articles published on Apr 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X