ಮೊಹಮ್ಮದ್ ಶಮಿಯ ಪುಟ್ಟ ಮಗಳು ಹಿಂದೂ ಬಟ್ಟೆ ತೊಟ್ಟಿದ್ದೇ ತಪ್ಪಾಗಿ ಹೋಯಿತಾ ಇವರಿಗೆ?

Muslim Fanatics Slam Mohammed Shami After He Posts Picture Of His Daughter | Oneindia kannada

ಹಿಂದೂ-ಮುಸ್ಲಿಂ ಭಾವೈಕ್ಯತೆಯ ಹಲವಾರು ನಿದರ್ಶನಗಳು ನಮ್ಮ ಮುಂದೆ ಇರುವಾಗ, ಇಂತಹ ಘಟನೆಗಳು ಎರಡು ಸಮುದಾಯಗಳ ನಡುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಈಗ ಸುದ್ದಿಯಲ್ಲಿದ್ದಾರೆ. ಇದು, ಕ್ರಿಕೆಟ್ ನಿಂದ ಹೊರತಾದ ವಿಚಾರದಲ್ಲಿ ಅವರನ್ನು ಸಂಪ್ರದಾಯಿವಾದಿಗಳು ಕಟುವಾಗಿ ಟೀಕಿಸುತ್ತಿದ್ದಾರೆ.

ಭಾರತ - ನ್ಯೂಜಿಲ್ಯಾಂಡ್ ನಡುವಿನ ಮೂರನೇ ಟಿ20 ಪಂದ್ಯ ಸೂಪರ್ ಓವರ್ ಗೆ ಜಾರಲು ಶಮಿಯ ಕೊನೆಯ ಓವರ್ ಕಾರಣ. ಶಮಿ ತಮ್ಮ instragram ಅಕೌಂಟ್ ನಲ್ಲಿ ಹಾಕಿರುವ ಫೋಟೋ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.

ಕೀವಿಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಆಯ್ಕೆ: ರಾಹುಲ್‌ಗೆ ನಿರಾಸೆ ಕೀವಿಸ್ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಆಯ್ಕೆ: ರಾಹುಲ್‌ಗೆ ನಿರಾಸೆ

ಶಮಿ ತನ್ನ ಮುದ್ದಾದ ಮಗಳಿನ ಫೋಟೋ ಒಂದನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ. ಇದು, ಮುಸ್ಲಿಂ ಸಂಪ್ರದಾಯಿಗಳ ವಿರೋಧಕ್ಕೆ ಕಾರಣವಾಗಿದೆ. ಮುಂದೆ ಓದಿ..

ಶಮಿ ಪತ್ನಿ, ಹಸೀನಾ ಜಹಾನ್

ಶಮಿ ಪತ್ನಿ, ಹಸೀನಾ ಜಹಾನ್

ಮೊಹಮ್ಮದ ಶಮಿಯ ವೈಯಕ್ತಿಕ ಬದುಕು, ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಹಾದಿಬೀದಿ ರಂಪವಾಗಿತ್ತು. ಶಮಿಯಿಂದ ದೂರವಾಗಿ, ತನ್ನ ತಾಯಿಯ ಮನೆಯಲ್ಲಿರುವ ಶಮಿ ಪತ್ನಿ, ಹಸೀನಾ ಜಹಾನ್ ರನ್ನು ಉತ್ತರಪ್ರದೇಶದ ಪೊಲೀಸರು ಬಂಧಿಸಿ, ನಂತರ ಬಿಡುಗಡೆ ಮಾಡಿದ್ದರು.

ಉತ್ತಮ ಫಾರಂನಲ್ಲಿರುವ ಶಮಿ

ಉತ್ತಮ ಫಾರಂನಲ್ಲಿರುವ ಶಮಿ

ಕಳಪೆ ಫಾರಂನಿಂದ ರಾಷ್ಟ್ರೀಯ ತಂಡದಿಂದ ಹೊರಗಿದ್ದ ಶಮಿ, 2018ರಲ್ಲಿ ತಂಡಕ್ಕೆ ವಾಪಸ್ ಆಗಿದ್ದರು. ಇದಾದ ನಂತರ, ಉತ್ತಮ ಫಾರಂನಲ್ಲಿರುವ ಶಮಿ, ಎರಡು ದಿನಗಳ ಕೆಳಗೆ, ತನ್ನ ಪುತ್ರಿ ಐರಾಳ ಫೋಟೋವೊಂದನ್ನು instragram ನಲ್ಲಿ ಹಾಕಿದ್ದರು. ಅದು ಮಗಳು ಪೂಜೆ ಮಾಡುವ ಫೋಟೋ ಆಗಿತ್ತು.

ಲವ್ ಯು ಮಗಳೇ, ಶೀಘ್ರದಲ್ಲೇ ಭೇಟಿಯಾಗುತ್ತೇನೆ

ಲವ್ ಯು ಮಗಳೇ, ಶೀಘ್ರದಲ್ಲೇ ಭೇಟಿಯಾಗುತ್ತೇನೆ

"ತುಂಬಾ ಸುಂದರವಾಗಿ ಕಾಣುತ್ತಿದ್ದೀಯಾ, ಲವ್ ಯು ಮಗಳೇ, ಶೀಘ್ರದಲ್ಲೇ ಭೇಟಿಯಾಗುತ್ತೇನೆ" ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದರು. ಫೋಟೋದಲ್ಲಿ ಶಮಿ ಮಗಳು ಐರಾ, ಹಿಂದೂ ಸಂಪ್ರದಾಯದಂತೆ, ಸೀರೆ ತೊಟ್ಟು, ಕುಂಕುಮ ಇಟ್ಟುಕೊಂಡು, ಕಂಗೊಳಿಸುತ್ತಿತ್ತು. ಈ ಫೋಟೋವನ್ನು ಸುಮಾರು ಲೈಕ್ 193,131 ಜನ ಲೈಕ್ ಮಾಡಿದ್ದಾರೆ.

ಶಮಿ ವಿರುದ್ಧ ಅಸಹ್ಯಕರ ಕಾಮೆಂಟ್​ ಗಳು

ಶಮಿ ವಿರುದ್ಧ ಅಸಹ್ಯಕರ ಕಾಮೆಂಟ್​ ಗಳು

ಈ ಪೋಸ್ಟ್ ಎಷ್ಟು ಮೆಚ್ಚುಗೆಯನ್ನು ಪಡೆದಿದೆಯೋ ಅಷ್ಟೇ ವಿರೋಧ ಮುಸ್ಲಿಂ ಸಂಪ್ರದಾಯವಾದಿಗಳಿಂದ ಎದುರಾಗಿದೆ. ಶಮಿ ವಿರುದ್ಧ ಅಸಹ್ಯಕರ ಕಾಮೆಂಟ್​ ಗಳು ಬಂದು ಬೀಳುತ್ತಿವೆ. ನೀನೊಬ್ಬ ಮುಸ್ಲಿಂ ಅನ್ನೋದನ್ನು ಮರೆಯಬೇಡ ಎನ್ನುವ ಬೆದರಿಕೆಯೂ ಬರುತ್ತಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, February 4, 2020, 20:41 [IST]
Other articles published on Feb 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X